Home News ಕರ್ನಾಟಕ ಕಾರ್ಮಿಕ ಸಂಘದ ದ ಕ ಜಿಲ್ಲಾಧ್ಯಕ್ಷರಾಗಿ ಎಚ್ ಭೀಮರಾವ್ ವಾಷ್ಠರ್ ಅಧಿಕಾರ ಸ್ವೀಕಾರ

ಕರ್ನಾಟಕ ಕಾರ್ಮಿಕ ಸಂಘದ ದ ಕ ಜಿಲ್ಲಾಧ್ಯಕ್ಷರಾಗಿ ಎಚ್ ಭೀಮರಾವ್ ವಾಷ್ಠರ್ ಅಧಿಕಾರ ಸ್ವೀಕಾರ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಕಾರ್ಮಿಕ ಸಂಘ (ರಿ) ಕರ್ನಾಟಕ ರಾಜ್ಯ ಸಂಘಟನೆಯು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿರುವ ಕನ್ನಡ ಭವನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರ ಅಧಿಕಾರ ಹಸ್ತಾಂತರದ ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಮಿಕ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಕೆ ಎಸ್ ವೆಂಕಟಸುಬ್ಬಯ್ಯ ರವರು ಸುಳ್ಯದ ಸಾಹಿತಿ, ಜ್ಯೋತಿಷಿ ಮತ್ತು ಸಂಘಟನಾಕಾರರಾದ ಎಚ್ .ಭೀಮರಾವ್ ವಾಷ್ಠರ್ ರವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಿದರು.

ವಾಷ್ಠರ್ ರವರ ಸೇವಾ ಮನೋಭಾವನೆ ಮತ್ತು ಸಂಘಟನಾತ್ಮಕ ವಿಚಾರವನ್ನು ಮನಗಂಡು ದ ಕ ಜಿಲ್ಲಾಧ್ಯಕ್ಷ ಸ್ಥಾನಮಾನ ನೀಡಿ ಅಧಿಕಾರದ ನೇಮಕಾತಿ ಆದೇಶ ಪತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು .

ಈ ಸಂದರ್ಭದಲ್ಲಿ ಕುಣಿಗಲ್ ಕ್ಷೇತ್ರದ ಮಾನ್ಯ ಜನಪ್ರಿಯ ಶಾಸಕರಾದ ಡಾ. ರಂಗನಾಥ್, ಕಾರ್ಯದರ್ಶಿ ಪರಮಶಿವಯ್ಯ , ಕಾರ್ಯಾಧ್ಯಕ್ಷರಾದ ನರಸಿಂಹಯ್ಯ , ಉಪಾಧ್ಯಕ್ಷರಾದ ಡಿಎಲ್ ಕುಮಾರ್ , ಸಂಚಾಲಕ ನರಸಿಂಹಮೂರ್ತಿ , ವಿಶ್ವನಾಥ್ , ನರಸಿಂಹರಾಜು , ಗಂಗಣ್ಣ , ಈರಣ್ಣ , ನಾಗಣ್ಣ, ಡಿ ಎಲ್ ಕುಮಾರ್ , ಜಯಣ್ಣ , ಶಿವರಾಜ್ , ರಾಯಚೂರು ಜಿಲ್ಲಾಧ್ಯಕ್ಷ ವಿಜಯದಾಸ ನವಲಿ ಇನ್ನಿತರರು ಉಪಸ್ಥಿತರಿದ್ದರು .