Home News ಗಂಡನಿಂದ ದೂರವಾಗಬೇಕೆಂದುಕೊಂಡು ಗಂಟು ಮೂಟೆ ಹೊತ್ತು ಹೊರಟ ಆಕೆಯನ್ನು ಮೊಬೈಲ್ ಚಾರ್ಜರ್ ಮರಳಿ ಗಂಡನ ಮನೆ...

ಗಂಡನಿಂದ ದೂರವಾಗಬೇಕೆಂದುಕೊಂಡು ಗಂಟು ಮೂಟೆ ಹೊತ್ತು ಹೊರಟ ಆಕೆಯನ್ನು ಮೊಬೈಲ್ ಚಾರ್ಜರ್ ಮರಳಿ ಗಂಡನ ಮನೆ ಸೇರಿಸಿತು!! ಗಂಡ-ಹೆಂಡತಿ-ರೈಲ್ವೇ ಸಿಬ್ಬಂದಿ!!ಮೂವರಲ್ಲಿ ಕೊನೆಗೆ ರೈಸಿದ್ದು ಯಾರು?

Hindu neighbor gifts plot of land

Hindu neighbour gifts land to Muslim journalist

ಗಂಡನ ದುರ್ಬುದ್ಧಿ, ಕೆಟ್ಟ ಚಟಗಳಿಂದ ಬೇಸತ್ತ ಮಹಿಳೆಯೊಬ್ಬರು ಹೇಗಾದರೂ ಮಾಡಿ ಆತನಿಂದ ಮುಕ್ತಿ ಪಡೆಯಬೇಕೆಂದು ಆತನನ್ನು ತೊರೆದು, ತನ್ನ ಗಂಟು ಮೂಟೆ ಹೊತ್ತುಕೊಂಡು ತವರು ಮನೆಗೆ ಹೊರಟು ರೈಲ್ವೆ ನಿಲ್ದಾಣ ಕ್ಕೆ ಬಂದಿದ್ದ ಆ ಮಹಿಳೆಯನ್ನು ಮೊಬೈಲ್ ಚಾರ್ಜರ್ ಒಂದು ಪುನಃ ಮನೆ ಸೇರುವಂತೆ ಮಾಡಿದ ಘಟನೆಯೊಂದು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದೆ.

ಬೈಯ್ಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದ ನಿವಾಸಿ ಒರಿಸ್ಸಾ ಮೂಲದ ಯಮುನಾ (25) ಹಾಗೂ ಆಕೆಯ ಪತಿ ದಿನೇಶ್ ಈ ಪ್ರಕರಣದ ಪಾತ್ರಧಾರಿಗಳು. ಮಹಿಳೆ ತನ್ನ ಮನೆಗೆ ಮರಳುವ ಮೂಲಕ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಭಾನುವಾರ ಅನುಮಾನಾಸ್ಪದವಾಗಿ ಕಾಣಸಿಕ್ಕ ಬ್ಯಾಗ್‌ನಿಂದಾಗಿ ರೈಲು ನಿಲ್ದಾಣದಲ್ಲಿ ಉಂಟಾಗಿದ್ದ ಬಾಂಬ್ ಭೀತಿ ಕೂಡಾ ನಿವಾರಣೆಯಾಗಿದೆ.

ಒಡಿಶಾ ಮೂಲದ ಯಮುನಾ ನಗರದಲ್ಲಿ ಮನೆ ಕೆಲಸ ಮಾಡುತ್ತಿದ್ದರೆ, ಈಕೆಯ ಪತಿ ದಿನೇಶ್ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ದಿನೇಶ್ ಪಬ್‌ಜಿ ಹುಚ್ಚಿಗೆ ಬಿದ್ದು ಇದೇ ವಿಷಯಕ್ಕೆ ಪತ್ನಿ ಜೊತೆ ಕಿರಿಕ್ ಮಾಡಿಕೊಂಡಿದ್ದ. ಇದರಿಂದ ರೋಸಿ ಹೋಗಿದ್ದ ಯಮುನಾ ಒಡಿಶಾದ ತನ್ನೂರಿಗೆ ಹಿಂದಿರುಗಲು ಮುಂದಾಗಿದ್ದಳು. ಭಾನುವಾರ ಮಧ್ಯಾಹ್ನ ಬೆಂಗಳೂರಿನಿಂದ ರೈಲಿನಲ್ಲಿ ಒಡಿಶಾಗೆ ತೆರಳಲು ಬೈಯ್ಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣಕ್ಕೆ ಟ್ರಾಲಿ ಲಗೇಜ್ ಬ್ಯಾಗ್ ಸಮೇತ ಬಂದಿದ್ದಳು. ಮೆಟ್ರೋ ಹತ್ತಬೇಕೆನ್ನುವಷ್ಟರಲ್ಲಿ ತಾನು ಮೊಬೈಲ್‌ಫೋನ್ ಮನೆಯಲ್ಲೇ ಮರೆತು ಬಂದಿರುವುದು ಗಮನಕ್ಕೆ ಬಂದಿತ್ತು. ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಮತ್ತೆ ಬ್ಯಾಗ್ ಸಮೇತ ಮನೆಗೆ ತೆರಳಲು ಯಮುನಾಗೆ ಕಷ್ಟವಾಗಿತ್ತು. ಹೀಗಾಗಿ ತನ್ನ ಟ್ರಾಲಿ ಲಗೇಜ್ ಬ್ಯಾಗ್ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಎಕ್ಸಿಟ್‌ಗೇಟ್‌ನ ಬಳಿ ಇಟ್ಟು ಮನೆಗೆ ಹೋಗಿದ್ದಳು.

