Home News Baby Death: ಮನೆ ಬೆಳಗಬೇಕಾದ ದೇವರ ದೀಪ ಕಂದಮ್ಮನ ಜೀವ ತೆಗೆಯಿತು

Baby Death: ಮನೆ ಬೆಳಗಬೇಕಾದ ದೇವರ ದೀಪ ಕಂದಮ್ಮನ ಜೀವ ತೆಗೆಯಿತು

Baby Death

Hindu neighbor gifts plot of land

Hindu neighbour gifts land to Muslim journalist

Baby Death: ದೇವರಿಗೆ ಹಚ್ಚಿಟ್ಟಿದ್ದ ದೀಪದ ಬೆಂಕಿ ಪೂರ್ತಿ ಮನೆಗೆ ತಗುಲಿ ಮನೆಯಲ್ಲಿದ್ದ ಮಗು ಸಜೀವ ದಹನವಾದ (Baby Death) ಆಘಾತಕಾರಿ ಘಟನೆ ಘಾಟಾ ಗ್ರಾಮದಲ್ಲಿನ ಹರಿಜನ ಕಾಲೋನಿಯಲ್ಲಿ ನಡೆದಿದೆ.

ರಾಜಸ್ಥಾನದ ಭರತ್‌ಪುರ ಮೂಲದ ಸತೀಶ್‌ ಕುಮಾರ್‌ ಎಂಬುವವರ ಬಾಡಿಗೆ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆ ಪರಿಣಾಮ ಮನೆಯಲ್ಲಿನ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಮೃತ ಮಗುವನ್ನು ಮನೋಜ್ ಎಂದು ಗುರುತಿಸಲಾಗಿದೆ.

ಅಂದು ಸತೀಶ್‌ ಕುಮಾರ್ ಅವರ ಪತ್ನಿ ತಮ್ಮ ಮಗ (child) ಮನೋಜ್‌ನನ್ನು ಮನೆಯ ಒಳಗೆ ಬಿಟ್ಟು, ಹೊರಗಿನಿಂದ ಮನೆಗೆ ಬೀಗ ಹಾಕಿಕೊಂಡು ತನ್ನ ಇನ್ನೊಬ್ಬ ಮಗನನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿದ್ದರು. ಈ ವೇಳೆ ಮನೆಯೊಳಗೆ ದೇವರಿಗೆ ಹಚ್ಚಿಟ್ಟಿದ್ದ ದೀಪವು ಮಗು ಆಟವಾಡುತ್ತಿದ್ದ ಹಾಸಿಗೆಯ
ಮೇಲೆ ಬಿದ್ದಿದೆ. ಇದರ ಪರಿಣಾಮ ಹಾಸಿಗೆ ಪೂರ್ತಿ ಬೆಂಕಿ ಹತ್ತಿದ್ದು, ನಂತರ ಈ ಬೆಂಕಿ ಇಡೀ ಮನೆಗೆ ಆವರಿಸಿದೆ. ಅಲ್ಲದೆ, ಅಲ್ಲೇ ಆಟವಾಡುತ್ತಿದ್ದ ಮನೋಜ್ ಗೂ ಬೆಂಕಿ ತಗುಲಿದ್ದು, ಮಗು ಬೆಂಕಿಗೆ ಸಜೀವ ದಹನವಾಗಿದೆ.

ಘಟನೆಯು ಸ್ಥಳೀಯರ ಗಮನಕ್ಕೆ ಬಂದಿದ್ದು, ತಕ್ಷಣವೇ ಅಗ್ನಿಶಾಮಕದಳಕ್ಕೆ ಕರೆ ಮಾಡಲಾಯಿತು. ಮಾಹಿತಿ ತಿಳಿದು ಅಗ್ನಿಶಾಮಕದಳದವರು ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದುರಾದೃಷ್ಟವಶಾತ್ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.