Home latest ಹೆಚ್ಚುತ್ತಿದೆ ಹಾಸ್ಟೆಲ್ ನಲ್ಲಿ ಹೆಣ್ಮಕ್ಕಳ ಸ್ನಾನದ ವೀಡಿಯೋ ಚಿತ್ರೀಕರಣ | ಮತ್ತೊಂದು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಸ್ನಾನ...

ಹೆಚ್ಚುತ್ತಿದೆ ಹಾಸ್ಟೆಲ್ ನಲ್ಲಿ ಹೆಣ್ಮಕ್ಕಳ ಸ್ನಾನದ ವೀಡಿಯೋ ಚಿತ್ರೀಕರಣ | ಮತ್ತೊಂದು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವಾಗ ವೀಡಿಯೊ ಶೂಟ್ | ಚಿತ್ರೀಕರಣ ಮಾಡಿದ್ದು ಈತ!!!

Hindu neighbor gifts plot of land

Hindu neighbour gifts land to Muslim journalist

ಕಾನ್ಪುರದ ತುಳಸಿ ನಗರ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ತಂಗಿರುವ ಹಾಸ್ಟೆಲ್‌ನಲ್ಲಿ ಈ ಘಟನೆ ಹುಡುಗಿಯರು ಸ್ನಾನ ಮಾಡುವ ವೀಡಿಯೋವೊಂದು ಶೂಟ್ ಮಾಡಿದ ಘಟನೆಯೊಂದು ನಡೆದಿದೆ. ವಾರಗಳ ಹಿಂದೆ ಚಂಡೀಗಢ ವಿಶ್ವವಿದ್ಯಾಲಯದಲ್ಲಿ (Chandigarh University controversy) ಇದೇ ಪ್ರಕರಣ ನಡೆದಿತ್ತು. ವಿದ್ಯಾರ್ಥಿನಿಯರ ಹಾಸ್ಟೆಲ್‌ನಿಂದ ವೀಡಿಯೊ ಸೋರಿಕೆಯಾಗಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದರು.

ಹುಡುಗಿಯರು ತಾವು ಸ್ನಾನ ಮಾಡುತ್ತಿರುವ ವೀಡಿಯೊ ಶೂಟ್ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ನಾವು, ಸ್ನಾನ ಮಾಡುತ್ತಿರುವಾಗ ತಮ್ಮ ಹಾಸ್ಟೆಲ್ ಸಿಬ್ಬಂದಿ ವೀಡಿಯೊ ಚಿತ್ರೀಕರಿಸಿದ್ದಾರೆ ಎಂದು ಉತ್ತರ ಪ್ರದೇಶದ ಕಾನ್ಪುರದ (Kanpur) ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಆರೋಪದ ಮೇಲೆ ಬಾಲಕಿಯರ ಗುಂಪು ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಪ್ರತಿಭಟನೆ ನಡೆಸಿದೆ. ಈಗ ಕಾನ್ಪುರದ ಖಾಸಗಿ ಹಾಸ್ಟೆಲ್‌ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ವಿದ್ಯಾರ್ಥಿನಿಯರು ಅಶ್ಲೀಲ ವೀಡಿಯೊ ಮಾಡಿದ್ದಾನೆ ಎಂದು ಖಂಡಿಸಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ.

ದೂರಿನ ಪ್ರಕಾರ, ಹಾಸ್ಟೆಲ್ ಸಿಬ್ಬಂದಿ ಹಾಸ್ಟೆಲ್‌ನಲ್ಲಿರುವ ಹುಡುಗಿಯರ ಹಲವಾರು ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾನೆ. ಗುರುವಾರ ಈತ ರಹಸ್ಯವಾಗಿ ಚಿತ್ರೀಕರಣ ಮಾಡುತ್ತಿದ್ದಾಗ, ನೋಡಿದ ಬಾಲಕಿಯೊಬ್ಬಳು ಆತನ ಫೋನ್ ಕಸಿದಿದ್ದಾಳೆ. ಇದರಲ್ಲಿ ಹಲವು ಹೆಣ್ಮಕ್ಕಳ ವೀಡಿಯೋಗಳು ಇರುವುದನ್ನು ನೋಡಿದ ವಿದ್ಯಾರ್ಥಿನಿಯರು ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಬಾಲಕಿಯರಿಂದ ದೂರು ಸ್ವೀಕರಿಸಲಾಗಿದ್ದು,
ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.