Home News Jain Couple: ಸನ್ಯಾಸತ್ವ ದೀಕ್ಷೆ ಪಡೆಯಲು ಬರೋಬ್ಬರಿ 200 ಕೋಟಿ ರು. ದಾನ ಮಾಡಿದ ಜೈನ...

Jain Couple: ಸನ್ಯಾಸತ್ವ ದೀಕ್ಷೆ ಪಡೆಯಲು ಬರೋಬ್ಬರಿ 200 ಕೋಟಿ ರು. ದಾನ ಮಾಡಿದ ಜೈನ ದಂಪತಿಗಳು

Jain Couple

Hindu neighbor gifts plot of land

Hindu neighbour gifts land to Muslim journalist

Jain Couple: ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಮಾನವನ ಮೂರು ಹಂತದ ಜೀವನದ ಬಗ್ಗೆ ನಮಗೆ ತಿಳಿದಿದೆ. ಬಾಲಾ, ಯವ್ವನ, ವೃದ್ಧಾಪ್ಯ ಹೀಗೆ ಮೂರು ಹಂತಗಳಲ್ಲಿ ಮನುಷ್ಯನ ಜೀವನವನ್ನು ಗುರುತಿಸಲಾಗಿದೆ. ಹಿಂದೂ ಅಥವಾ ಜೈನ ಸಂಪ್ರದಾಯದ ಪ್ರಕಾರ ಯೌವ್ವನ ನಂತರದ ಅಂದರೆ ವೃದ್ಧಾಪ್ಯಕ್ಕೆ ಸಮೀಪವಿರುವ ಹಂತದಲ್ಲಿ ಅನೇಕ ಮಂದಿ ಸನ್ಯಾಸತ್ವ ದೀಕ್ಷೆ ಪಡೆಯುತ್ತಾರೆ. ಇನ್ನು ಕೆಲವರು ತಮ್ಮ ಯವ್ವನದಲ್ಲಿಯೇ ದೀಕ್ಷೆ ತೆಗೆದುಕೊಳ್ಳುವುದು ಇದೆ. ಅದರಂತೆಯೇ ಇದೀಗ ಗುಜರಾತಿನ ಜೈನ ಉದ್ಯಮಿ ಹಾಗೂ ಆತನ ಪತ್ನಿ ಇಬ್ಬರು ದೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದು, ತಮ್ಮ 200 ಕೋಟಿ ರೂ. ಆಸ್ತಿಯನ್ನು ದಾನ ಮಾಡಿದ್ದಾರೆ.

ಇದನ್ನೂ ಓದಿ: Rahul Gandhi: ಕಾಂಗ್ರೆಸ್’ಗೆ ರಾಹುಲ್ ಗಾಂಧಿ ರಾಜೀನಾಮೆ? ವೈರಲ್ ವಿಡಿಯೋ ಅಸಲತ್ತೇನು ?

ಗುಜರಾತಿನ ಸಬರ್ಕಾಂತ ಜಿಲ್ಲೆಯ ಹಿಮತ್‌ನಗರ ಉದ್ಯಮಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಇಬ್ಬರು ಇದೀಗ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ಮುಂದಾಗಿದ್ದು, ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ.
ಇಲ್ಲಿ ಅಚ್ಚರಿಯ ವಿಷವೆಂದರೆ, ಎರಡು ವರ್ಷಗಳ ಹಿಂದೆ ಇವರ ಇಬ್ಬರು ಮಕ್ಕಳು ಸನ್ಯಾಸತ್ವ ದೀಕ್ಷೆ ಪಡೆದಿದ್ದರು. ಇದೀಗ ದಂಪತಿಗಳು ಸಹ ತಮ್ಮ ಮಕ್ಕಳಂತೆ ಸನ್ಯಾಸತ್ವ ದೇಶ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಏಪ್ರಿಲ್ 22ರಂದು ಒಟ್ಟು 35 ಜನರು ಸನ್ಯಾಸತ್ವ ದೀಕ್ಷೆ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Mangaluru: ಪ್ರಧಾನಿ ಮೋದಿ ರೋಡ್ ಶೋ ವೇಳೆ ಮಂಗಳೂರಲ್ಲಿ ಅಗ್ನಿ ಅವಘಡ !!

ಸನ್ಯಾಸತ್ವ ದೀಕ್ಷೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ ಅದಕ್ಕೆ ಆತ್ಮ ಬಲ, ಕಠಿಣ ಶಿಸ್ತು, ಪಂಚೇಂದ್ರಿಯಗಳ ನಿಗ್ರಹ ಮಾಡಬೇಕು. ಕಾಮ, ಕ್ರೋಧ, ಲೋಬ, ಮೋಹ, ಮದ,ಮತ್ಸರ ಗಳೆಂಬ ಅರಿಷಡ್ವರ್ಗಗಳನ್ನು ಗೆಲ್ಲಬೇಕು. ಆಗಮಾತ್ರ ಆತ ನಿಜವಾದ ಸನ್ಯಾಸಿ ಎನಿಸಿಕೊಳ್ಳುತ್ತಾನೆ.

ಸಾಮಾನ್ಯವಾಗಿ ಸನ್ಯಾಸಿ ಆಗಬೇಕೆಂದರೆ ಅವರ ಬಳಿ ಚಿನ್ನದ ವಜ್ರಾಭರಣಗಳಾಗಲಿ, ದುಬಾರಿ ಬಟ್ಟೆ, ಕಾರು, ಮೊಬೈಲ್‌‌ ಯಾವುದು ಇರುವಂತಿಲ್ಲ ಇವೆಲ್ಲವನ್ನೂ ತ್ಯಜಿಸಿ ಕೇವಲ ಸಾಧಾರಣ ಬಟ್ಟೆಯಲ್ಲಿ, ಬರಿಗಾಲಿನಲ್ಲಿ ಇಡೀ ದೇಶವನ್ನೆಲ್ಲ ಸುತ್ತಬೇಕು.