Home News Brazil: ದೇವ್ರೇ.. ಇಲ್ಲಿ ಮದ್ವೆ ಮುಂಚೆ ಹುಡುಗ್ರು ಗಂಡಸ್ತನ ಪ್ರೂವ್ ಮಾಡ್ಬೇಕು !! ಅದಕ್ಕಾಗಿ ‘ಆ’...

Brazil: ದೇವ್ರೇ.. ಇಲ್ಲಿ ಮದ್ವೆ ಮುಂಚೆ ಹುಡುಗ್ರು ಗಂಡಸ್ತನ ಪ್ರೂವ್ ಮಾಡ್ಬೇಕು !! ಅದಕ್ಕಾಗಿ ‘ಆ’ ಕೆಲಸ ಮಾಡ್ಲೇ ಬೇಕು, ಎಷ್ಟೇ ನೋವಾದ್ರೂ ತಡ್ಕೋಬೇಕು !!

Brazil
Image source- Webdunia Kannada

Hindu neighbor gifts plot of land

Hindu neighbour gifts land to Muslim journalist

Brazil: ಮದುವೆ(Marriage) ಅನ್ನೋದು ಜೀವನ ಪರ್ಯಂತ ಗಂಡ-ಹೆಂಡತಿಯರು ಒಟ್ಟಿಗೆ ಇರಲು ಬೆಸೆಯುವ ಒಂದು ಬಂಧ. ಈ ಮದುವೆ ಸಂಭ್ರಮ, ಸಂಪ್ರದಾಯಗಳು ಒಂದೊಂದು ಜಾತಿ, ಸಮುದಾಯಗಳಲ್ಲಿ ವಿಭಿನ್ನವಾಗಿರುತ್ತವೆ. ಇದು ಸಹಜ. ಆದರೆ ಇಲ್ಲೊಂದು ದೇಶದ ಬುಡಕಟ್ಟು ಜನಾಂಗದ(Tribals) ಮದುವೆ ಸಂಪ್ರದಾಯವನ್ನು ಕೇಳಿದ್ರೆ ನೀವೇ ಹೌಹಾರುತ್ತೀರ !!

ಹಿಂದೆಲ್ಲಾ ರಾಜಾಸ್ಥಾನಗಳಲ್ಲಿ ಮದುವೆ ಮುಂಚೆ ಸ್ವಯಂವರಗಳನ್ನು ಏರ್ಪಡಿಸುತ್ತಿದ್ದರು. ರಾಣಿಯನ್ನು ಪಡೆಯಲು ರಾಜನು ಕಠಿಣ ಪರೀಕ್ಷೆಗಳೆಲ್ಲವನ್ನು ಎದುರಿಸಬೇಕಿತ್ತು. ಅದರಲ್ಲಿ ಗೆದ್ದರೆ ಮಾತ್ರ ರಾಣಿ, ರಾಜನ ವಶವಾಗುತ್ತಿದ್ದಳು. ಅಂತೆಯೇ ಬ್ರೆಜಿಲ್(Brazil) ನ ಬುಡಕಟ್ಟು ಜನಾಂಗವೊಂದರಲ್ಲಿ ಈಗಲೂ ಈ ವರ ಪರೀಕ್ಷೆ ಇದೆ. ವರ ಪರೀಕ್ಷೆ ಅನ್ನೋದಕ್ಕಿಂತ ಗಂಡಸ್ಥನ ಪರೀಕ್ಷೆ ಎಂದರೆ ಸೂಕ್ತ ಅನಿಸ್ತದೆ. ಹೌದು, ಇಲ್ಲಿ ನಡೆಸೋ ಪರೀಕ್ಷೆ ಬಗ್ಗೆ ಕೇಳಿದ್ರೆ ನೀವೇ ದಂಗಾಗ್ತೀರಾ. ಹೌರಾರೋದಂತೂ ಪಕ್ಕ.

ಯಾಕೆಂದರೆ ಈ ಬುಡಕಟ್ಟು ಜನಾಂಗದಲ್ಲಿ ಮದುವೆಯಾಗದ ಹುಡುಗರು(mens) ಒಂದು ವಿಚಿತ್ರ ಪರೀಕ್ಷೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಅಸಹನೀಯ ನೋವಿನ ಪರೀಕ್ಷೆಗೆ ಒಳಗಾಗುವ ಮೂಲಕ ತಾವು ಪುರುಷರಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಹೀಗೆ ಮಾಡಿದರಷ್ಟೇ ಅವರು ಮದುವೆಯಾಗಲು ಅರ್ಹರು ಎಂದು ನಿರ್ಧರಿಸಲಾಗುತ್ತದೆ.

