

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಗುರುವಾರ ಆದೇಶಿಸಿದೆ.
ಅಪರಾಧಿ ತನಿಖಾ ದಳದ ಎಸ್ ಪಿ ಆಗಿದ್ದ ರವಿ ಡಿ ಚನ್ನಣ್ಣನವರ್ ಕರ್ನಾಟಕ ಅಭಿವೃದ್ಧಿ ನಿಗಮದ ಎಂಡಿ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ಕೊಪ್ಪಳದ ಎಸ್ಪಿ ಟಿ. ಸುಧೀರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಎಸ್ ಬಿ ಎಸ್ ಪಿ ಯಾಗಿದ್ದ ಅಬ್ದುಲ್ ಅಹ್ಮದ್ ಅವರನ್ನು ಕೆ ಎಸ್ ಆರ್ ಟಿ ಸಿ ( ಭದ್ರತೆ ಮತ್ತು ವಿಚಕ್ಷಣ ) ನಿರ್ದೇಶಕರಾಗಿ, ಕೊಪ್ಪಳ ಎಸ್ ಪಿ ಆಗಿರುವ ಶ್ರೀಧರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಜೈಲು ಎಸ್ ಪಿ ಯಾಗಿದ್ದ ಶಿವಕುಮಾರ ಅವರನ್ನು ಚಾಮರಾಜನಗರ ನೂತನ ಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಚಾಮರಾಜನಗರ ಎಸ್ಪಿ ಆಗಿರುವ ದಿವ್ಯಾ ಸಾರಾ ಥಾಮಸ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಡೆಪ್ಯುಟಿ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ.
ದೆಕ್ಕ ಕಿಶೋರ್ ಬಾಬು ಅವರನ್ನು ಬೀದರ್ ಎಸ್ ಪಿಯಾಗಿ, ಮೈಸೂರು ಎಸಿಬಿ ಆಗಿರುವ ಅರುಣಂಗ್ಶ ಗಿರಿ ಅವರನ್ನು ಕೊಪ್ಪಳ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಅಪರಾಧಿ ತನಿಖಾದಳದ ಮತ್ತೊಬ್ಬ ಅಧಿಕಾರಿ ಭೀಮಶಂಕರ್ ಎಸ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿದೆ.













