Home News G Parameshwar : ಶರಣಾಗತಿ ಆಗುತ್ತಿದ್ದಂತೆ ನಕ್ಸಲೆಟ್ ಗಳಿಗೆ ಶಾಕ್ ನೀಡಿದ ಗೃಹ ಸಚಿವ ಪರಮೇಶ್ವರ್!!

G Parameshwar : ಶರಣಾಗತಿ ಆಗುತ್ತಿದ್ದಂತೆ ನಕ್ಸಲೆಟ್ ಗಳಿಗೆ ಶಾಕ್ ನೀಡಿದ ಗೃಹ ಸಚಿವ ಪರಮೇಶ್ವರ್!!

Hindu neighbor gifts plot of land

Hindu neighbour gifts land to Muslim journalist

G Parameshwar : ವಿಕ್ರಂಗೌಡ ಎನ್‌ಕೌಂಟರ್ (Vikramgowda Encounter) ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ 6 ಮಂದಿ ನಕ್ಸಲರು (Naxals) ಇಂದು ಶಸ್ತ್ರಾಸ್ತ್ರವನ್ನು ತೊರೆದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಎದುರಲ್ಲೇ ಶರಣಾಗಲಿದ್ದಾರೆಈ ಬೆನ್ನಲ್ಲೇ ಶರಣಾದ ನಕ್ಸಲರಿಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಶಾಕ್ ನೀಡಿದ್ದಾರೆ.

ಹೌದು, ಶರಣಾಗತಿ ಆದ ಆರು ನಕ್ಸಲರಿಗೆ ಗೃಹ ಸಚಿವ ಪರಮೇಶ್ವರವರು ಕಾನೂನು ಕ್ರಮಗಳ ಶಾಕ್ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿ ಶರಣಾಗುವ ನಕ್ಸಲರ ವಿರುದ್ಧ ಹಲವು ಪ್ರಕರಣಗಳಿದ್ದು ಆ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ ಚಿಕ್ಕಮಗಳೂರಲ್ಲಿ ಇಂದು ನಕ್ಸಲರು ಶರಣಾಗತಿ ಆಗುತ್ತಿರುವ ವಿಚಾರವಾಗಿ, ಬಾಕಿ ಉಳಿದ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ಆದರೆ ವಿಕ್ರಂ ಎನ್ಕೌಂಟರ್ ವೇಳೆ ನಕ್ಸಲರಿಗೆ ಶರಣಾಗಲು ಕರೆ ನೀಡಲಾಗಿತ್ತು. ಕಾಡಿನಲ್ಲಿದ್ದು ಈ ರೀತಿ ಜೀವನ ಏಕೆ ಮಾಡುತ್ತಿದ್ದೀರಿ, ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಅಂತ ಹೇಳಿದ್ದೇವೆ. ನಕ್ಸಲರ ವಿರುದ್ಧ ಹಲವು ಪ್ರಕರಣಗಳಿವೆ ನಿಜ, ಪ್ರಕರಣಗಳ ವಿಚಾರದಲ್ಲಿ ಕಾನೂನು ಪ್ರಕಾರ ಕ್ರಮ ಆಗಲಿದೆ ಎಂದು ತಿಳಿಸಿದರು.