Home News ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂಬ ಕಾರಣಕ್ಕೆ ವಿಚ್ಛೇದನೆ ನೀಡಿದ ಪತ್ನಿ | ಆಕೆಯ ಸ್ವಚ್ಛತೆ ಬಗೆಗಿನ...

ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂಬ ಕಾರಣಕ್ಕೆ ವಿಚ್ಛೇದನೆ ನೀಡಿದ ಪತ್ನಿ | ಆಕೆಯ ಸ್ವಚ್ಛತೆ ಬಗೆಗಿನ ಕಾಳಜಿಯನ್ನು ಕೊಂಡಾಡುತ್ತಿದ್ದಾರಂತೆ ಗ್ರಾಮದ ಜನತೆ!!

Hindu neighbor gifts plot of land

Hindu neighbour gifts land to Muslim journalist

ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಮಾತಿದೆ. ಆದರೆ ಇದು ಈ ಕಾಲಕ್ಕೆ ಸರಿ ಹೊಂದುವುದಿಲ್ಲ. ಏಕೆಂದರೆ ಸಣ್ಣಪುಟ್ಟ ವಿಷಯಕ್ಕೂ ಗಂಡ-ಹೆಂಡತಿ ಜಗಳವಾಡಿ ಕೋರ್ಟ್ ಮೆಟ್ಟಿಲೇರುವುದು ಸಹಜವಾಗಿದೆ. ಸಣ್ಣಪುಟ್ಟ ಜಗಳ, ಅಕ್ರಮ ಸಂಬಂಧ ಹಾಗೂ ಇತರೆ ಕಾರಣಗಳಿಗೆ ಡಿವೋರ್ಸ್​ ಪಡೆಯುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದ್ರೆ ಗುಜರಾತ್​​ನ ಗಾಂಧಿನಗರದ ರಂದೇಶನ್​ ಗ್ರಾಮದ ದಂಪತಿ ಶೌಚಾಲಯದ ವಿಚಾರವಾಗಿ ಡಿವೋರ್ಸ್​ ಪಡೆದಿದ್ದಾರೆ.

ಎಂಟು ವರ್ಷಗಳ ಹಿಂದೆ ಯುವತಿ ರಂದೇಶನ್​​ ಗ್ರಾಮದ ಯುವಕನನ್ನು ಮದುವೆಯಾಗಿದ್ದರು. ಆದ್ರೆ, ಇದೀಗ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಯುವತಿ ವಿಚ್ಛೇದನ ಪಡೆದಿದ್ದಾಳೆ. ಯುವತಿ ಹತ್ತನೇ ತರಗತಿವರೆಗೆ ಓದಿದ್ದಾಳೆ. ಗಂಡನ ಮನೆಯವರಿಗೆ 6 ಎಕರೆ ಭೂಮಿ ಇದ್ದು, ತಿಂಗಳಿಗೆ 10 ಸಾವಿರ ರೂ. ಆದಾಯ ಬರುತ್ತಿತ್ತು. ಆದರೂ ಕೂಡ ಶೌಚಾಲಯ ಕಟ್ಟಿಸಿರಲಿಲ್ಲ.

ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಯುವತಿ ಎಷ್ಟೇ ಹೇಳಿದರೂ ಶೌಚಾಲಯ ಕಟ್ಟಿಸದ ಹಿನ್ನೆಲೆ ಇದರಿಂದ ಬೇಸತ್ತು ತನ್ನ ತವರು ಮನೆಗೆ ಹೋಗಿದ್ದಾಳೆ. ಮತ್ತೆ ಹೇಗೋ ರಾಜಿ ಮಾಡಿಕೊಂಡು ಪತಿ ಆಕೆಯನ್ನು ಮನೆಗೆ ಕರೆತಂದಿದ್ದ. ಬಳಿಕ ನಿತ್ಯ ಆಕೆಗೆ ಚಿತ್ರಹಿಂಸೆ ನೀಡಲು ಶುರು ಮಾಡಿದ. ಇದರಿಂದ ಮನನೊಂದ ಯುವತಿ ಲಂಘ್ನಾಜ್ ಠಾಣೆಗೆ ದೂರು ನೀಡಿದ್ದರು.

ಅದಲ್ಲದೆ ಇನ್ನೂ ಸುಮ್ಮನೆ ಕುಳಿತರೆ ಆಗುವುದಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಮುಂದೆ ಆತನೊಂದಿಗೆ ಜೀವನ ನಡೆಸಲಾಗುವುದಿಲ್ಲ ಎಂದು ಇದೀಗ ಅಂತಿಮವಾಗಿ ಗಂಡನಿಂದ ವಿಚ್ಛೇದನ ಪಡೆದಿದ್ದಾಳೆ.

ಈ ಘಟನೆ ಕುರಿತು ಹಲವು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಕೆಯ ಸ್ವಚ್ಛತೆ ಬಗೆಗಿನ ಕಾಳಜಿಯನ್ನು ತುಂಬಾ ಜನರು ಕೊಂಡಾಡಿದ್ದಾರೆ. ಅದಲ್ಲದೆ ಗಂಡನ ಮನೆಯವರ ಈ ಕೃತ್ಯಕ್ಕೆ ಅವರಿಗೆ ಗ್ರಾಮದಲ್ಲಿ ಛೀಮಾರಿ ಕೂಡ ಹಾಕಿದ್ದಾರೆ. ಸರ್ಕಾರದಿಂದ ಶೌಚಾಲಯದ ವ್ಯವಸ್ಥೆ ಇದ್ದರೂ ಕೂಡ ಅದನ್ನು ಕಾರ್ಯರೂಪಕ್ಕೆ ತಾರದೆ ಹಾಗೂ ಪತ್ನಿಗೆ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡನ ಮನೆಯವರಿಗೆ ಇದೀಗ ಕಾನೂನು ರೀತಿಯಲ್ಲಿ ಶಿಕ್ಷೆ ಎದುರಾಗುವ ಸಾಧ್ಯತೆಯಿದೆ.