Home News ಮನೆಯ ಗೋಡೆಯ ಸುಣ್ಣವನ್ನೇ ತನ್ನ ಉಗುರುಗಳಿಂದ ಕೆರೆದು ತಿನ್ನೋ ಮಹಿಳೆ | ಇದುವೇ ಈಕೆಯ ಜೀವನದ...

ಮನೆಯ ಗೋಡೆಯ ಸುಣ್ಣವನ್ನೇ ತನ್ನ ಉಗುರುಗಳಿಂದ ಕೆರೆದು ತಿನ್ನೋ ಮಹಿಳೆ | ಇದುವೇ ಈಕೆಯ ಜೀವನದ ಅತಿ ದೊಡ್ಡ ಚಟವಂತೆ!?

Hindu neighbor gifts plot of land

Hindu neighbour gifts land to Muslim journalist

ಒಬ್ಬೊಬ್ಬರಿಗೆ ಒಂದೊಂದು ರೀತಿಯ ವಿಚಿತ್ರ ಅಭ್ಯಾಸಗಳಿರುತ್ತದೆ. ಇದನ್ನು ವ್ಯಸನ ಎನ್ನಬಹುದು. ಧೂಮಪಾನ, ಮದ್ಯಪಾನ ಸಾಮಾನ್ಯ ವ್ಯಸನವಾದರೆ ಇತ್ತೀಚೆಗೆ ಕೇಳಿಬರುತ್ತಿರುವ ಪ್ರಮುಖವಾದ ವ್ಯಸನ ಡ್ರಗ್ಸ್ ಸೇವನೆ.

ಆದರೆ, ವ್ಯಸನವೆಂದರೆ ಇದಿಷ್ಟೇ ಅಲ್ಲ, ಗಮ್‌ , ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ವಾಸನೆ ತೆಗೆದುಕೊಳ್ಳುವುದು, ಚಾಕ್‌ಪೀಸ್‌ ತಿನ್ನುವುದು, ವೈಟ್ನರ್, ನೈಲ್‌ ಪಾಲಿಷ್‌ ವಾಸನೆ ಇರೋದು, ಇಂಕ್ ಕುಡಿಯುವುದು, ಮಣ್ಣು ತಿನ್ನುವುದು – ಹೀಗೆ ನಾನಾ ರೀತಿಯ ವ್ಯಸನ ಅಥವಾ ವಿಚಿತ್ರ ಅಭ್ಯಾಸವಿರುತ್ತದೆ. ಅದರಲ್ಲೂ, ಮಕ್ಕಳಾಗಿದ್ದಾಗ ಇಂತಹ ವಿಚಿತ್ರ ಅಭ್ಯಾಸಗಳು ಹಲವರಲ್ಲಿರುತ್ತದೆ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ನಾವು ಹೇಳಲು ಹೊರಟಿರುವ ಈ ಮಹಿಳೆಯ ಕತೆ ಕೇಳಿ. ಈಕೆ ಇವೆಲ್ಲ ಅಭ್ಯಾಸಗಳಿಗಿಂತ ವಿಭಿನ್ನ, ವಿಚಿತ್ರ.

ಅಮೆರಿಕದ ಮಿಚಿಗನ್‌ ರಾಜ್ಯದ ನಿಕೋಲ್ ಎಂಬ ಮಹಿಳೆ ತನ್ನ ಮನೆಯ ಗೋಡೆಗಳಿಂದ ಸುಣ್ಣವನ್ನು ಕೆರೆದು ದಿನಕ್ಕೆ 6 ಬಾರಿ ಸೇವಿಸುವುದಾಗಿ TLC ಟಾಕ್ ಶೋ, “ಮೈ ಸ್ಟ್ರೇಂಜ್ ಅಡಿಕ್ಷನ್”ನಲ್ಲಿ ಬಹಿರಂಗಪಡಿಸಿದ್ದಾಳೆ.

ಒಣಗಿದ ಗೋಡೆಗಳ ವಾಸನೆ ಇಷ್ಟಪಡುತ್ತೇನೆ ಎಂದು ನಿಕೋಲ್‌ TLCಯ ಈ ಟಾಕ್‌ ಶೋನಲ್ಲಿ ಹೇಳಿದ್ದಾರೆ. ಅದರ ವಿನ್ಯಾಸ ