Home latest ವಾಹನ ಚಾಲಕರೇ ಗಮನಿಸಿ | ಅತಿ ವೇಗದ ವಾಹನ ಚಾಲನೆಗೆ ಹೈಕೋರ್ಟ್‌ ನಿಂದ ಕಟ್ಟುನಿಟ್ಟಿನ ಕ್ರಮ...

ವಾಹನ ಚಾಲಕರೇ ಗಮನಿಸಿ | ಅತಿ ವೇಗದ ವಾಹನ ಚಾಲನೆಗೆ ಹೈಕೋರ್ಟ್‌ ನಿಂದ ಕಟ್ಟುನಿಟ್ಟಿನ ಕ್ರಮ ; ಸಾರಿಗೆ ಇಲಾಖೆಗೆ ಸೂಚನೆ

Hindu neighbor gifts plot of land

Hindu neighbour gifts land to Muslim journalist

ಯಾರೆಲ್ಲ ರಸ್ತೆ ನಿಯಮಗಳನ್ನು ಲೆಕ್ಕಿಸದೆ ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಾರೋ ಅಂಥವರಿಗೆ ಓಡಿಸುವ ಚಾಲಕರಿಗೆ ಹೈಕೋರ್ಟ್‌ ಛಾಟಿ ಏಟು ಬೀಸಿದೆ. ಯಾರೆಲ್ಲ ನಿಯಮಗಳನ್ನು ಪಾಲಿಸಲ್ಲವೋ ಅಂಥಹ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಹಾಗೂ ಈ ಮೂಲಕ ಅತಿವೇಗದ ಚಾಲನೆಗೆ ಬ್ರೇಕ್ ಹಾಕಿದೆ ನ್ಯಾಯಾಲಯ. ಈ ನಿಯಮವನ್ನು ಸಾರಿಗೆ ಆಯುಕ್ತ ಎಸ್‌.ಶ್ರೀಜಿತ್‌ಗೆ ಜಸ್ಟೀಸ್‌ ದೇವನ್‌ ರಾಮಚಂದ್ರನ್‌ ನಿರ್ದೇಶನ ನೀಡಿದ್ದಾರೆ.

ಯಾವುದೇ ನಿಯಮ ಉಲ್ಲಂಘನೆ ನಡೆದರೆ ಅದಕ್ಕೆ ಚಾಲಕರೇ ಸಂಪೂರ್ಣ ಜವಾಬ್ದಾರರು. ರಸ್ತೆಯಲ್ಲಿ ಹೆಚ್ಚಿನ ರಕ್ತ ಹರಿಸಲು ಇನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ನಿಯಮದ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು. ಅನಂತರ ಮಾತ್ರವೇ ರಸ್ತೆಯಲ್ಲಿ ವಾಹನಗಳ ಅತಿವೇಗದಲ್ಲಿ ಬದಲಾವಣೆ ಸಾಧ್ಯ ಎಂದು ಕೇರಳ ನ್ಯಾಯಾಲಯ ಹೇಳಿದೆ. ಅಗತ್ಯ ಆದೇಶಗಳು, ಸಕ್ರ್ಯೂಲರ್‌ಗಳನ್ನು ಸಾರಿಗೆ ಆಯುಕ್ತರು ಹೊರಡಿಸಬೇಕು. ರಸ್ತೆಯ ನಿಯಮಗಳ ಕುರಿತು ದೂರುಗಳನ್ನು ತಿಳಿಸಲು ರಾಜ್ಯ ಅಥವಾ ಜಿಲ್ಲಾಮಟ್ಟದಲ್ಲಿ ಟೋಲ್‌ಫ್ರೀ ನಂಬರ್‌ ಆರಂಭಿಸಬೇಕು ಎಂದು ಕೇರಳ ನ್ಯಾಯಾಲಯ ಖಡಕ್ ಆಗಿ ಆದೇಶಿಸಿದೆ.

ಸುರಕ್ಷಿತ ಯಾತ್ರೆಯನ್ನು ಖಾತರಿಪಡಿಸಲು ಕೈಗೊಂಡ ಕ್ರಮಗಳನ್ನು ವಿವರಿಸುವುದಕ್ಕಾಗಿ ಸಾರಿಗೆ ಆಯುಕ್ತರು ಅ.28ರಂದು ಮತ್ತೆ ಹಾಜರಾಗಲು ಹೇಳಲಾಗಿದೆ. ಟೂರಿಸ್ಟ್‌ ಬಸ್‌ಗಳ ಅವ್ಯವಹಾರಗಳನ್ನು ತಡೆಗಟ್ಟಲು ಮೋಟಾರು ವಾಹನ ಇಲಾಖೆ ಆರಂಭಿಸಿದೆ. ರಾತ್ರಿ ಕೂಡಾ ತಪಾಸಣೆಯನ್ನು ಮುಂದುವರಿಸಲು ಸೇಫ್‌ ಕೇರಳ ಎನ್‌ಫೋರ್ಸ್‌ಮೆಂಟ್‌ ವಿಭಾಗಕ್ಕೆ ನಿರ್ದೇಶನ ನೀಡಲಾಗಿದೆ. ಅ. 16ರ ವರೆಗೆ ತಪಾಸಣೆ ಮುಂದುವರಿಯಲಿದೆ.