Home News HMPV: 8 ತಿಂಗಳ ಮಗು HMPV ಸೋಂಕಿಗೆ ಒಳಗಾಗಿದ್ದು ಹೇಗೆ? ತಜ್ಞರು ಹೇಳಿದ್ದೇನು?

HMPV: 8 ತಿಂಗಳ ಮಗು HMPV ಸೋಂಕಿಗೆ ಒಳಗಾಗಿದ್ದು ಹೇಗೆ? ತಜ್ಞರು ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

HMPV: ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಸೋಂಕು ಕರ್ನಾಟಕದಲ್ಲಿ ಮೂರು ತಿಂಗಳು ಮತ್ತು ಎಂಟು ತಿಂಗಳ ಇಬ್ಬರು ಮಕ್ಕಳಲ್ಲಿ ಕಂಡು ಬಂದಿದೆ. ಈ ವೈರಸ್ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ. ಮೂರು ಪ್ರಕರಣಗಳು ಬೆಳಕಿಗೆ ಬಂದ ನಂತರ ಜನರು ಆತಂಕಕ್ಕೊಳಗಾಗಿದ್ದಾರೆ. ಕರ್ನಾಟಕದಲ್ಲಿ ಎರಡು HMPV ಸೋಂಕಿತರು ಪತ್ತೆಯಾಗಿದ್ದಾರೆ. ಇದಲ್ಲದೆ, ಗುಜರಾತ್‌ನಲ್ಲಿ 2 ವರ್ಷದ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿದೆ. ಮಗುವನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಭಾರತದಿಂದ ಹೊರಗೆ ಹೋಗಿಲ್ಲ. ಅಂತರಾಷ್ಟ್ರೀಯ ಪ್ರವಾಸ ಮಾಡಿಲ್ಲ. ಹಾಗಾದರೆ ಇಬ್ಬರಿಗೂ ಈ ವೈರಸ್ ಹೇಗೆ ತಗುಲಿತು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. ಆದಾಗ್ಯೂ, ಈ ಎರಡು ಪ್ರಕರಣಗಳು ಚೀನಾದಲ್ಲಿ ವೇಗವಾಗಿ ಹರಡುತ್ತಿರುವ HMPV ಯ ಒಂದೇ ತಳಿಗೆ ಸೇರಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಎಚ್‌ಎಂಪಿವಿ ವೈರಸ್ ಈಗಾಗಲೇ ದೇಶದಲ್ಲಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ, ಸಾಮಾನ್ಯ ಶೀತದ ವೈರಸ್‌ನಂತೆ, ಹೆಚ್‌ಎಂಪಿವಿ ವೈರಸ್ ದೇಶದಲ್ಲಿ ಹರಡುತ್ತಿದೆ. ಇದು ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ. ಚಳಿಗಾಲದಲ್ಲಿ ಈ ವೈರಸ್‌ ಹೆಚ್ಚುತ್ತದೆ. ಹೆಚ್‌ಎಂಪಿವಿಗೆ ಕರೋನಾ ಅವಧಿಯಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ವೈರಸ್‌ನಿಂದ ತಪ್ಪಿಸಿಕೊಳ್ಳಲು ಮಾಸ್ಕ್‌ ಹಾಕಿಕೊಳ್ಳುವುದು ಉತ್ತಮ. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ವೈರಸ್‌ನಿಂದ ದೂರವಿಡಬಹುದು. ಮಕ್ಕಳಿಗೆ ಆರೋಗ್ಯ ಸರಿ ಇಲ್ಲದಿದ್ದ ಸಂದರ್ಭದಲ್ಲಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುವುದು ಉತ್ತಮ. ಸಾಕಷ್ಟ ನೀರು ಕುಡಿಯಬೇಕು. ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ಜಾಗರೂಕತೆ ಅಗತ್ಯ. ಸುಳ್ಳು ಸುದ್ದಿಗಳನ್ನು ಹರಡಿ ಜನರು ಭಯಭೀತರಾಗಬಾರದು ಮತ್ತು ಭಯದ ವಾತಾವರಣವನ್ನು ಸೃಷ್ಟಿಸಬಾರದು ಎಂದು ಸಲಹೆ ನೀಡಿದರು.

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾತನಾಡಿ, 11 ವರ್ಷದೊಳಗಿನ ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಉಸಿರಾಟದ ಸಮಸ್ಯೆ ಇದ್ದರೆ ಈ ರೋಗ ಬರಲು ಕೇವಲ 1% ಸಾಧ್ಯತೆ ಅಷ್ಟೇ ಸಾಧ್ಯ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.