Home News Rajasthan : ಹನಿಮೂನ್‌ ಮೂಡಲ್ಲಿ ರೂಂ ಒಳಗೆ ಹೋದ ಗಂಡ; ಮರುದಿನ ಹೆಂಡತಿಯ ಅಣ್ಣನಾಗಿ ಹೊರಗಡೆ...

Rajasthan : ಹನಿಮೂನ್‌ ಮೂಡಲ್ಲಿ ರೂಂ ಒಳಗೆ ಹೋದ ಗಂಡ; ಮರುದಿನ ಹೆಂಡತಿಯ ಅಣ್ಣನಾಗಿ ಹೊರಗಡೆ ಬಂದ!! ರಾತ್ರಿ ಬೆಳಗಾಗೋದ್ರಲ್ಲಿ ನಡೆದದ್ದೇನು?

honeymoon
Image source- Asianet suvarna news

Hindu neighbor gifts plot of land

Hindu neighbour gifts land to Muslim journalist

honeymoon:ಹನಿಹೂನ್‌(honeymoon) ಮೂಡ್‌ನಲ್ಲಿದ್ದ ಹುಡುಗ ರಾತ್ರೋರಾತ್ರಿ ತನ್ನ ಹೆಂಡತಿಗೆ ಅಣ್ಣನಾಗಿ(Brother) ಹೋಗಿದ್ದಾನೆ. ಆತನ ಹೆಂಡತಿ ತನ್ನನ್ನು ರಕ್ಷಿಸುವಂತೆ ರಾಷ್ಟ್ರಪತಿ(President), ಪ್ರಧಾನಿ(PM), ಮುಖ್ಯಮಂತ್ರಿ(CM) ಹಾಗೂ ಬಾಲಿವುಡ್‌ ನಟ ಸೋನು ಸೂದ್‌(Sonu sood)ಗೆಲ್ಲರಿಗೂ ಮನವಿ ಮಾಡಿದ್ದಾಳೆ.

 

ಹೌದು, ರಾಜಸ್ಥಾನದ(Rajasthan) ಜೋಧ್‌ಪುರ(Jodhpur) ಜಿಲ್ಲೆಯ ಬಾಲಾಸೇರ್‌ ಜಿಲ್ಲೆಯ 22 ವರ್ಷದ ತಾನಿಯಾ ಶರ್ಮ(taniya sharma) ಎಂಬಾಕೆ ಚಿಕ್ಕಂದಿನಿಂದಲೂ ತಾನು ಪ್ರೀತಿ ಮಾಡ್ತಿದ್ದ ಪಕ್ಕದಮನೆಯ ಹುಡುಗನ ಜೊತೆ ಓಡಿಹೋಗಿ ವಿವಾಹ ಮಾಡಿಕೊಂಡಿದ್ದರು. ಅದರೆ, ಅಳಿಯ ತಮ್ಮ ಜಾತಿಯವನಲ್ಲ ಎನ್ನುವ ಕಾರಣಕ್ಕಾಗಿ ಸಿಟ್ಟಾಗಿದ್ದ ಅಪ್ಪ, ಕಂಡಕಂಡಲೆಲ್ಲ ಅಲೆದಾಡಿ, ಕಷ್ಟಪಟ್ಟು ಮಗಳನ್ನು ಹೇಗೋ ಹುಡುಕಿ ಕರೆತಂದಿದ್ದಾನೆ. ಅಲ್ಲದೆ ಆಕೆಗೆ ಛತ್ತೀಸ್‌ಗಢದ(Chattisgarh)ಕಂಕೇರ್‌ ಜಿಲ್ಲೆಯ ಅಂತಗರ್‌ನ ಜೀತೇಂದ್ರ ಶರ್ಮ(Jitendra sharma) ಎಂಬುವವನೊಡನೆ 2ನೇ ಮದುವೆಯನ್ನೂ ಮಾಡಿದ್ದಾನೆ. ಆದರೆ ಅಚ್ಚರಿ ಎಂಬಂತೆ, 2ನೇ ಬಾರಿ ಮದುವೆಯಾದವನನ್ನು ಪತಿಯೆಂದು ಸ್ವೀಕರಿಸದ ಆಕೆ, ನಡು ರಾತ್ರಿ ರಾಖಿ ಕಟ್ಟಿ ಅಣ್ಣಾ ಎಂದು ಬಾಯ್ತುಂಬ ಕರೆದಿದ್ದಾಳೆ. ಇತ್ತ ಇನ್ನೇನು ಹನಿಹೂನ್‌ಗೆ ಹೋಗುವ ಮೂಡ್‌ನಲ್ಲಿದ್ದ ಹುಡುಗನಿಗೆ ನಿರಾಸೆಮಾಡಿಬಿಟ್ಟಿದ್ದಾಳೆ.

 

ಇಷ್ಟಕ್ಕೇ ಸುಮ್ಮನಾಗದ ಈ ಪುಣ್ಯಾತ್ಗಿತ್ತಿ ತನ್ನನ್ನು ರಕ್ಷಿಸುವಂತೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಬಾಲಿವುಡ್‌ ನಟ ಸೋನು ಸೂದ್‌ಗೆಲ್ಲರಿಗೂ ಮನವಿ ಮಾಡಿದ್ದಾಳೆ. ಈ ಮನವಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ಅಕೆಯನ್ನು ರಕ್ಷಿಸಿದ್ದು, ಸಖಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ.

 

ಅಂದಹಾಗೆ ತಾನಿಯಾ ಶರ್ಮಾಳ, ಬಾಲ್ಯದ ಪ್ರಿಯತಮ, ಮೊದಲ ಪತಿ ಸುರೇಂದ್ರ ಸಂಖ್ಲಾ(Surendra sankla) ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಾವು ಬಾಲ್ಯದಿಂದಲೂ ಒಟ್ಟಿಗೆ ಆಡಿದ್ದೇವೆ ಮತ್ತು ಓದಿದ್ದೇವೆ. ನಾವಿಬ್ಬರೂ ಎಂಎ(MA) ವರೆಗೆ ಓದಿದ್ದೇವೆ. ತಾನಿಯಾ ಹಾಗೂ ನನ್ನದು ಬೇರೆ ಬೇರೆ ಜಾತಿ. ಆಕೆಯ ತಂದೆ ನನ್ನನ್ನು ಅಳಿಯನನ್ನಾಗಿ ಒಪ್ಪಿರಲಿಲ್ಲ. ತಾರುಣಾಳ ಒಪ್ಪಿಗೆ ಇಲ್ಲದೆ, ರಾಜಸ್ಥಾನದಲ್ಲಿ ಕ್ರಿಮಿನಲ್‌ ಹಿನ್ನಲೆ ಹೊಂದಿದ್ದ, ಅತ್ಯಾಚಾರ ಪ್ರಕರಣದಲ್ಲಿ ಆ ವ್ಯಕ್ತಿ 6 ತಿಂಗಳ ಕಾಲ ಜೈಲಿನಲ್ಲಿದ್ದ ಯುವಕನೊಂದಿಗೆ ಎಂಗೇಜ್‌ಮೆಂಟ್‌ ಕೂಡ ಮಾಡಿದ್ದರು” ಎಂದಿದ್ದಾರೆ.

 

ಅಲ್ಲದೆ 2023ರ ಜನವರಿ 25 ರಂದು ಈಕೆಯ ಮದುವೆ ನಿಶ್ಚಯವಾಗಿತ್ತು. ದೂರವಾಗಲು ಒಪ್ಪದ ನಾವು ಹೀಗಾಗಿ ಜನವರಿ 13 ರಂದು ರಿಜಿಸ್ಟರ್‌ ಮ್ಯಾರೇಜ್‌ ಮಾಡಿಕೊಂಡಿದ್ದೆವು. ಆಕೆಯ ಕುಟುಂಬದ ಕಾರಣದಿಂದಾಗಿ ನಾವು ತಲೆಮರೆಸಿಕೊಂಡು ಓಡಾಡುತ್ತಿದ್ದೆವು. ಜೋಧಪುರ(Jodhpura) ಪೊಲೀಸ್‌ ಠಾಣೆಯಿಂದ ಭದ್ರತೆಯನ್ನೂ ಕೇಳಿದ್ದವು. ಆದರೆ, ಅವರು ನಮಗೆ ಭದ್ರತೆ ನೀಡಿರಲಿಲ್ಲ. ನಮ್ಮನ್ನು ಬಾಲಸೋರ್‌(Balsure) ಸ್ಟೇಷನ್‌ಗೆ ಕಳಿಸಿದ್ದರು. ಅಲ್ಲಿ 12 ಗಂಟೆಗಳ ಕಾಲ ನಮ್ಮನ್ನು ಇರಿಸಿಕೊಂಡು ಹೇಳಿಕೆ ಪಡೆದುಕೊಂಡಿದ್ದರು. ಇದೇ ಠಾಣೆಯಲ್ಲಿ ತಾರುಣಾ ಮೇಲೆ ಹಲ್ಲೆಯೂ ಆಗಿತ್ತಲ್ಲದೆ, ಆಕೆಯನ್ನು ಅವರ ಕುಟುಂಬ ಕರೆದುಕೊಂಡು ಹೋಗಿತ್ತು.. ಆ ನಂತರವೂ ತಾರುಣಾಗೆ ಚಿತ್ರಹಿಂಸೆ ನೀಡಿದ್ದರು. ವಿಚ್ಛೇದನವೇ ಇಲ್ಲದೆ ಆಕೆಗೆ 2ನೇ ಮದುವೆ ಮಾಡಲಾಗಿತ್ತು ಎಂದಿದ್ದಾರೆ.

