

Insult to Daivaradhane: ಕಾಂತಾರ ಸಿನಿಮಾ ಬಂದ ದೈವಾರಾಧನೆ ಜಗತ್ತಿನಾದ್ಯಂತ ಪಸರಿಸಿತು. ಇದನ್ನು ದೈವಭಕ್ತಿಯೆಂದು ನೋಡದೇ ಹಲವು ಮಂದಿ ಇದನ್ನು ವೇದಿಕೆಯಲ್ಲಿ ಪ್ರದರ್ಶನದ ರೀತಿಯಲ್ಲಿ ಬಳಕೆ ಮಾಡುವ ವೀಡಿಯೋ ಕಂಡು ಬಂದಿತ್ತು.
ಅಲ್ಲದೇ ಕರಾವಳಿಯ ಜನರು ನಂಬುವಂತಹ ದೈವಗಳನ್ನು ಅನುಕರಣೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಬೇಡಿ ಎಂದು ಆಕ್ರೋಶವನ್ನು ಒಂದಷ್ಟು ಸಂಘಟನೆಗಳು ಮಾಡಿದ್ದರು. ಆದರೆ ಇದನ್ನು ಅನುಕರಣೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ವೀಡಿಯೋವೊಂದು ವೈರಲ್ ಆಗಿದೆ.
ವೀಡಿಯೋದಲ್ಲಿ, ಯುವಕರಿಬ್ಬರು ದೈವದ ವೇಷ ಹಾಕಿ ವೇದಿಕೆಯ ಮೇಲೆ ದೈವಾರಾಧನೆಯ ಅನುಕರಣೆ ಮಾಡಿದ್ದಾರೆ. ಯಾವುದೋ ಒಂದು ಕಾರ್ಯಕ್ರಮದಲ್ಲಿ ದೈವದ ವೇಷ ಹಾಕಿ ವೇದಿಕೆಯ ಮೇಲೆ ದೈವಕೋಲದ ಅನುಕರಣೆ ಮಾಡಿದ್ದಾರೆ. ಇದು ಎಲ್ಲಿ ನಡೆದಿರುವುದು ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಮಾ.16 ರಂದು ಈ ವೀಡಿಯೋವನ್ನು vijeshetty ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.













