Home latest ಅನಿವಾರ್ಯ ಆದರೆ ಶರೀರದ ಅಂಗಾಂಗಳನ್ನು ಮಾರ್ಕೊಂಡ್ ಬದುಕೊತೇನೆ, ಆದರೆಮುಸಲ್ಮಾನರ ಬಾಡಿಗೆ ದುಡ್ಡಿನಿಂದಲ್ಲ !!|ಮನೆ ಖಾಲಿಯಿದೆ, ಹಿಂದೂಗಳಿಗೆ...

ಅನಿವಾರ್ಯ ಆದರೆ ಶರೀರದ ಅಂಗಾಂಗಳನ್ನು ಮಾರ್ಕೊಂಡ್ ಬದುಕೊತೇನೆ, ಆದರೆ
ಮುಸಲ್ಮಾನರ ಬಾಡಿಗೆ ದುಡ್ಡಿನಿಂದಲ್ಲ !!|ಮನೆ ಖಾಲಿಯಿದೆ, ಹಿಂದೂಗಳಿಗೆ ಮಾತ್ರ- ಮನೆ ಬಾಡಿಗೆದಾರರ ಬೋರ್ಡ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಈ ಹಿಂದೆ ಮನೆಯನ್ನು ಬಾಡಿಗೆಗೆ ನೀಡುವಾಗ ಜಾಹೀರಾತಿನಲ್ಲಿ ‘ಸಸ್ಯಹಾರಿಗಳಿಗೆ ಮಾತ್ರ ‘ ಅಂತ ನಮೂದಿಸುತ್ತಿದ್ದರು. ಮುಂದಕ್ಕೆ ‘ಬ್ರಾಹ್ಮಣರಿಗೆ ಮಾತ್ರ’ ಲಭ್ಯವಿದೆ ಎನ್ನುವ ಫಲಕ ಹಾಕಲು ಪ್ರಾರಂಭಿಸಿದರು. ಆದರೆ ಇದೀಗ ಧರ್ಮ ಸಂಘರ್ಷಣೆ ಯಾವ ಸ್ಥಿತಿಗೆ ತಲುಪಿದೆ ಎಂದರೆ ಮನೆ ಬಾಡಿಗೆ ಪಡೆಯುವುದಕ್ಕೂ ಧರ್ಮದ ಮುಖ ನೋಡುವಂತಾಗಿದೆ.

ಇಲ್ಲೇ, ಬೆಂಗಳೂರಿನ ಮನೆಯೊಂದರಲ್ಲಿ ವಿಚಿತ್ರ ಎಂಬಂತೆ  ‘ಹಿಂದುಗಳಿಗೆ ಮಾತ್ರ ಈ ಮನೆ ಲಭ್ಯ, ಮುಸ್ಲಿಂರಿಗೆ ಅಲ್ಲ’ ಎಂಬ ಫಲಕವನ್ನು ಗೇಟ್ ಗೆ ಹಾಕಿದ್ದಾರೆ. ಇದೀಗ ಈ ತೂಗು ಫಲಕದ ಚಿತ್ರ ವೈರಲ್ ಆಗಿದೆ. ಈ ಫಲಕವನ್ನು ದಯಾನಂದ ಎನ್ನುವವರು ಹಾಕಿದ್ದು, ಅದಕ್ಕೆ ತಮ್ಮದೇ ಷರಾ ಬೇರೆ ಬರೆದಿದ್ದು, ಅದು ಇನ್ನಷ್ಟು ವೈರಲ್ ಆಗಿದೆ.
‘ಅನಿವಾರ್ಯ ಎನಿಸಿದಾಗ ಶರೀರದ ಅಂಗಾಂಗಳನ್ನು ಮಾರಿಕೊಂಡು ಜೀವನ ಮಾಡಬಹುದು.
ಮುಸಲ್ಮಾನರ ಬಾಡಿಗೆ ದುಡ್ಡಿನಿಂದಲ್ಲ. ಮನೆ
ಖಾಲಿಯಿದೆ, ಹಿಂದೂಗಳಿಗೆ ಮಾತ್ರ’ ಎಂದು ಬರೆದು ಅದರ ಕೆಳಗೆ ತಮ್ಮನಂಬರ್ ಸಹ ಬರೆದಿದ್ದಾರೆ.

