Home News ಕಡಬ : ಅಪರಿಚಿತ ಯುವತಿಯೊಂದಿಗೆ ನೈಟ್ ವಿಡೀಯೋ ಚಾಟ್ | ಬಟ್ಟೆ ಬಿಚ್ಚಿದ ಕಡಬದ ಯುವಕನ...

ಕಡಬ : ಅಪರಿಚಿತ ಯುವತಿಯೊಂದಿಗೆ ನೈಟ್ ವಿಡೀಯೋ ಚಾಟ್ | ಬಟ್ಟೆ ಬಿಚ್ಚಿದ ಕಡಬದ ಯುವಕನ ವಿಡಿಯೋ ವೈರಲ್ ಆಗುತ್ತಿದೆ

Hindu neighbor gifts plot of land

Hindu neighbour gifts land to Muslim journalist

ಕಡಬ : ಕಡಬದ ಯುವಕನೊಂದಿಗೆ ಅಪರಿಚಿತ ಯುವತಿಯೊಬ್ಬಳು ರಾತ್ರಿಯ ವಿಡಿಯೋ ಚಾಟ್ ಮಾಡಿ ಅದರ ವಿಡಿಯೋ ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿದ ಕಡಬ ಸಮೀಪದ ಬಿಳಿನೆಲೆಯಲ್ಲಿ ಆಟೋ ಚಾಲಕನಾಗಿರುವ ಯುವಕನಿಗೆ ಯುವತಿಯೋರ್ವಳು ನಗ್ನವಾಗಿ ವೀಡಿಯೋ ಕಾಲ್ ಮಾಡಿದ್ದು, ಈ ಕಡೆಯಿಂದ ಯುವಕನೂ ಬಟ್ಟೆ ಬಿಚ್ಚಿದ್ದಾನೆ.

ರಾತ್ರಿ ಹೊತ್ತು ನಡೆದ ಈ ಸಂಭಾಷಣೆಯ ವೀಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವಕನ ಮಾನ ಹರಾಜಾಗಿದೆ.

ಒಂದು ದಿನ ಮದ್ಯರಾತ್ರಿ ಆಕೆ ಈತನೊಂದಿಗೆ ರಸಕ್ಷಣಗಳ ಬಗ್ಗೆ ಉಸುರಿದ್ದಾಳೆ. ಆತನಿಗೋ ಅದು ಹಿತವೆನಿಸಿತು…ದಿನಾ ಹೀಗೇ ಬಿಸಿ ಬಿಸಿ ಮಾತುಕತೆ ನಡೆದು ಒಂದು ದಿನ ಆಕೆ ಆತನಿಗೆ ‘ ಅದನ್ನು’ ತೋರಿಸಿದ್ದಾಳೆ.

ಈತನೂ ತಾನೇನು ಕಮ್ಮಿ ಅಲ್ಲ ಎಂದು ಬಟ್ಟೆ ಬಿಚ್ಚಿ ಆಕೆಯ ನಂಗನಾಚ್‌ಗೆ ಈತನೂ ಸಾಥ್ ನೀಡಿದ್ದಾನೆ. ಆಕೆಯ ಉದ್ದೇಶವೂ ಇದೇ ಆಗಿದ್ದಿರಬೇಕು. ವಿಡಿಯೋ ಸಂಭಾಷಣೆ, ಸಮಾಲೋಚನೆ ರೆಕಾರ್ಡ್ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ ಆ ವಿಡಿಯೋ ಕಡಬದಲ್ಲಿ ವೈರಲ್ ಆಗಿದ್ದು ಹೇಗೆ ಎಂಬುದು ಈಗ ಉತ್ತರ ಸಿಗದ ರಸ ಪ್ರಶ್ನೆಯಾಗಿದೆ!

ಆತನನ್ನು ರಾತ್ರಿಯ ನಶೆಯಲ್ಲಿ ಮುಳುಗಿಸಿ ಬೋಳಿಸಲು ಆಕೆ ಪ್ಲಾನ್ ಹೂಡಿರುವ ಸಾಧ್ಯತೆ ಇದೆ. ಇಂತಹ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ಜನರು, ‘ ನಮ್ಮ ಸ್ವಂತದ್ದಲ್ಲದ ‘ ವಸ್ತುವಿಗೆ ಆಸೆ ಪಡಲು ಹೋಗಿ ಮೋಸ ಹೋಗುತ್ತಿರುವುದು ಸೋಜಿಗವೇ ಸರಿ !!