ಪ್ರಯಾಣಿಕರಿಗೆ ಬಾಂಬ್ ಭೀತಿ: ಇತ್ತ ಅನುಮಾನಾಸ್ಪದ ಕಂಡು ಬಂದ ಟ್ರಾಲಿ ಬ್ಯಾಗ್ ಗಮನಿಸಿದ ಮೆಟ್ರೋ ಸಿಬ್ಬಂದಿ ಸಂಶಯಗೊಂಡು ಮೆಟಲ್ ಡಿಟೆಕ್ಟರ್ ಮೂಲಕ ಪರಿಕ್ಷಿಸಿದಾಗ ಸೌಂಡ್ ಬ್ಲಿಂಕ್ ಆಗಿತ್ತು. ಆತಂಕಗೊಂಡ ಸಿಬ್ಬಂದಿ ಟ್ರಾಲಿ ಬ್ಯಾಗ್‌ನಲ್ಲಿ ಬಾಂಬ್ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ ನಿಲ್ದಾಣದಲ್ಲಿದ್ದ ಸಾರ್ವಜನಿಕರನ್ನು ಹೊರಗೆ ಕಳುಹಿಸಲಾಗಿತ್ತು. ವಿಚಾರ ತಿಳಿದು ಮೆಟ್ರೋ ಪ್ರಯಾಣಿಕರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು.

ಕೂಡಲೇ ಎಚ್ಚೆತ್ತುಕೊಂಡ ಬೈಯಪ್ಪನಹಳ್ಳಿ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ತಂಡದ ಸಿಬ್ಬಂದಿ ಜತೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಬಾಂಬ್ ನಿಷ್ಕ್ರಿಯ ತಂಡ ಮುನ್ನೆಚ್ಚರಿಕೆ ವಹಿಸಿ ಟ್ರಾಲಿ ಲಗೇಜ್ ಬ್ಯಾಗನ್ನು ತಮ್ಮ ಸಲಕರಣೆ ಸಹಾಯದಿಂದ ತೆರೆದಾಗ ಅದರೊಳಗೆ ಬಟ್ಟೆಗಳಿರುವುದನ್ನು ಕಂಡುಬಂದಿದೆ. ಬ್ಯಾಗ್‌ನಲ್ಲಿ ಯಾವುದೇ ಬಾಂಬ್ ಇಲ್ಲದಿರುವುದು ದೃಢಪಟ್ಟ ಬಳಿಕ ಮೆಟ್ರೋ ನಿಲ್ದಾಣದಲ್ಲಿ ನೆರೆದಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಪೊಲೀಸರು ಬ್ಯಾಗ್ ಪತ್ತೆಯಾದ ಜಾಗ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಬ್ಯಾಗ್ ಇಟ್ಟು ಹೋಗಿರುವುದು ಕಂಡ ಬಂದಿತ್ತು. ಕೆಲ ಹೊತ್ತಿನ ಬಳಿಕ ಯಮುನಾ ಮೆಟ್ರೋ ನಿಲ್ದಾಣಕ್ಕೆ ಬಂದು ತನ್ನ ಬ್ಯಾಗ್‌ಗಾಗಿ ಹುಡುಕಾಡಿ ಮೆಟ್ರೊ ಸಿಬ್ಬಂದಿ ಬಳಿ ಬ್ಯಾಗ್ ಬಗ್ಗೆ ಕೇಳಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಒಟ್ಟಿನಲ್ಲಿ ಗಂಡನನ್ನು ತೊರೆಯಲು ಮುಂದಾಗಿದ್ದ ಆ ಮಹಿಳೆಯನ್ನು ಮೊಬೈಲ್ ಚಾರ್ಜರ್ ಒಂದು ಮರಳಿ ಗಂಡನೊಂದಿಗೆ ಸೇರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.