ಹೇಟ್ ವಾಚ್ ಕರ್ನಾಟಕ ಎಂಬ ಟ್ವಿಟರ್ ಅಕೌಂಟ್ ಈ ಚಿತ್ರವನ್ನು ಟ್ವಿಟ್ ಮಾಡಿದ್ದು, ಇದನ್ನು ಅಶೋಕ್
ಸ್ಪೇನ್ ಎನ್ನುವವರು ‘ಭಾರತದ ಸಿಲಿಕಾನ್ ವ್ಯಾಲಿ
ಎನ್ನಲಾಗುವ ಬೆಂಗಳೂರು’ ಎಂದು ವಿಷಾದದ ದನಿಯ
ಒಕ್ಕಣೆ ಬರೆದು ರಿಟ್ವೀಟ್ ಮಾಡಿದ್ದಾರೆ.

‘ಹೇಟ್ ವಾಚ್ ಕರ್ನಾಟಕ’ ಹಂಚಿಕೊಂಡಿರುವ ಚಿತ್ರಕ್ಕೆ
ಪ್ರತಿಕ್ರಿಯಿಸಿರುವ ಹಲವರು,’ದೇವರು ಅವರ ಕೋರಿಕೆ
ಒಪ್ಪಿಕೊಳ್ಳಲಿ’ (ಅಂಗಾಂಗ ಮಾರಿಕೊಳ್ಳುವ ಸ್ಥಿತಿ ಬರಲಿ)
ಎಂದು ಹಾರೈಸಿದ್ದಾರೆ. ರಾಜನ್ ಎನ್ನುವವರಂತೂ,’ಎಂಥ
ಬುದ್ಧಿವಂತ ಮನುಷ್ಯ ಒಂದು ವೇಳೆ ಈ ಮನುಷ್ಯನ
ಆರೋಗ್ಯ ಹಾಳಾದರೆ ವೈದ್ಯರು ಇವನಿಗೆ ಕೊಡುವ ರಕ್ತ
ಮತ್ತು ಅಂಗಾಂಗಳು ಸಂಪೂರ್ಣ ಹಿಂದೂ ಧರ್ಮಕ್ಕೆ
ಸೇರಿದವನದ್ದೇ ಆಗಿವೆ ಎಂದು ಖಾತ್ರಿಪಡಿಸಿಕೊಳ್ಳುತ್ತಾರೆ’
ಎಂದು ವ್ಯಂಗ್ಯವಾಡಿದ್ದಾರೆ.

ಮಹಿಳೆಯೊಬ್ಬರು ‘ಫಲಕದಲ್ಲಿರುವ ಅಂಗಾಂಗ ಮಾರುತ್ತೇನೆ’ ಎನ್ನುವ ಧಾಟಿಯ ಬರಹಕ್ಕೂ ಸಾಕಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.’ಅಂಗಾಂಗಗಳನ್ನು
ಮಾರಿಕೊಳ್ಳಬಾರದು. ದಾನ ಕೊಡಬೇಕು’ ಎಂದು ಟ್ವಿಟ್ ಮಾಡಿದ್ದಾರೆ.’ನಿಮ್ಮ ಅಂಗಾಂಗ ಮಾರಿಕೊಳ್ಳುವ ಪರಿಸ್ಥಿತಿ ಎಂದಿಗೂ ಬರದಿರಲಿ’ ಎಂದು ಸೈಯದ್ ನೈಮತುಲ್ಲಾ ಫಯಾಜ್ ಎನ್ನುವವರು ಹಾರೈಸಿದಿದ್ದಾರೆ.’ನಿಮಗೆ ಇಷ್ಟವಾಗುವಂಥ ಬಾಡಿಗೆದಾರರೇ ನಿಮಗೆ ಸಿಗಲಿ, ಅಂಗಾಂಗ ಮಾರಿಕೊಳ್ಳುವ ಪರಿಸ್ಥಿತಿ ನಿಮಗೆ ಬರುವುದು ಬೇಡ(ಮಾನಸಿಕವಾಗಿ) ಬೇಗ ಹುಷಾರಾಗಿ’ ಎಂದು
ಹಾರೈಸಿದ್ದಾರೆ.

