Home News Jio 5G recharge plan | ರಿಲಯನ್ಸ್ ಜಿಯೋದಿಂದ ಬಿಡುಗಡೆಯಾಗಿದೆ ಅಗ್ಗದ 5ಜಿ ರಿಚಾರ್ಜ್ ಪ್ಲಾನ್!

Jio 5G recharge plan | ರಿಲಯನ್ಸ್ ಜಿಯೋದಿಂದ ಬಿಡುಗಡೆಯಾಗಿದೆ ಅಗ್ಗದ 5ಜಿ ರಿಚಾರ್ಜ್ ಪ್ಲಾನ್!

Hindu neighbor gifts plot of land

Hindu neighbour gifts land to Muslim journalist

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಉತ್ತಮವಾದ ನೆಟ್ವರ್ಕ್ ನೊಂದಿಗೆ ಅಗ್ಗದ ರಿಚಾರ್ಜ್ ಪ್ಲಾನ್  ಕೂಡ ಜಾರಿಗೊಳಿಸುತ್ತಿದ್ದು, ಇದೀಗ 5ಜಿಬಿಯ ರೀಚಾರ್ಜ್‌ ಪ್ಲ್ಯಾನ್‌ ನ್ನು ಬಿಡುಗಡೆಗೊಳಿಸಿದೆ.

ಈ ಸೇವೆಯ ಮೂಲಕ 6GB ಹೈ-ಸ್ಪೀಡ್ ಇಂಟರ್ನೆಟ್‌ ಲಭ್ಯವಾಗಲಿದೆ. ಉತ್ತಮವಾದ ಆಫರ್ ನೀಡುವುದರ ಮೂಲಕ ಹೊಸ ಪ್ಲಾನ್ ಅನ್ನು ಘೋಷಿಸಿದೆ. ಹಾಗಿದ್ರೆ ಬನ್ನಿ ಜಿಯೋ ಪರಿಚಯಿಸಿದ 5ಜಿ ಸೇವೆಗಳನ್ನು ತಿಳಿಯೋಣ..

ಜಿಯೋ 61 ರೂ. ಪ್ರಿಪೇಯ್ಡ್ ಯೋಜನೆಯು 6GB ಹೈ-ಸ್ಪೀಡ್ 5G ಡೇಟಾವನ್ನು ನೀಡಲಿದ್ದು, ಟೆಲ್ಕೊ ವೆಬ್‌ಸೈಟ್‌ನಲ್ಲಿನ ಪಟ್ಟಿಯ ಪ್ರಕಾರ ಸಕ್ರಿಯ ಯೋಜನೆಯ ಮಾನ್ಯತೆಯನ್ನು ಹೊಂದಿರುತ್ತದೆ. ಈ ಸೇವೆ 119 ರೂ, 149 ರೂ, 179 ರೂ, 199 ರೂ ಹಾಗೂ 209 ರೂ, ಬೆಲೆಯ ಜಿಯೋ ಪ್ಲಾನ್‌ಗಳಿಗೂ ಅನ್ವಯಿಸುತ್ತದೆ.

ಅನಿಯಮಿತ 5G ಡೇಟಾ ಪ್ಯಾಕ್‌ ಜಿಯೋ ಟ್ರೂ 5G ಅನ್ನು ಪ್ರಾರಂಭಿಸಿರುವ ನಗರಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಹಾಗೆಯೇ ಪಟ್ಟಿಯ ಪ್ರಕಾರ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗಿದೆ. ಮತ್ತೊಂದೆಡೆ ಏರ್‌ಟೆಲ್ ಮತ್ತು ವಿ ಕ್ರಮವಾಗಿ 65 ರೂ. ಮತ್ತು 58 ರೂ.ನ ಬೆಲೆಯ ಪ್ಲ್ಯಾನ್‌ನಲ್ಲಿ 4GB ಮತ್ತು 3GB ಡೇಟಾವನ್ನು ನೀಡುತ್ತಿರುವುದು ಗಮನಿಸಬೇಕಾದ ಅಂಶವಾಗಿದೆ.

ಇನ್ನು ಜಿಯೋ ಇತ್ತೀಚೆಗೆ ತನ್ನ 5G ಸೇವೆಯನ್ನು ಭಾರತದಾದ್ಯಂತ 72 ನಗರಗಳಿಗೆ ವಿಸ್ತರಣೆ ಮಾಡಿದ್ದು, ಡಿಸೆಂಬರ್ 2023 ರ ವೇಳೆಗೆ ತನ್ನ 5G ಸ್ವತಂತ್ರ (SA) ನೆಟ್‌ವರ್ಕ್‌ನೊಂದಿಗೆ ಇಡೀ ದೇಶವನ್ನು ಆವರಿಸುವ ಗುರಿಯನ್ನು ಹೊಂದಿದೆ.