Home Education KEA ಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ | ವ್ಯಾಸಂಗದ ವಿವರ ಮತ್ತು ಆರ್‌ಡಿ ಸಂಖ್ಯೆ ತಿದ್ದುಪಡಿಗೆ...

KEA ಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ | ವ್ಯಾಸಂಗದ ವಿವರ ಮತ್ತು ಆರ್‌ಡಿ ಸಂಖ್ಯೆ ತಿದ್ದುಪಡಿಗೆ ಅವಕಾಶ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಪರಿಕ್ಷಾ ಪ್ರಾಧಿಕಾರ ಯುಜಿ ಸಿಇಟಿ-2022ರ ವೃತ್ತಿಪರ ಕೋರ್ಸ್‌ಗಳ ಪ್ರವಾಶಾತಿಗೆ ರ್ಯಾಂಕ್ ಪಡೆದ ಅಭ್ಯರ್ಥಿಗಳಿಗೆ, ಮುಖ್ಯ ಮಾಹಿತಿಯೊಂದನ್ನು ನೀಡಿದೆ.
ಸರ್ವರ್ ಸಮಸ್ಯೆಗಳಿಂದಾಗಿ 26-08-2022 ರಂದು ಸಕ್ರಿಯಗೊಳಿಸಲು ನಿಗದಿಪಡಿಸಲಾದ ಆರ್‌ಡಿ ಸಂಖ್ಯೆ ತಿದ್ದುಪಡಿಯನ್ನು ಇದೀಗ ಇಂದಿನಿಂದ ಅಂದರೆ ದಿನಾಂಕ 27-08-2022,ರಾತ್ರಿ 08.00 ರ ನಂತರ ಸಕ್ರಿಯಗೊಳಿಸಲಾಗುವುದು. ಅಭ್ಯರ್ಥಿಗಳು ತಪ್ಪು/ ಅಪೂರ್ಣ ಆರ್‌ಡಿ ಸಂಖ್ಯೆ ಮತ್ತು ತಾಲೂಕು ಮತ್ತು ಜಿಲ್ಲೆಯ ಜೊತೆಗೆ ಅಧ್ಯಯನದ ವಿವರಗಳನ್ನು ತಿದ್ದುಪಡಿ ಮಾಡಬಹುದು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಯುಜಿಸಿಇಟಿ 2022 ಆನ್‌ಲೈನ್ ಅರ್ಜಿಯಲ್ಲಿ ವ್ಯಾಸಂಗದ ವಿವರ ಮತ್ತು ಆರ್‌ಡಿ ಸಂಖ್ಯೆಯನ್ನು ತಿದ್ದುಪಡಿ ಮಾಡಲು ಮತ್ತೊಂದು ಅವಕಾಶ ನೀಡಲಾಗಿದ್ದು, ಇಂದಿನಿಂದ ಅಂದರೆ ದಿನಾಂಕ 27-08 2022, ರಾತ್ರಿ 08.00 ನಂತರ ಲಿಂಕ್ ಅನ್ನು ಸಕ್ರಿಯಗೊಳಿಸಲಾಗುವುದು ಎಂದು ತಿಳಿಸಿದೆ.

ಅಭ್ಯರ್ಥಿಗಳು ಆಯಾ ಜಿಲ್ಲೆ/ ತಾಲುಕೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರ ಕಛೇರಿಯ ಪ್ರೋಗ್ರಾಮ‌ ಮತ್ತು ಡಾಟ್ ಎಂಟ್ರಿ ಆಪರೇಟರ್‌ಗಳೊಂದಿಗೆ ಅವರುಗಳ ಕಛೇರಿಯಲ್ಲಿ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಆನ್‌ಲೈನ್ ಮೂಲಕ ಕೆಇಎ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ.

ಈಗಾಗಲೇ ಕರ್ನಾಟಕ ಪರಿಕ್ಷಾ ಪ್ರಾಧಿಕಾರವು ಯುಜಿ ಸಿಇಟಿ-2022ರ ವೃತ್ತಿಪರ ಕೋರ್ಸ್‌ಗಳ ಪ್ರವಾಶಾತಿಗೆ ರ್ಯಾಂಕ್ ಪಡೆದ ಅಭ್ಯರ್ಥಿಗಳಿಗೆ, ಆನ್‌ಲೈನ್ ಮೂಲಕ ದಾಖಲಾತಿ ಪರಿಶೀಲನೆಯನ್ನು ಆರಂಭಿಸಿದೆ. ದಾಖಲಾತಿ
ಪರಿಶೀಲನಾ ಕಾರ್ಯವು ಪ್ರಗತಿಯಲ್ಲಿದ್ದು, ಸುಮಾರು 1,71,000 ಅಭ್ಯರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಗೆ ಅರ್ಹರರಾಗಿದ್ದಾರೆ.

ಇದಲ್ಲದೆ ಯಾವ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಶ್ರೇಣಿಯನ್ನು ನಿಗದಿಪಡಿಸಲಾಗಿಲ್ಲ, ಅವರು ವೇಳಾಪಟ್ಟಿಯ ಪ್ರಕಾರ ನಿಯೋಜಿಸಲಾದ ಇತರ ಶ್ರೇಣಿಯ ಆಧಾರದ ಮೇಲೆ ದಾಖಲೆ ಪರಿಶೀಲನೆಗೆ ಹಾಜರಾಗಬಹುದು ಎಂದು ತಿಳಿಸಿದೆ.

ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳು ಸಲ್ಲಿಸಬೇಕಾದ
ದಾಖಲೆಗಳು

ಸಿಇಟಿ-2022ಕ್ಕೆ ಭರ್ತಿ ಮಾಡಿ ಅಂತಮವಾಗಿ ಸಲ್ಲಿಸಿರುವ ಪ್ರತಿ
ಸಿಇಟಿ-2022ರ ಮೂಲ ಪ್ರವೇಶ ಪತ್ರ,
ಎಸ್ಎಸ್ಎಲ್‌ಸಿ/ 10 ನೇ ತರಗತಿ ಅಂಕಪಟ್ಟಿ,
ದ್ವಿತೀಯ ಪಿಯುಸಿ / 12 ನೇ ತರಗತಿ ಅಂಕಪಟ್ಟಿ, 1 ರಿಂದ 12ನೇ ತರಗತಿಯವರೆಗೆ ಅಧ್ಯಯನ ಮಾಡಿದ ಏಳು ವರ್ಷದ ವ್ಯಾಸಂಗ ಪ್ರಮಾಣ ಪತ್ರ.
ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ- 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಲ್ಲಿ.
ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ- 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಲ್ಲಿ.
ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ.
ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ.
371 (ಜೆ) ಹೈದರಾಬಾದ್- ಕರ್ನಾಟಕ ಪ್ರದೇಶ ಮೀಸಲಾತಿ ಪ್ರಮಾಣ ಪತ್ರ.
ಸಂಖ್ಯಾಧಿಕ ಕೋಟಾ(supernumerary Quota).