Home latest ಶೇ.15 ರಷ್ಟು ಇಳಿಕೆ ಕಂಡ ಸೋಪಿನ ಬೆಲೆ | ಇನ್ನು ಮುಂದೆ ಸೋಪು ಅಗ್ಗ

ಶೇ.15 ರಷ್ಟು ಇಳಿಕೆ ಕಂಡ ಸೋಪಿನ ಬೆಲೆ | ಇನ್ನು ಮುಂದೆ ಸೋಪು ಅಗ್ಗ

Hindu neighbor gifts plot of land

Hindu neighbour gifts land to Muslim journalist

ಗ್ರಾಹಕರಿಗೆ ಇನ್ನೊಂದು ಗುಡ್ ನ್ಯೂಸ್ ಇದೆ. ಹೌದು
ತಾಳೆ ಎಣ್ಣೆ ಹಾಗೂ ಇತರ ಕಚ್ಚಾ ಸಾಮಗ್ರಿಗಳ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಸೋಪುಗಳ ಬೆಲೆ ಇಳಿಕೆ ಮಾಡಿದೆ. ಸೋಪಿನ ಬೆಲೆಯಲ್ಲಿ ಬರೋಬ್ಬರಿ ಶೆ.15 ರಷ್ಟು ಇಳಿಕೆಯಾಗಿದೆ. ಹಣದುಬ್ಬರ ಹೆಚ್ಚಳದ ಕಾರಣ ಸೋಪ್ ಬೇಡಿಕೆ ಕೂಡ ತಗ್ಗಿದೆ ಎಂದು ಹೇಳಲಾಗಿದೆ.

ಹಿಂದೂಸ್ತಾನ ಯುನಿಲಿವರ್ ಲಿಮಿಟೆಡ್, ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್ ಲಿ.(ಜಿಸಿಪಿಎಲ್) ಕೆಲವು ಬ್ರ್ಯಾಂಡ್ ಸೋಪುಗಳ ಬೆಲೆಯಲ್ಲಿ ಶೇ.15ರಷ್ಟು ಇಳಿಕೆ ಮಾಡಿವೆ. ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಲೈಫ್ ಬಾಯ್ ಹಾಗೂ ಲಕ್ಸ್ ಸೋಪಿನ ಬೆಲೆಯಲ್ಲಿ ಶೇ.5-ಶೇ.11ರಷ್ಟು ಇಳಿಕೆ ಮಾಡಿವೆ. ಗೋದ್ರೇಜ್ ಗ್ರೂಪ್ ಉಪಸಂಸ್ಥೆ ಜಿಸಿಪಿಎಲ್ ಗೋದ್ರೇಜ್ ನಂ.1 ಸೋಪಿನ ಬೆಲೆಗಳಲ್ಲಿ ಶೇ.13-ಶೇ.15ರಷ್ಟುಇಳಿಕೆ ಮಾಡಿವೆ.

ತೈಲದ ಅತಿದೊಡ್ಡ ರಫ್ತುದಾರರಾದ ಇಂಡೋನೇಷ್ಯಾ ಏಪ್ರಿಲ್ 28 ರಂದು ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧವನ್ನು ವಿಧಿಸಿದಾಗ ತಾಳೆ ಎಣ್ಣೆ ಬೆಲೆ ಜಾಗತಿಕವಾಗಿ ತೀವ್ರ ಏರಿಕೆ ಕಂಡಿತ್ತು. ಆದರೆ, ಮೂರು ವಾರಗಳ ನಂತರ ಇಂಡೋನೇಷ್ಯಾ ಈ ನಿಷೇಧವನ್ನು ರದ್ದುಗೊಳಿಸಿತ್ತು. ಇತ್ತೀಚೆಗೆ ಬೆಲೆಯೇರಿಕೆ ತಡೆಗೆ ಕೇಂದ್ರ ಸರ್ಕಾರ, ಖಾದ್ಯ ತೈಲ ಆಮದುಗಳ ಮೇಲಿನ ರಿಯಾಯಿತಿ ಸುಂಕಗಳನ್ನು ಆರು ತಿಂಗಳವರೆಗೆ ಅಂದರೆ, 2023ರ ಮಾರ್ಚ್‌ 31ರವರೆಗೆ ವಿಸ್ತರಿಸಿದೆ. ಹೀಗಾಗಿ ತಾಳೆ ಎಣ್ಣೆ ಬೆಲೆ ಸದ್ಯಕ್ಕೆ ಏರಿಕೆಯಾಗೋದಿಲ್ಲ ಎಂಬ ನಿರೀಕ್ಷೆಯಿದೆ.

