Home News ನೀರು ನಿಲ್ಲಿಸಿದರೆ ನಾವು ನಿಮ್ಮ ಶ್ವಾಸ ನಿಲ್ಲಿಸ್ತೇವೆ- 130 ಅಣು ಬಾಂಬ್‌ ಇಟ್ಟಿದ್ದು ಶೋ ಆಫ್...

ನೀರು ನಿಲ್ಲಿಸಿದರೆ ನಾವು ನಿಮ್ಮ ಶ್ವಾಸ ನಿಲ್ಲಿಸ್ತೇವೆ- 130 ಅಣು ಬಾಂಬ್‌ ಇಟ್ಟಿದ್ದು ಶೋ ಆಫ್ ಮಾಡಲು ಅಲ್ಲ- ಪಾಕ್‌ ಸಚಿವನ ಬೆದರಿಕೆ

Hindu neighbor gifts plot of land

Hindu neighbour gifts land to Muslim journalist

Islamabad:ನಮ್ಮ (Pakistan) ದೇಶದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ಪ್ರದರ್ಶನಕ್ಕೆ ಇರಿಸಿಲ್ಲ. ಅವುಗಳೆಲ್ಲ ಭಾರತವನ್ನೇ ಗುರಿಯಾಗಿಸಿ ಇಡಲಾಗಿದೆ ಎಂದು ಪಾಕ್‌ ಸಚಿವ ಹನೀಫ್ ಅಬ್ಬಾಸಿ‌ (Hanif Abbasi) ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ.

ನಮ್ಮ ಶಸ್ತ್ರಾಗಾರದಲ್ಲಿ ಘೋರಿ, ಶಾಹೀನ್ ಮತ್ತು ಘಜ್ನಿ ಮುಂತಾದ ಕ್ಷಿಪಣಿಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು ಇರಿಸಿದ್ದು, ಅದು ಭಾರತಕ್ಕಾಗಿ ಮಾತ್ರ ಸೀಮಿತ. ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿ ನೀರು ಸರಬರಾಜನ್ನು ನಿಲ್ಲಿಸಿದರೆ, ನಾವು ನಿಮ್ಮ ಶ್ವಾಸ ನಿಲ್ಲಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ನೀವು ಧೈರ್ಯ ಮಾಡಿದರೆ ನೀವು ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಎಂದಿದ್ದಾರೆ. ನಾವು ದೇಶಾದ್ಯಂತ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲೆಲ್ಲಿ ಇರಿಸಿದ್ದೇವೆ ಎಂದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಭಾರತದ ಮೇಲೆ ಗುರಿಯಾಗಿವೆ ಎಂದಿದ್ದಾನೆ.

ಭಾರತೀಯ ವಿಮಾನಗಳಿಗೆ ಪಾಕಿಸ್ತಾನವು ತನ್ನ ವಾಯು ಪ್ರದೇಶವನ್ನು ಮುಚ್ಚಿದ್ದರಿಂದ ತೀವ್ರ ಅಡಚಣೆ ಉಂಟಾಗಿದೆ. ಇದು ಹೀಗೇ 10 ದಿನಗಳ ಕಾಲ ಹೀಗೆ ಮುಂದುವರೆದರೆ ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ. ಪಹಲ್ಗಾಮ್ ದಾಳಿಗೆ ಭಾರತ ತನ್ನ ಭದ್ರತಾ ವೈಫಲ್ಯ ಒಪ್ಪಿಕೊಳ್ಳುವ ಬದಲು ಪಾಕಿಸ್ತಾನದ ಮೇಲೆ ಹೊಣೆ ಹೊರಿಸುತ್ತಿದೆ. ಈಗ ಭಾರತವು ಎರಡು ದೇಶಗಳ ನಡುವಿನ ವ್ಯಾಪಾರವನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಭಾರತ ತೆಗೆದುಕೊಳ್ಳುವ ಯಾವುದೇ ಕ್ರಮಗಳನ್ನು ಎದುರಿಸಲು ಪಾಕ್‌ ಸಿದ್ಧವಾಗಿದೆ ಎಂದು ಹೇಳಿಕೊಂಡಿದ್ದಾನೆ.