Home News Gambia Kids death : ಭಾರತದ ಸಿರಪ್‌ ಸೇವನೆಯಿಂದ ಗಾಂಬಿಯಾದ 69 ಮಕ್ಕಳ ಸಾವು |...

Gambia Kids death : ಭಾರತದ ಸಿರಪ್‌ ಸೇವನೆಯಿಂದ ಗಾಂಬಿಯಾದ 69 ಮಕ್ಕಳ ಸಾವು | ಮಕ್ಕಳ ಸಾವಿಗೂ ಸಿರಪ್‌ಗೂ ಸಂಬಂಧವಿಲ್ಲ, ಕ್ಲೀನ್‌ಚಿಟ್

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಸಿರಪ್‌ ಕುಡಿದು ಗಾಂಬಿಯಾ ದೇಶದಲ್ಲಿ ಮಕ್ಕಳ ಸಾವು ಆಗಿದ್ದು ಅದಕ್ಕೆ ಕಾರಣ ಭಾರತದ ದೇಶದ ಸಿರಪ್‌ ಕಂಪನಿ ಎಂದು ಆರೋಪ ಮಾಡಲಾಗಿತ್ತು. ಆದರೆ ಈಗ ಬಂದಿರೋ ವರದಿಯ ಪ್ರಕಾರ, ಗಾಂಬಿಯಾ ದೇಶದಲ್ಲಿ ಸಂಭವಿಸಿದ ಚಿಕ್ಕ ಮಕ್ಕಳ ಸಾವಿಗೂ, ತನ್ನ ದೇಶದ ಖಾಸಗಿ ಔಷಧ ಕಂಪೆನಿಗೂ ಸಂಬಂಧವೇ ಇಲ್ಲ ಎಂದು ಕೇಂದ್ರ ಸರಕಾರ, ವಿವಾದಾತ್ಮಕ ಸಂಸ್ಥೆಗೆ ಕ್ಲೀನ್‌ಚಿಟ್ ನೀಡಿದೆ.

ಮಕ್ಕಳ ಸಾವಿಗೆ ಕಾರಣವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಂಕಿಸಿದ್ದ ಸಿರಪ್‌ಗಳ ಮಾದರಿಯನ್ನು ಸರ್ಕಾರಿ ಲ್ಯಾಬೋರೇಟರಿ ಪರಿಶೀಲನೆ ಮಾಡಿದ್ದು, ಆದರೆ ಪರಿಶೀಲನೆ ಸಂದರ್ಭದಲ್ಲಿ ಅದರಲ್ಲಿ ಯಾವುದೇ ಅಪಾಯಕಾರಿ ಅಂಶ ಇಲ್ಲ ಎಂದು ವರದಿ ನೀಡಿದೆ. ಹೀಗಾಗಿ ಮತ್ತೆ ತನ್ನ ಉತ್ಪಾದನೆಯನ್ನು ಆರಂಭಿಸಲು ಅನುಮತಿ ಕೋರುವುದಾಗಿ ಮೈದೆನ್ ಫಾರ್ಮಾಸಿಟಿಕಲ್ಸ್ ಪ್ರೈ ಲಿ ಶುಕ್ರವಾರ ತಿಳಿಸಿದೆ.

ಗಾಂಬಿಯಾದಲ್ಲಿ ಈ ವರ್ಷ 69 ಮಕ್ಕಳ ಸಾವಿಗೆ ಹರ್ಯಾಣದ ಸೋನೆಪತ್‌ನಲ್ಲಿರುವ ಮೈದೆನ್ ಫಾರ್ಮಾಸಿಟಿಕಲ್ಸ್ ಕಂಪೆನಿ ತಯಾರಿಸುತ್ತಿರುವ ಕೆಮ್ಮು ಹಾಗೂ ಶೀತದ ಸಿರಪ್ ಕಾರಣ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಕ್ಟೋಬರ್‌ನಲ್ಲಿ ಅನುಮಾನ ವ್ಯಕ್ತಪಡಿಸಿತ್ತು. ಹೀಗಾಗಿ ಕಂಪೆನಿಯ ಮುಖ್ಯ ಕಾರ್ಖಾನೆಯನ್ನು ಆರೋಗ್ಯ ಅಧಿಕಾರಿಗಳು ಬಂದ್ ಮಾಡಿಸಿದ್ದರು.

ಆದರೆ ಡಿ. 13ರಂದು ಡಬ್ಲ್ಯೂಎಚ್‌ಒಗೆ ಪತ್ರ ಬರೆದಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ವಿಜಿ ಸೊಮಾನಿ, ಮೈದೆನ್ ಉತ್ಪನ್ನಗಳ ಮಾದರಿಗಳ ಮೇಲಿನ ಪರೀಕ್ಷೆಯು ನಿರ್ದಿಷ್ಟ ಸೂಚನೆಗಳಿಗೆ ಅನುಗುಣವಾಗಿ ಇರುವುದು ಕಂಡುಬಂದಿದೆ. ಇದರಲ್ಲಿ ಯಾವುದೇ ಎಥ್ಲೀನ್ ಗೈಕಾಲ್ ಅಥವಾ ಡಯಥ್ಲೀನ್ ಗ್ಲೈಕಾಲ್ ಪತ್ತೆಯಾಗಿಲ್ಲ ಎಂದು ಹೇಳಿದ್ದರು.

ಆದರೆ ಈ ಕುರಿತು ಡಬ್ಲ್ಯೂಎಚ್ಒ ಪ್ರತಿಕ್ರಿಯೆ ನೀಡಿಲ್ಲ. ಮೈದೆನ್ ಉತ್ಪಾದಿಸಿರುವ ಔಷಧಗಳಲ್ಲಿ ವಿಷಕಾರಿಯಾದ ಹಾಗೂ ಕಿಡ್ನಿ ಹಾನಿಗೆ ಕಾರಣವಾಗುವ ‘ಒಪ್ಪಲಾಗದ’ ಪ್ರಮಾಣದ ಎಥ್ಲೀನ್ ಗೈಕಾಲ್ ಅಥವಾ ಡಯಥ್ಲೀನ್ ಗ್ಲೈಕಾಲ್‌ಗಳು ಪತ್ತೆಯಾಗಿರುವುದಾಗಿ ಅಕ್ಟೋಬರ್ ವರದಿಯಲ್ಲಿ ಡಬ್ಲ್ಯೂಎಚ್‌ಒ ಹೇಳಿತ್ತು.