ತಾಳೆ ಎಣ್ಣೆ ಸೇರಿದಂತೆ ಖಾದ್ಯ ತೈಲಗಳ ಆಮದಿನ ಮೇಲೆ ಸರ್ಕಾರ ವಿಧಿಸುವ ಒಟ್ಟು ತೆರಿಗೆ ಪ್ರಮಾಣವು 5.5% ಆಗಿದೆ. ಫೆಬ್ರವರಿ 2022 ರಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಮೂಲ ಕಸ್ಟಮ್ಸ್ ಸುಂಕ ಮನ್ನಾ ಸೆಪ್ಟೆಂಬರ್ 30 ರವರೆಗೆ ಅನ್ವಯಿಸುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ (Palm oil) ಹಾಗೂ ಇತರ ಅಗತ್ಯ ಕಚ್ಚಾ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರೋದೇ ಸೋಪ್ ( soap) ಬೆಲೆ ಇಳಿಕೆಗೆ ಕಾರಣ.

ಗೋದ್ರೇಜ್ ನಂ.1 ಸೋಪಿನ ಬೆಲೆಯಲ್ಲಿ ಶೇ.13ರಿಂದ ಶೇ.15ರಷ್ಟು ಇಳಿಕೆ ಮಾಡಲಾಗಿದೆ. ಗೋದ್ರೇಜ್ ನಂ.1 ಸೋಪಿನ 5 ಸೋಪುಗಳನ್ನು ಒಳಗೊಂಡ 100ಗ್ರಾಂ ಪ್ಯಾಕ್ ಬೆಲೆಯನ್ನು 140ರೂ.ನಿಂದ 120ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಜಿಸಿಪಿಎಲ್ ಸಿಇಒ ಸಮೀರ್ ಶಾ ತಿಳಿಸಿದ್ದಾರೆ. “ಕಚ್ಚಾ ಸಾಮಗ್ರಿಗಳ ಬೆಲೆ ಇಳಿಕೆಯಾಗುತ್ತಿದ್ದು, ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರುವ ಮೊದಲ ಕಂಪನಿ ಜಿಸಿಪಿಎಲ್ ಆಗಿದೆ’ ಎಂದು ಶಾ ಹೇಳಿದ್ದಾರೆ.

ತಾಳೆ ಎಣ್ಣೆ ( Palm Oil) ಹಾಗೂ ಅದರ ಉಪ ಉತ್ಪನ್ನಗಳನ್ನು ಸೋಪು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದರೆ, ತಾಳೆ ಎಣ್ಣೆ ಬೆಲೆ ಹೆಚ್ಚಳದ ಪರಿಣಾಮ ಸೋಪು ತಯಾರಿಕ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೀಡಾಗಿದ್ದವು. ಆದರೆ, ಈಗ ತಾಳೆ ಎಣ್ಣೆ ಬೆಲೆ ಇಳಿಕೆಯಾದ ಕಾರಣ, ಹಣದುಬ್ಬರಿಂದ ತಗ್ಗಿರುವ ಬೇಡಿಕೆ ಹೆಚ್ಚಿಸಿಕೊಳ್ಳಲು ಸೋಪ್ ಕಂಪನಿಗಳು ಸೋಪುಗಳ ಬೆಲೆ ಇಳಿಕೆಗೆ ಮುಂದಾಗಿವೆ