Home News ಕಲ್ಮಡ್ಕ : ಡಾ| ಎಂ.ಎನ್.ಆರ್ ಭಾವಚಿತ್ರ ಅನಾವರಣ ,ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಅಭಿನಂದನೆ

ಕಲ್ಮಡ್ಕ : ಡಾ| ಎಂ.ಎನ್.ಆರ್ ಭಾವಚಿತ್ರ ಅನಾವರಣ ,ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಅಭಿನಂದನೆ

Hindu neighbor gifts plot of land

Hindu neighbour gifts land to Muslim journalist

ಸುಳ್ಯ : ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ,ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ’ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರ ಭಾವ ಚಿತ್ರ ಅನಾವರಣ ಮತ್ತು ದ. ಕ.ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾ‌ರ್ ರೈ ಬಾಲ್ಯೊಟ್ಟು ರವರಿಗೆ ಸನ್ಮಾನ ಕಾರ್ಯಕ್ರಮ ಫೆ.19 ರಂದು ನಡೆಯಿತು.

ಸಂಘದ ಅಧ್ಯಕ್ಷ ಉದಯ ಕುಮಾರ್ ಬೆಟ್ಟ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ” ಸಹಕಾರ ಸಂಘಗಳ ಬೆಳವಣಿಗೆಗೆ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರು ಮುಖ್ಯ ಕಾರಣ. ಅವರು ಸಹಕಾರಿ ಸಂಘಗಳಿಗೆ ಬೆನ್ನೆಲುಬಿನಂತಿದ್ದು, ಸಂಘದ ಪ್ರತೀ ಸದಸ್ಯರಿಗೂ ಸೌಲಭ್ಯಗಳು ಸಿಗುವಂತೆ ಮಾಡಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಸ್ಥಾಪಿಸಿರುವ ನವೋದಯ ಸಂಘಗಳಿಂದ ಸಮಾಜದಲ್ಲಿ ವಿಶೇಷ ಅಭಿವೃದ್ಧಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿದ ಶಶಿಕುಮಾ‌ರ್ ರೈ ಬಾಲ್ಯೊಟ್ಟು ಮಾತನಾಡಿ ” ಸಹಕಾರ ಚಳುವಳಿ,ಸಂಘಗಳ ಸ್ಥಾಪಕರು ಮೊಳಹಳ್ಳಿ ಶಿವರಾಯರು. ಬಳಿಕ ಸಹಕಾರ ಕ್ಷೇತ್ರವನ್ನು ವಿಶೇಷ ಅಭಿವೃದ್ಧಿ ಪಡಿಸಿದ ಕೀರ್ತಿ ಅಭಿನವ ಮೊಳ ಹಳ್ಳಿ ಎಂದು ಬಿರುದಾಂಕಿತರಾದ ಡಾ.ಎಂ. ಎನ್ ರಾಜೇಂದ್ರ ಕುಮಾರ್ ರವರಿಗೆ ಸಲ್ಲುತ್ತದೆ. ಹಿಂದೆ ಸಹಕಾರ ಸಂಘಗಳು ಮನೆಗಳಲ್ಲಿ ಆರಂಭ ಗೊಂಡಿತ್ತು. ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರ ಅಧ್ಯಕ್ಷರಾದ ಬಳಿಕ ಅವರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘಗಳು ಇಂದು ಸ್ವಂತ ಕಟ್ಟಡದಲ್ಲಿ ವಿಶೇಷ ಅಭಿವೃದ್ಧಿಯಾಗಿ ಬೆಳೆದು ಸದಸ್ಯರಿಗೆ ಬಹಳಷ್ಟು ಸೇವೆ ನೀಡುತ್ತಿದೆ ಎಂದರು.

ವಲಯ ಮೇಲ್ವಿಚಾರಕ ಪ್ರದೀಪ್ ಕೆ, ಸಂಘದ ಉಪಾಧ್ಯಕ್ಷ ರಾಮ ನಾಯ್ಕ ಉಡುವೆಕೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಂಘದ ವತಿಯಿಂದ ಮರಣ ಸಾಂತ್ವನ ನಿಧಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಬ್ಬಂದಿ ನಾರಾಯಣ ಪ್ರಾರ್ಥಿಸಿದರು. ನಿರ್ದೇಶಕ ಬಾಲಕೃಷ್ಣ ಮೂಲೆಮನೆ ಸ್ವಾಗತಿಸಿದರು. ಉದಯ ಕುಮಾರ್ ಬೆಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ರವಿಕಿರಣ ಎಡಪತ್ಯ ಸನ್ಮಾನಿತರ ಪರಿಚಯ ಮಾಡಿದರು,ಸಂಘದ ಸಿಬ್ಬಂದಿ ಪುನೀತ್ ಮೂಲೆಮನೆ ನಿರೂಪಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವಂದಿಸಿದರು.

ನಿರ್ದೇಶಕರಾದ ಸುಧಾ ಎಸ್.ಭಟ್, ಬಾಲಕೃಷ್ಣ ಮೂಲೆಮನೆ,ಅಶೋಕ್ ಗೋಳ್ತಾಜೆ, ರವಿಕಿರಣ ಎಡಪತ್ಯ, ಹರೀಶ್ ಮಾಳಪ್ಪಮಕ್ಕಿ, ತೃಪ್ತಿ ಯು., ವಿಶ್ವನಾಥ ಬೊಳಿಯೂರು, ಮಹೇಶ್‌ ಅಕ್ರಿಕಟ್ಟೆ, ಗೋಪಾಲ ಪೆರಿಯಪ್ಪು, ಮೀನಾಕ್ಷಿ ಬೊಮ್ಮಟ್ಟಿ, ನವೋದಯ ಸ್ವಸಹಾಯ ಸಂಘಗಳ ಪ್ರೇರಕ ಗಂಗಾಧರ ಪೊಳೆಂಜ,ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು..