Home Jobs SDA : ಕರ್ನಾಟಕ ಹೈಕೋರ್ಟ್ 142 ಎಸ್ ಡಿಎ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟ!

SDA : ಕರ್ನಾಟಕ ಹೈಕೋರ್ಟ್ 142 ಎಸ್ ಡಿಎ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟ!

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಹೈಕೋರ್ಟ್‌ನ 142 ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಕುರಿತಂತೆ, ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿಯನ್ನು ಹೈಕೋರ್ಟ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು.

ಕರ್ನಾಟಕ ಹೈಕೋರ್ಟ್ 2021 ರ ಆಗಸ್ಟ್ 08 ರಂದು 142 (127 ಉಳಿಕೆ ಮೂಲ ವೃಂದ, 15 ಸ್ಥಳೀಯ ವೃಂದದ) ದ್ವಿತೀಯ ದರ್ಜೆ ಸಹಾಯಕರ ಭರ್ತಿಗೆ ನೇರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿತ್ತು. ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಇದೀಗ ಅಭ್ಯರ್ಥಿಗಳ ಮಾಹಿತಿಗೆ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ.

ಆಯ್ಕೆಪಟ್ಟಿ ಚೆಕ್ ಮಾಡುವುದು ಹೇಗೆ?

ಹೈಕೋರ್ಟ್ ವೆಬ್ ವಿಳಾಸ https://karnatakajudiciary.kar.nic.in/ ಭೇಟಿ ನೀಡಿ.
ಅಲ್ಲಿ ಪೇಜ್‌ನ ಬಲಭಾಗದಲ್ಲಿ ‘Notification’ ಎಂದಿರುವಲ್ಲಿ ಗಮನಿಸಿ.
‘Selection list for the post of Second Division Assistant’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
ಹೈಕೋರ್ಟ್‌ ನ ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
ಅಲ್ಲಿ ‘Selection List of the Candidates’ ಎಂದಿರುವಲ್ಲಿ ಕ್ಲಿಕ್ ಮಾಡಿ.
ಆಯ್ಕೆಪಟ್ಟಿ ತೆರೆಯುತ್ತದೆ, ಚೆಕ್ ಮಾಡಿಕೊಳ್ಳಿ.

ಜನ್ಮ ದಿನಾಂಕ ದಾಖಲೆ, ಶೈಕ್ಷಣಿಕ ಅರ್ಹತೆ, ಮೀಸಲಾತಿ ಕೋರಿದ್ದಲ್ಲಿ ದಾಖಲೆ, ಇತರೆ ಅಗತ್ಯ ದಾಖಲೆಗಳನ್ನು ದಿನಾಂಕ 23-07-2022 ರೊಳಗೆ ಹೈಕೋರ್ಟ್ ಎಸ್‌ಡಿಎ ನೇಮಕಾತಿ ವಿಭಾಗಕ್ಕೆ ಸಲ್ಲಿಸಬೇಕು.

ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಅಲ್ಲದೇ ಪೊಲೀಸ್ ವೆರಿಫಿಕೇಶನ್ ರಿಪೋರ್ಟ್, ಮೆಡಿಕಲ್ ಫಿಟ್‌ನೆಸ್ ವರದಿ ಮತ್ತು ಸೇವೆಯಲ್ಲಿದ್ದಲ್ಲಿ ನಾನ್-ಅಬ್ಬೆಕ್ಷನ್ ಸರ್ಟಿಫಿಕೇಶನ್ ಅನ್ನು ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