Home News Japan: ಸಮುದ್ರದ ನಡುವಿರೋ ಸಣ್ಣ ಕಲ್ಲು ಬಂಡೆ ಉಳಿಸಿಕೊಳ್ಳಲು 4,500 ಕೋಟಿ ಖರ್ಚು ಮಾಡಿದ ಜಪಾನ್...

Japan: ಸಮುದ್ರದ ನಡುವಿರೋ ಸಣ್ಣ ಕಲ್ಲು ಬಂಡೆ ಉಳಿಸಿಕೊಳ್ಳಲು 4,500 ಕೋಟಿ ಖರ್ಚು ಮಾಡಿದ ಜಪಾನ್ – ಅದು ಮುಳುಗಿದರೆ ಏನಾಗುತ್ತೆ?

Hindu neighbor gifts plot of land

Hindu neighbour gifts land to Muslim journalist

 

Japan: ಜಪಾನ್ ದೇಶವು ಸಮುದ್ರದ ಮಧ್ಯದಲ್ಲಿರುವ ಸಣ್ಣ ಬಂಡೆಕಲ್ಲಿಗಾಗಿ ಬರೋಬ್ಬರಿ 4, 500 ಕೋಟಿ ಖರ್ಚು ಮಾಡಿ ಆ ಕಲ್ಲನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹಾಗಾದರೆ ಆ ಕಲ್ಲಿನ ಮಹತ್ವವೇನು? ಅದು ಮುಳುಗಿದರೆ ಏನಾಗುತ್ತದೆ? ಇಲ್ಲಿದೆ ನೋಡಿ ಡೀಟೇಲ್ಸ್

 

ಹೌದು, ಜಪಾನ್ ಕೇವಲ 60 ಚದರ ಮೀಟರ್ ದೊಡ್ಡದಾದ ಅಂದರೆ ನಿಮ್ಮ ಕಾರು ಪಾರ್ಕಿಂಗ್ ಜಾಗಕ್ಕಿಂತ ಸ್ವಲ್ಪ ದೊಡ್ಡದಿರುವ ಒಕಿನೊಟೊರಿ ಶಿಮಾ ಎಂಬ ಬಂಡೆಯನ್ನು 4, 500 ಕೋಟಿ ಖರ್ಚು ಮಾಡಿ ಆ ಕಲ್ಲನ್ನು ಉಳಿಸಿಕೊಳ್ಳುತ್ತಿದೆ. ಕಾರಣ ಈ ಬಂಡೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದರೆ, ಜಪಾನ್ ಈ ಪ್ರದೇಶದ EEZ ಹಕ್ಕುಗಳನ್ನು ಕಳೆದುಕೊಳ್ಳುತ್ತದೆ. ಇದರಿಂದ ಜಪಾನ್‌ಗೆ ಸಮುದ್ರದ ದೊಡ್ಡ ಭಾಗ ಮತ್ತು ಅದರ ಸಂಪನ್ಮೂಲಗಳ ಮೇಲಿನ ನಿಯಂತ್ರಣ ಕೈತಪ್ಪುತ್ತದೆ. ಚೀನಾದಂತಹ ನೆರೆಯ ದೇಶಗಳು ಈ ಪ್ರದೇಶದ ಮೇಲೆ ಹಕ್ಕು ಸಾಧಿಸಬಹುದು.

 

ಅಂದರೆ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಒಂದು ದೇಶವು ತನ್ನ ಗಡಿಯಿಂದ 370 ಕಿಲೋಮೀಟರ್‌ವರೆಗಿನ ಸಮುದ್ರ ಪ್ರದೇಶದ ಮೇಲೆ ವಿಶೇಷ ಆರ್ಥಿಕ ವಲಯ (EEZ) ಹಕ್ಕನ್ನು ಹೊಂದಿರುತ್ತದೆ. ಈ ವಲಯದಲ್ಲಿ ತೈಲ, ಅನಿಲ, ಮೀನು, ಖನಿಜ ಸಂಪತ್ತು-ಎಲ್ಲವೂ ಆ ದೇಶಕ್ಕೆ ಸೇರಿರುತ್ತದೆ. ಒಕಿನೊಟೊರಿ ಶಿಮಾ ಜಪಾನ್‌ನ ಈ ಹಕ್ಕುಗಳ ಕೇಂದ್ರಬಿಂದು. ಈ ಸಣ್ಣ ಬಂಡೆಯಿಂದ 370 ಕಿಮೀ ವ್ಯಾಪ್ತಿಯಲ್ಲಿ ಜಪಾನ್ ಲಕ್ಷಾಂತರ ಚದರ ಕಿಲೋಮೀಟರ್ ಸಮುದ್ರವನ್ನು ತನ್ನದಾಗಿಸಿಕೊಂಡಿದೆ.

 

ಹೀಗಾಗಿ ಜಪಾನ್ ಒಕಿನೊಟೊರಿ ಶಿಮಾ ಮುಳುಗುವುದನ್ನು ತಪ್ಪಿಸಲು ಕಾಂಕ್ರೀಟ್ ಗೋಡೆಗಳು ಮತ್ತು ಬಲಿಷ್ಠ ರಚನೆಗಳಿಂದ ರಕ್ಷಿಸುತ್ತಿದೆ. 4,500 ಕೋಟಿ ರೂ. ಖರ್ಚಿನ ಈ ಕಾರ್ಯವು ಕೇವಲ ಒಂದು ಬಂಡೆಯನ್ನು ಉಳಿಸುವುದಕ್ಕಿಂತ ಹೆಚ್ಚಿನದು ಇದು ಜಪಾನ್‌ನ ಆರ್ಥಿಕ ಮತ್ತು ಅಂತರರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಯತ್ನ. ಈ ಸಣ್ಣ ಕಲ್ಲು ಜಪಾನ್‌ಗೆ ಲಕ್ಷಾಂತರ ಕಿಮೀ ಸಮುದ್ರದ ಹಕ್ಕನ್ನು ಒದಗಿಸುವ ಚಿನ್ನದ ತಾಯಿತವಾಗಿದೆ.