ಸಮಾಜದಲ್ಲಿ ಪರಧರ್ಮದ ಬಗ್ಗೆ ದ್ವೇಷದ ಮನೋಭಾವ ಮೊದಲಿನಿಂದಲೂ ಇತ್ತು, ಈಗಷ್ಟೇ ಹೆಚ್ಚಾಗಿದೆಯೋ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ. ‘ ಹಿಂದೆಲ್ಲಾ ಅನ್ಯಾಯವನ್ನು  ಹಿಂದೂಗಳು ಸಹಿಸಿಕೊಳ್ತಾ ಇದ್ರು. ಹಿಂದೂಗಳ ತಾಳ್ಮೆಯನ್ನು ಮಿಸ್ ಯೂಸ್ ಮಾಡಿಕೊಂಡು ಶತಮಾನದ ಕಾಲ ಬಹುಸಂಖ್ಯಾತರನ್ನು ನೋಯಿಸಿದ ಶಾಪ ಇದೀಗ ಈ ರೂಪದಲ್ಲಿ ಎದ್ದು ನಿಂತಿದೆ  ‘ಅಂತ ಕಮೆಂಟ್ ಬಂದಿದೆ.
ಎಂಥ ಕಾಲ ಬಂತು. ಹಿಂದೂಗಳಲ್ಲಿ ಈ ಮಟ್ಟದ
ದ್ವೇಷ ತುಂಬಿಕೊಳ್ಳುತ್ತದೆ ಎಂದು ಊಹಿಸಲೂ ಆಗುತ್ತಿಲ್ಲ’
ಎಂದು ರಮೇಶ್ ಎನ್ನುವವರು ಹೇಳಿದ್ದಾರೆ !! ಮೊದಲಿನಿಂದಲೂ ಇಂಥ ಮನೋಭಾವ ಇತ್ತು. ಆದರೆ ಅದನ್ನು ಯಾರೂ ಹೀಗೆ ತೋರಿಸುತ್ತಿರಲಿಲ್ಲ. ಈಗ ಬಿಜೆಪಿ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ’ ಎಂದು ಹರ್ಷ ಮತ್ತು ಪ್ರದೀಪ್ ಎನ್ನುವವರು ಅದಕ್ಕೆ ಬಿಜೆಪಿಯನ್ನು ಎಳೆದುತಂದು ರಾಜಕೀಯದ ಬಣ್ಣ ಕೊಟ್ಟಿದ್ದಾರೆ.

‘ಮುಸ್ಲಿಮರು ದನದ ಮಾಂಸ ತಿಂತಾರೆ. ಮನೆ ಕ್ಲೀನ್ ಇಡಲ್ಲ, ಗಲೀಜು ಮಾಡ್ತಾರೆ. ಜೋರಾಗಿ ಗಲಾಟೆ, ಸದ್ದು ಮಾಡ್ತಾರೆ. ಅಂತವರಿಗೆ ಮನೆ ಬಾಡಿಗೆಗೆ ಕೊಟ್ರೆ ಮನೆ ಕಾಲಿ ಮಾಡಿಸೋದು ಕಷ್ಟ. ಕಿರಿಕ್ ಮಾಡ್ತಾರೆ. ಮುಖ್ಯವಾಗಿ ನಾವು ಪೂಜಿಸುವ ದನ ತಿನ್ನುವವರಿಗೆ ಮನೆ ಸುತಾರಾಂ ಕೊಡಲ್ಲ. ಇದು ದ್ವೇಷದ ಮಾತಲ್ಲ, ನಮ್ಮ ನಂಬಿಕೆಯ ಮತ್ತು ವ್ಯವಹಾರ ಕುಶಲತೆಯ ಮಾತಷ್ಟೇ ‘ ಅಂದವರು ಓರ್ವ ಬಾಡಿಗೆದಾರರು.