Home latest ‘ಸಪ್ತ’ ಸೂತ್ರಗಳನ್ನೊಳಗೊಂಡ ಕೇಂದ್ರ ಬಜೆಟ್ ನಲ್ಲಿ ಮಹಿಳೆ, ಯುವಕರ ಜೊತೆಗೆ ಕೃಷಿ ಕ್ಷೇತ್ರಕ್ಕೂ ಸಿಕ್ತು ಭರ್ಜರಿ...

‘ಸಪ್ತ’ ಸೂತ್ರಗಳನ್ನೊಳಗೊಂಡ ಕೇಂದ್ರ ಬಜೆಟ್ ನಲ್ಲಿ ಮಹಿಳೆ, ಯುವಕರ ಜೊತೆಗೆ ಕೃಷಿ ಕ್ಷೇತ್ರಕ್ಕೂ ಸಿಕ್ತು ಭರ್ಜರಿ ಗಿಫ್ಟ್!!

Hindu neighbor gifts plot of land

Hindu neighbour gifts land to Muslim journalist

ತಮ್ಮ 5ನೇ ಬಜೆಟ್ ಮಂಡಿಸುತ್ತಿರುವವರೆಲ್ಲರೂ ನಿರ್ಮಲಾ ಸೀತಾರಾಮನ್ ಅವರು ದೇಶದ ಜನತೆಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ಬಜೆಟ್‌ 2023 ರನ್ನು ಮೊದಲ ಅಮೃತ ಕಾಲದ ಬಜೆಟ್‌ ಎಂದು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಮುಖ 7 ಅಂಶಗಳಾದ ‘ಎಲ್ಲ ಒಳಗೊಂಡ ಅಭಿವೃದ್ಧಿ, ಗುರಿ ತಲುಪುವಿಕೆ, ಮೂಲಸೌಕರ್ಯ ಹಾಗೂ ಬಂಡವಾಳ ಹೂಡಿಕೆ, ಸಾಮರ್ಥ್ಯವನ್ನು ಹೊರಹಾಕುವುದು, ಹಸಿರು ಅಭಿವೃದ್ಧಿ, ಯುವ ಶಕ್ತಿ,ಆರ್ಥಿಕ ಕ್ಷೇತ್ರ’ ಇವುಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ ಯುವಕರು, ಮಹಿಳೆಯರು, ಒಬಿಸಿ ಈ ಸಮುದಾಯಕ್ಕೆ ಬಜೆಟ್ ನಲ್ಲಿ ಪೋಕಸ್ ಮಾಡಲಾಗಿದೆ. ಆಧಾರ್, ಯುಪಿಐ, ಕೊವಿನ್ ವಿಶ್ವಮಾನ್ಯತೆ ಸಿಕ್ಕಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಗೆ 2 ಲಕ್ಷ ಕೋಟಿ ರೂ. ಮಿಸಲಿಡಲಾಗಿದೆ. ಒಂದು ವರ್ಷ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಹಿಳೆಯರ ಆರ್ಥಿಕ ಸಬಲೀಕರಣದ ಗುರಿ ಹೊಂದಲಾಗಿದ್ದು, ಕರಕುಶಲಕರ್ಮಿಗಳಿಗೆ ನುತನ ಯೋಜನೆ ಘೋಷಣೆ ಮಾಡಲಾಗಿದ್ದು, ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿ, ಅದರಲ್ಲಿ ವಿಶೇಷವಾಗಿ ಸಿರಿಧಾನ್ಯ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಸಿರಿಧಾನ್ಯ ಉತ್ಪಾದನೆಗೆ ಅನೇಕ ಯೋಜನೆಗಳ ಮೂಲಕ ಸಣ್ಣ ರೈತರಿಗೆ ನೆರವು ನೀಡಲಾಗುತ್ತದೆ ಎಂದಿರುವ ಅವರು, ಹೈದರಾಬಾದ್ ನಲ್ಲಿ ಸಿರಿಧಾನ್ಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ.

ಮಕ್ಕಳು ಮತ್ತು ಯುವಜನರಿಗಾಗಿ ಡಿಜಿಟಲ್ ಲೈಬ್ರರಿಗಳು ಸಿದ್ಧಪಡಿಸಲಾಗುತ್ತಿದೆ. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಪಂಚಾಯತ್ ಮತ್ತು ವಾರ್ಡ್ ಮಟ್ಟಕ್ಕೆ ತೆರೆಯಲಾಗುವುದು. ಪ್ರಾದೇಶಿಕ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕಗಳು ಲಭ್ಯವಿರುತ್ತವೆ. ವಯಸ್ಸಿಗೆ ಅನುಗುಣವಾಗಿ ಪುಸ್ತಕಗಳು ಲಭ್ಯವಿರುತ್ತವೆ. ರಾಜ್ಯಗಳು ಮತ್ತು ಅವುಗಳಿಗಾಗಿ ನೇರ ಗ್ರಂಥಾಲಯಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದ್ದಾರೆ.

ನಮ್ಮ ಆರ್ಥಿಕ ಕಾರ್ಯಸೂಚಿಯು ನಾಗರಿಕರಿಗೆ ಅವಕಾಶಗಳನ್ನು ಸುಗಮಗೊಳಿಸುವುದು, ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವುದು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಕೃಷಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ ನೀಡಲಾಗುವುದು. ಯುವ ಉದ್ಯಮಿಗಳು ಕೃಷಿ-ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರ ಮುನ್ನಡೆಯಲಿದೆ ಎಂದಿದ್ದಾರೆ.