Home News Party donation collection: 2024ರಲ್ಲಿ ಪಕ್ಷಗಳು ಪಡೆದ ದೇಣಿಗೆ ಮಾಹಿತಿ ಪ್ರಕಟ- ಕಾಂಗ್ರೆಸ್ ಗೆ ಬಂತು...

Party donation collection: 2024ರಲ್ಲಿ ಪಕ್ಷಗಳು ಪಡೆದ ದೇಣಿಗೆ ಮಾಹಿತಿ ಪ್ರಕಟ- ಕಾಂಗ್ರೆಸ್ ಗೆ ಬಂತು 289 ಕೋಟಿ, ಬಿಜೆಪಿ ಪಡೆದ ದೇಣಿಗೆ ಕೇಳಿದ್ರೆ ಶಾಕ್ ಆಗ್ತೀರಾ !!

Hindu neighbor gifts plot of land

Hindu neighbour gifts land to Muslim journalist

Party donation collection: 2023-24ನೇ ಸಾಲಿನಲ್ಲಿ ದೇಶದ ರಾಜಕೀಯ ಪಕ್ಷಗಳು ಪಡೆದ ದೇಣಿಗೆಯ ಇವರ ಇದೀಗ ಪ್ರಕಟವಾಗಿದೆ. ಈ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 20 ಸಾವಿರ ಕೋಟಿ ರೂ. ದೇಣಿಗೆ ಮೊತ್ತ ಹರಿದು ಬಂದಿದೆ. ಹಾಗಿದ್ರೆ ಯಾವ ಯಾವ ಪಕ್ಷಗಳಿಗೆ ಎಷ್ಟು ದೇಣಿಗೆ( Party donation collection)ಬಂದಿದೆ? ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು? ಇಲ್ಲಿದೆ ನೋಡಿ ಡೀಟೇಲ್ಸ್

ಹೆಚ್ಚು ದೇಣಿಗೆ ಪಡೆದ ಪಕ್ಷ:
2022-23 ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು. ಆದರೆ ಈ ವರ್ಷ ಬರೀ ಬಿಜೆಪಿ ಒಂದಕ್ಕೆ 2, 224 ಕೋಟಿ ರೂ. ದೇಣಿಗೆ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಬಿಜೆಪಿಗೆ ಮೂರು ಪಟ್ಟು ಹೆಚ್ಚು ದೇಣಿಗೆ ಬಂದಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ಏರಿಕೆಯಾಗಿದೆ. ಈ ಮೂಲಕ ಹೆಚ್ಚು ದೇಣಿಗೆ ಪಡೆದ ಪಕ್ಷಗಳ ಸಾಲಿನಲ್ಲಿ ಬಿಜೆಪಿ ಅಗ್ರಸ್ಥಾನವನ್ನು ಪಡೆಯುತ್ತದೆ.

ಎರಡನೇ ಸ್ಥಾನ ಪಡೆದ ಬಿ ಆರ್ ಎಸ್:
ತೆಲಂಗಾಣದ ಕೆಸಿ ಚಂದ್ರಶೇಖರ್ ನೇತೃತ್ವದ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್ ಎಸ್) ಪಕ್ಷ 580 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಮೂಲಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಬಿಜೆಪಿ ನಂತರ ಅತೀ ಹೆಚ್ಚು ದೇಣಿಗೆ ಪಡೆದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೂರನೇ ಸ್ಥಾನದಲ್ಲಿ ಕಾಂಗ್ರೆಸ್:
ಕಳೆದ ವರ್ಷ ಕಾಂಗ್ರೆಸ್ 79.92 ಕೋಟಿ ರೂ. ಸ್ವೀಕರಿಸಿತ್ತು. ಆದರೆ ಈ ವರ್ಷ ಕಾಂಗ್ರೆಸ್ 289 ಕೋಟಿ ದೇಣಿಗೆಯೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಹೆಚ್ಚು ದೇಣಿಗೆ ನೀಡಿದ ಟ್ರಸ್ಟ್:
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಅತೀ ಹೆಚ್ಚು ಮೊತ್ತದ ದೇಣಿಗೆ ನೀಡಿರುವುದು ಪ್ರೌಡೆಂಟ್ ಎಲೆಕ್ಟ್ರೋಲ್ ಟ್ರಸ್ಟ್ ಆಗಿದೆ. ಕೇಂದ್ರ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ನೀಡಿದ ಮಾಹಿತಿ ಪ್ರಕಾರ ಬಿಜೆಪಿ 723 ಕೋಟಿ ರೂ. ಹಾಗೂ ಕಾಂಗ್ರೆಸ್ ಗೆ 156 ಕೋಟಿ ರೂ. ದೇಣಿಗೆ ನೀಡಿದೆ.

ಯಾವ ಪಕ್ಷಕ್ಕೆ ಎಷ್ಟು ದೇಣಿಗೆ? ( ಕೋಟಿಗಳಲ್ಲಿ )
ಬಿಜೆಪಿ -2,244
ಬಿಆರ್‍ಎಸ್ -580
ಕಾಂಗ್ರೆಸ್ -289
ವೈಎಸ್‍ಆರ್‍ಸಿಪಿ – 184
ಟಿಡಿಪಿ- 100
ಡಿಎಂಕೆ- 60
ಎಎಪಿ- 11
ಟಿಎಂಸಿ -6