Home News Divorce: ಮುದ್ದು ಮಗಳಿಗೆ ಹಿಡಿಸದ ಅಡುಗೆ ಮಾಡಿದ ಹೆಂಡತಿ – ಏಕಾಏಕಿ ಡೈವೋರ್ಸ್ ಕೊಟ್ಟ ಪತಿ...

Divorce: ಮುದ್ದು ಮಗಳಿಗೆ ಹಿಡಿಸದ ಅಡುಗೆ ಮಾಡಿದ ಹೆಂಡತಿ – ಏಕಾಏಕಿ ಡೈವೋರ್ಸ್ ಕೊಟ್ಟ ಪತಿ !!

Divorce

Hindu neighbor gifts plot of land

Hindu neighbour gifts land to Muslim journalist

Divorce Case:ಗಂಡ ಹೆಂಡತಿಯರ (Husband And Wife)ನಡುವೆ ಸಣ್ಣ ಪುಟ್ಟ ಮನಸ್ತಾಪ ಆಗುವುದು ಸಹಜ. ಆದರೆ, ಇಲ್ಲೊಂದು ಕಡೆ ಹೆಂಡತಿ ಮುದ್ದು ಮಗಳಿಗೆ ಹಿಡಿಸದ ಅಡಿಗೆ ಮಾಡದ ಹಿನ್ನೆಲೆ ಪತಿ ಏಕಾಏಕಿ ಡೈವೋರ್ಸ್(Divorce)ನೀಡಿದ ಘಟನೆ ವರದಿಯಾಗಿದೆ.

ಕೆಲವು ಮಕ್ಕಳಿಗೆ ಕೆಲವೊಂದು ಆಹಾರಗಳು ಇಷ್ಟವಾಗುವುದಿಲ್ಲ. ಹೀಗಾಗಿ, ಒಬ್ಬೊಬ್ಬರಿಗೆ ಒಂದೊಂದು ಅಡಿಗೆ ಮಾಡುವವ ಕೆಲಸ ತಾಯಿಗೆ ಖಾಯಂ ಆಗಿರುತ್ತದೆ. ಈ ರೀತಿ ಅಭ್ಯಾಸ ರೂಡಿಸಿಕೊಂಡ ಮಕ್ಕಳನ್ನು ತಿದ್ದುವ ಕೆಲಸವನ್ನು ತಾಯಿ ಮಾಡುವುದು ಸಹಜ. ಆದರೆ, ಈ ವಿಚಾರಕ್ಕೆ ಮನೆ (home) ಯಲ್ಲಿ ಗಲಾಟೆ- ಜಗಳ ನಡೆಯುವುದುಂಟು. ಇಲ್ಲೊಬ್ಬ ವ್ಯಕ್ತಿ ಮಗಳಿಗೆ ಇಷ್ಟವಾದ ಅಡುಗೆಯನ್ನು ಪತ್ನಿ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಗೆ ವಿಚ್ಛೇದನ (Divorce) ನೀಡಿದ್ದಾನೆ.

ವ್ಯಕ್ತಿಯೊಬ್ಬ ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಗೆ 16 ವರ್ಷದ ಮಗಳಿದ್ದಾಳೆ.ಆಕೆ ಆಹಾರದ ವಿಚಾರದಲ್ಲಿ ಬಹಳ ಚ್ಯೂಸಿಯಾಗಿದ್ದು, ವೋಟ್ಮಿಲ್, ಟೊಮಾಟೊ, ಬೆಳ್ಳುಳ್ಳಿ, ಅಣಬೆಯಂತಹ ಆಹಾರ ಆಕೆಗೆ ಇಷ್ಟವಾಗದು.ಈ ನಡುವೆ ಮಗಳಿಗೆ ಇಷ್ಟವಾಗದ ಆಹಾರವನ್ನು ತಾಯಿ ತಯಾರಿಸಿದ್ದಳು ಎನ್ನುವ ಕಾರಣಕ್ಕೆ ಮಗಳು ಕೋಪಗೊಂಡು ಊಟ ಮಾಡದೇ ಕುಳಿತಿದ್ದಾಳೆ. ಈ ವಿಚಾರ ತಂದೆಗೆ ತಿಳಿದು ಎರಡನೇ ಹೆಂಡತಿಯನ್ನು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಹೆಂಡತಿ ಹಸಿವಾದರೆ ಮಗಳು ಊಟ ಮಾಡುತ್ತಾಳೆ ಎಂದು ಪತಿಗೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪತಿ ಪತ್ನಿಗೆ ವಿಚ್ಛೇಧನ ನೀಡಿದ ಘಟನೆ ನಡೆದಿದೆ. ಇಂತಹ ಕ್ಷುಲಕ ಕಾರಣಕ್ಕೆ ಕೂಡ ವಿಚ್ಛೇಧನ ನೀಡಬಹುದೇ? ಎಂಬ ಪ್ರಶ್ನೆ ಸಹಜವಾಗಿ ನೆಟ್ಟಿಗರನ್ನ ಕಾಡುತ್ತಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವರು ಪತಿ ಮಾಡಿದ್ದೆ ಸರಿ ಎಂದು ವಾದ ಮಾಡಿದರೆ,ಮತ್ತೆ ಕೆಲವರು ಮಗಳ ಹಠಮಾರಿತನ ಇಳಿಸುವ ಪ್ರಯತ್ನ ಮಾಡಿಲ್ಲವೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

 

ಇದನ್ನು ಓದಿ: PM Kisan: ಪಿಎಂ ಕಿಸಾನ್ 15ನೇ ಕಂತಿನ ಹಣ ಇವರಿಗಿಲ್ಲ ಇವರಿಗಿಲ್ಲ! ಕಾರಣವೇನು ತಿಳಿಯಿರಿ ?