 

ಇನ್ನು ಈ ಬಗ್ಗೆ ಮಾತನಾಡಿರುವ ಜೀತೇಂದ್ರ, ‘ತಾನಿಯಾ ವಿವಿಧ ರೀತಿಯಲ್ಲಿ ನನಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾಳೆ. ಗಾಜಿನ ಬಳೆಯನ್ನು ಜಜ್ಜಿ ನುಂಗುವ ಪ್ರಯತ್ನ ಮಾಡಿದ್ದಳು. ಆಕೆಯ ಹೃದಯ ಗೆಲ್ಲುವ ಸಲುವಾಗಿ, ರಾಖಿ ಕಟ್ಟುತ್ತೇನೆ ಎಂದಾಗ ಕಟ್ಟಿಸಿಕೊಂಡಿದ್ದೇನೆ. ಆಕೆಯನ್ನೂ ಎಂದೂ ತಂಗಿ ಎಂದಾಗಲಿ ಆಂಟಿ ಎಂದಾಗಲಿ ಕರೆದಿಲ್ಲ. ನನಗೆ ಮಾತುಗಳೇ ಬರುತ್ತಿಲ್ಲ. ನನ್ನನ್ನು ಸಿಕ್ಕಿ ಹಾಕಿಸಲಾಗಿದೆ. ನನ್ನ ಇಡೀ ಜೀವನ ಹಾಳಾಗಿದೆ. ಒಮ್ಮೊಮ್ಮೆ ನಾನು ಒತ್ತಾಯಪೂರ್ವಕವಾಗಿ ಮದುವೆ ಆಗಿಲ್ಲ ಎನ್ನುತ್ತಾಳೆ’ ಎಂದು ತಿಳಿಸಿದ್ದಾರೆ.

 

ಈ ನಡುವೆ ತಾನಿಯಾ ಮಾತನಾಡಿ “ನನಗೆ ಈಗಾಗಲೇ ಮದುವೆಯಾಗಿದೆ. ಒತ್ತಾಯದಿಂದ ನನ್ನ ಕುಟುಂಬ 2ನೇ ಮದುವೆ ಮಾಡಿದೆ. ನನ್ನ 2ನೇ ಪತಿಗೆ ನನ್ನ ಮೊದಲ ಮದುವೆಯ ಬಗ್ಗೆ ತಿಳಿಸಿದ್ದೇನೆ. ಆತನಿಗೆ ರಾಖಿಯನ್ನೂ ಕೂಡ ಕಟ್ಟಿದ್ದೇನೆ. ಆ ಬಳಿಕ ಈತ ಒಮ್ಮೊಮ್ಮೆ ನನ್ನನ್ನು ತಂಗಿ ಎಂತಲೂ ಇನ್ನೊಮ್ಮೆ ಆಂಟಿ ಎಂದೂ ಕರೆಯುತ್ತಾನೆ. ಈಗ ನಾನು ಮೊದಲ ಪತಿಯ ಜೊತೆಗೆ ಹೋಗುತ್ತೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ಕೊನೆಗೂ ಮೌನ ಮುರಿದ HDK !!