Home News Chennai: ಉತ್ತರ ಭಾರತೀಯರು ತಮಿಳಿಗೆ ಅವಮಾನ ಮಾಡಿದರೆ ಅವರ ನಾಲಿಗೆ ಕತ್ತರಿಸುತ್ತೇನೆ- ನಾಲಿಗೆ ಹರಿಬಿಟ್ಟ ತ.ನಾ.ಸಚಿವ...

Chennai: ಉತ್ತರ ಭಾರತೀಯರು ತಮಿಳಿಗೆ ಅವಮಾನ ಮಾಡಿದರೆ ಅವರ ನಾಲಿಗೆ ಕತ್ತರಿಸುತ್ತೇನೆ- ನಾಲಿಗೆ ಹರಿಬಿಟ್ಟ ತ.ನಾ.ಸಚಿವ ದೊರೈ

Hindu neighbor gifts plot of land

Hindu neighbour gifts land to Muslim journalist

Chennai: ಕ್ಷೇತ್ರ ಮರುವಿಂಗಡಣೆ ವಿಚಾರಕ್ಕಾಗಿ ಕೇಂದ್ರ ಸರಕಾರ ಹಾಗೂ ಡಿಎಂಕೆ ನಡುವಣ ಘರ್ಷಣೆ ಮತ್ತಷ್ಟು ಹೆಚ್ಚಿದೆ. ಸಿಎಂ ಸ್ಟಾಲಿನ್‌ ಕೇಂದ್ರದ ನಿಲುವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಕುರಿತು ತಮಿಳುನಾಡು ಸಚಿವ ದೊರೈ ಮುರುಗನ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

“ಹಲವು ಪತ್ನಿಯರನ್ನು ಹೊಂದುವ ಸಂಸ್ಕೃತಿಯುಳ್ಳ ಉತ್ತರ ಭಾರತೀಯರು ತಮಿಳಿಗೆ ಅವಮಾನ ಮಾಡಿದರೆ ಅವರು ನಾಲಗೆ ಕತ್ತರಿಸುತ್ತೇವೆʼ ಎಂದು ಮುರುಗನ್‌ ಹೇಳಿದ್ದಾರೆ. ಮಹಾಭಾರತವನ್ನು ಉಲ್ಲೇಖಿಸಿರುವ ಸಚಿವ, ಒಬ್ಬ ಮಹಿಳೆ ಐವರನ್ನು ಮದುವೆಯಾಗಿದ್ದಳು. ಇದು ಉತ್ತರ ಭಾರತೀಯ ಸಂಸ್ಕೃತಿ. 10 ಪುರುಷರನ್ನು ಬೇಕಾದರೂ ಅವರು ಮದುವೆಯಾಗುತ್ತೇನೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನಮಗೆ ಜನ ಸಂಖ್ಯೆ ನಿಯಂತ್ರಣಕ್ಕೆ ಸೂಚಿಸಿತ್ತು. ಹಾಗೇ ನಾವು ಮಾಡಿದೆವು. ಆದರೆ ಉತ್ತರ ಭಾರತದಲ್ಲಿ ಮಾತ್ರ 17,18,19 ಮಕ್ಕಳನ್ನು ಹೆರುತ್ತಲೇ ಇದ್ದಾರೆ. ಅವರಿಗೆ ಬೇರೆ ಕೆಲಸವೇ ಇಲ್ಲ” ಎಂದು ಸಚಿವ ದೊರೈ ಮುರುಗನ್‌ ವಾಗ್ದಾಳಿ ಮಾಡಿದ್ದಾರೆ.

ತಮಿಳು ಪದ್ಧತಿಗಳಿಗಿಂತ ಉತ್ತರ ಭಾರತದ ಪದ್ಧತಿಗಳು ವಿಭಿನ್ನವಾಗಿದೆ. ಅವರ ಸಂಪ್ರದಾಯಗಳು ಬಹುಪತ್ನಿತ್ವ ಮತ್ತು ಬಹುರಾಜತ್ವವನ್ನು ಅನುಮೋದಿಸುತ್ತವೆ ಎಂದು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದಾರೆ.

ನಮ್ಮ ಸಂಸ್ಕೃತಿಯಲ್ಲಿ ಒಬ್ಬ ಪುರುಷ ಒಬ್ಬ ಮಹಿಳೆಯನ್ನು ಮಾತ್ರ ಮದುವೆಯಾಗುತ್ತಾನೆ. ಆದರೆ, ಉತ್ತರ ಭಾರತದಲ್ಲಿ ಒಬ್ಬ ಮಹಿಳೆಗೆ ಬಹು ಗಂಡಂದಿರು ಇರಬಹುದು. ಕೆಲವೊಮ್ಮೆ ಐದು ಅಥವಾ ಹತ್ತು ಇದ್ರೂ ಅಚ್ಚರಿ ಇಲ್ಲ. ಅದೇ ರೀತಿ, ಐದು ಪುರುಷರು ಒಬ್ಬ ಮಹಿಳೆಯನ್ನು ಮದುವೆಯಾಗಬಹುದು. ಇದು ಅವರ ಸಂಪ್ರದಾಯ. ಒಬ್ಬರು ಹೊರಟು ಹೋದರೆ, ಇನ್ನೊಬ್ಬರು ಅವರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ” ಎನ್ನುವ ಮೂಲಕ ಸಚಿವ ಮುರುಗನ್‌ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.