ಅಂತಹ ಮಹಾನ್, ವಿಚಿತ್ರ ಪರೀಕ್ಷೆ ಏನೆಂದರೆ ಈ ಬುಡಕಟ್ಟು ಜನಾಂಗದ ಹುಡುಗರು ಇರುವೆಗಳಿರುವ ಕೈಗವಸುಗಳ ಒಳಗೆ ಹತ್ತು ನಿಮಿಷ ಕೈ ಹಾಕಿ ಕುಳಿತುಕೊಳ್ಳಬೇಕು. ಅದು ಅಂತಿಂಥಾ ಇರುವೆಯಲ್ಲ. ಅಪಾಯಕಾರಿ (Dangerous) ಬುಲೆಟ್ ಇರುವೆ. ಈ ಇರುವೆ ಕಚ್ಚಿದ ನೋವು 30 ಜೇನುನೊಣ ಕಚ್ಚಿದ ನೋವಿಗೆ ಸಮನಾಗಿರುತ್ತದೆಯಂತೆ. ಅಪಾಯಕಾರಿ ಬುಲೆಟ್ ಇರುವೆಗಳಿಂದ ತುಂಬಿದ ಕೈಗವಸುಗಳಲ್ಲಿ ಹುಡುಗರು ತಮ್ಮ ಕೈ ಹಾಕಬೇಕು. ಬುಡಕಟ್ಟಿನ ನಿಯಮಗಳ ಪ್ರಕಾರ, ಚಿಕ್ಕ ಹುಡುಗರು ಪುರುಷರಾಗಲು ಈ ಬುಲೆಟ್ ಇರುವೆಗಳಿಂದ (Ant) ಕಚ್ಚುವ ಸಂಕಟವನ್ನು ಸಹಿಸಿಕೊಳ್ಳಬೇಕು.

ಅಂದಹಾಗೆ ಈ ಅಪಾಯಕಾರಿ ಇರುವೆಗಳನ್ನು ಮೊದಲು ದಪ್ಪ ಕೈಗವಸುಗಳಲ್ಲಿ ಸುತ್ತಿಡಲಾಗುತ್ತದೆ. ಅವುಗಳನ್ನು ತೆರೆದಾಗ, ಹುಡುಗರು ಈ ಕೈಗವಸುಗಳಲ್ಲಿ ತಮ್ಮ ಕೈಗಳನ್ನು ಹಾಕಬೇಕು. ಈ ಸಂದರ್ಭದಲ್ಲಿ ಎಲ್ಲಾ ಇರುವೆಗಳು ಅವರನ್ನು ಅಟ್ಯಾಕ್ ಮಾಡುತ್ತವೆ. ಆಗ ಗುಂಡು ತಗುಲಿದಷ್ಟೇ ನೋವಾಗುತ್ತದೆ ಎನ್ನುತ್ತಾರೆ ಇಲ್ಲಿನ ಹುಡುಗರು. ಹಲವಾರು ದಿನಗಳವರೆಗೆ, ಕೈಯಲ್ಲಿ ಊತವೂ ಇರುತ್ತದೆಯಂತೆ. ಅಲ್ಲದೆ ಇಲ್ಲಿನ ಹುಡುಗರು ವಯಸ್ಸಾದಾಗ ಈ ಪರೀಕ್ಷೆಯನ್ನು (Test) ಇಡೀ ಸಮುದಾಯದ ಮುಂದೆ ಸಾಬೀತುಪಡಿಸಬೇಕು. ಈ ವಿಚಿತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ಈ ಹುಡುಗರು (Boys) ಮದುವೆಯಾಗಲು ಸಾಧ್ಯವಿಲ್ಲ. ಕೆಲವೊಮ್ಮೆ ಈ ಅಪಾಯಕಾರಿ ಇರುವೆ ಕಡಿತದ ನೋವು ಸಹಿಸಲಾಗದೆ ಹಲವರು ಒದ್ದಾಡುತ್ತಾರೆ. ನೆಲಕ್ಕೆ ಬಿದ್ದು ಉರುಳಾಡುತ್ತಾರೆ.

ಇನ್ನೂ ಮುಖ್ಯವಾದ ವಿಚಾರ ಅಂದ್ರೆ ಈ ಸಮಾರಂಭಕ್ಕಾಗಿ, 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಕಾಡಿನಿಂದ ಅಪಾಯಕಾರಿ ಇರುವೆಗಳನ್ನು ತಾವಾಗಿಯೇ ತರಬೇಕು, ಮರದ ಕೈಗವಸುಗಳನ್ನು ತಯಾರಿಸಬೇಕು ಮತ್ತು ಇರುವೆಗಳನ್ನು ತುಂಬಬೇಕು. ಅದನ್ನು ಅನುಸರಿಸಿ, ಈ ಮಕ್ಕಳು ಸಾಂಪ್ರದಾಯಿಕ ನೃತ್ಯ ಮತ್ತು ಹಾಡಿನ ನಂತರ ಈ ಕೈಗವಸುಗಳನ್ನು 20 ಬಾರಿ ಧರಿಸುತ್ತಾರೆ. ಇದನ್ನು ಒಮ್ಮೆಗೆ 10 ನಿಮಿಷಗಳ ಕಾಲ ಧರಿಸಲಾಗುತ್ತದೆ. ಆದರೂ ಇಂದಿಗೂ ಈ ರೀತಿಯ ಗಂಡಸ್ಥನ ಪರೀಕ್ಷೆಗಳನ್ನು ನಡೆಸಿ, ವಿಪರೀತ ನೋವುಂಡು ಮದುವೆ ಆಗುತ್ತಾರೆ ಎಂದರೆ ಅಚ್ಚರಿಯೇ ಸರಿ ಬಿಡಿ.