Home News Aparna: ಅಪರ್ಣಾಗೆ ಇತ್ತು ಅದೊಂದು ಕೊನೆಯಾಸೆ, ಈಡೇರಲೇ ಇಲ್ಲ ಆ ಮಹದಾಸೆ !!

Aparna: ಅಪರ್ಣಾಗೆ ಇತ್ತು ಅದೊಂದು ಕೊನೆಯಾಸೆ, ಈಡೇರಲೇ ಇಲ್ಲ ಆ ಮಹದಾಸೆ !!

Aparna

Hindu neighbor gifts plot of land

Hindu neighbour gifts land to Muslim journalist

Aparna: ಕನ್ನಡ ನಿರೂಪಣೆಯ ಕಿರೀಟ ಕಳಚಿದೆ. ಮುತ್ತಿನಂತೆ ಕನ್ನಡವನ್ನು ಪೋಣಿಸುವ ಹೃದಯ ಮುದುಡಿದೆ. ಹೌದು, ನಿರೂಪಣ ಲೋಕದ ದೃವ ತಾರೆ ಅಪರ್ಣಾ ನಮ್ಮೆಲ್ಲರನ್ನು ಅಗಲಿ ಪಂಚ ಭೂತಗಳಲ್ಲಿ ಲೀನರಾಗಿದ್ದಾರೆ. ಅಪರ್ಣಾ(Aparna) ಎಂಬುದು ಕನ್ನಡದಲ್ಲಿ ಅಳಿಸಲಾಗದ ಲಿಪಿ ಇದ್ದಂತೆ. ಅದು ಎಂದೆಂದೂ ಶಾಶ್ವತ ಬಿಡಿ.

ಅಂದಹಾಗೆ ಅಪರ್ಣಾಗೆ ತನ್ನ ಬದುಕು ಸದ್ಯದಲ್ಲೇ ಅಂತ್ಯವಾಗುತ್ತೆ ಎಂದು ತಿಳಿದಾಗ ಅದೊಂದು ಕೊನೆಯಾಸೆಯನ್ನು ಹೊಂದಿದ್ದರಂತೆ. ಇದನ್ನು ಮಾಡೇ ತೀರಬೇಕು ಎಂದು ಪಣ ತೊಟ್ಟಿದ್ದರಂತೆ. ಆದರೆ ಕೊನೆಗೂ ಅದು ಈಡೇರಲೇ ಇಲ್ಲ. ಆ ಬಯಕೆಯೊಂದಿಗೆ ಅಪರ್ಣಾ ಇಹಲೋಕ ತ್ಯಜಿಸಿದರು. ಹಾಗಿದ್ರೆ ಏನದು ಅಪರ್ಣಾ ಕೊನೆ ಆಸೆ?

ಅಪರ್ಣಾ ಕೊನೆ ಆಸೆ ಏನೆಂದರೆ ಒಂದು ನಿರೂಪಣೆ ಶಾಲೆ(Anchoring School) ತೆರೆಯಬೇಕೆಂಬುದು. ಇದರ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದರಂತೆ. ಈ ಮೂಲಕ ನೂರಾರು ನಿರೂಪಕರನ್ನು ಹುಟ್ಟುಹಾಕಬೇಕೆಂದು ಅವರು ಆಸೆ ಹೊಂದಿದ್ದರಂತೆ. ಇದನ್ನು ಇಂದು ಮಂಡ್ಯ ರಮೇಶ್(Mandya Ramesh) ಅವರು ಬಹಿರಂಗಪಡಿಸಿದ್ದಾರೆ. ಅವರೊಂದಿಗೂ ಅಪರ್ಣಾ ಈ ಬಗ್ಗೆ ಚರ್ಚಿಸಿದ್ದರಂತೆ. ಆದರೆ ಇದು ಸಾಧ್ಯವಾಗಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಬಿಟ್ಟು ಅಪರ್ಣಾ ಅವರು ಇಹಲೋಕ ತ್ಯಜಿಸಿದ್ದಾರೆ.

Darshan: ಜೈಲಿಂದ ಬಿಡುಗಡೆ ಆದ ತಕ್ಷಣ ರೇಣುಕಾ ಸ್ವಾಮಿ ಕುಟುಂಬಕ್ಕೆ ಮಾಡೋದೇನಂದ್ರೆ.. !! ಧನ್ವೀರ್ ಬಳಿ ದರ್ಶನ್ ಹೇಳಿ ಕಳಿಸಿದ್ದೇನು?