Home latest IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯ, ಟಿಕೆಟ್ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್...

IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯ, ಟಿಕೆಟ್ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್ ಫ್ಯಾನ್ಸ್!

Hindu neighbor gifts plot of land

Hindu neighbour gifts land to Muslim journalist

ಭಾರತ- ಪಾಕಿಸ್ತಾನ ಈ ಎರಡು ತಂಡಗಳ ನಡುವಿನ ಇತ್ತೀಚಿನ ಪಂದ್ಯಕ್ಕೆ ಏಷ್ಯಾಕಪ್ ವೇದಿಕೆಯಾಗಲಿದೆ. ಆ. 28ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಆಗಸ್ಟ್ 15ರಂದು ಈ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಕಾರಣಾಂತರದಿಂದ ವೆಬ್‌ಸೈಟ್ ಕ್ರ್ಯಾಶ್ ಆಗಿತ್ತು. ಏಕೆಂದರೆ ಒಮ್ಮೆಲೇ ಸುಮಾರು 7.5 ಲಕ್ಷ ಬಳಕೆದಾರರು ಒಂದೇ ಸಮಯದಲ್ಲಿ ಟಿಕೆಟ್‌ಗಾಗಿ ವೆಬ್‌ಸೈಟ್‌ನಲ್ಲಿ ಕ್ಲಿಕ್ ಮಾಡಿದ್ದರಿಂದ ವೆಬ್‌ಸೈಟ್‌ನ ಸರ್ವ‌ರ್ ಗಳು ಕ್ರ್ಯಾಶ್ ಆಗಿದೆ. ಇದರಿಂದಾಗಿ ಮಧ್ಯಾಹ್ನ 2.30ರಿಂದಲೇ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದಾದ ನಂತರ ಕೆಲವೇ ನಿಮಿಷಗಳಲ್ಲಿ ಟಿಕೆಟ್‌ಗಳು ಮಾರಾಟವಾಗಿದೆ. ಕ್ರೀಡಾಂಗಣದ ಸಾಮರ್ಥ್ಯ 25,000.

ದುಬೈನಲ್ಲಿ ನಡೆಯುವ ಈ ಪಂದ್ಯದ ಟಿಕೆಟ್ ಬೆಲೆ ಕೇಳಿದವರು ಒಮ್ಮೆ ಹೌಹಾರಿದ್ದಾರೆ. ಹೌದು, ಭಾರತೀಯ ಕರೆನ್ಸಿಯಲ್ಲಿ 43 ಸಾವಿರದಿಂದ 2.81 ಲಕ್ಷದವರೆಗೆ ಟಿಕೆಟ್ ಮಾರಾಟವಾಗಿದೆ. ಜೊತೆಗೆ, ಈ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದಾರೆ. 2022ರ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 27ರಿಂದ ಆರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ.

ಏಷ್ಯಾ ಕಪ್ 2022ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜೇಂದ್ರ ಚಾಹಲ್, ರವಿ ಬಿದ್ದೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.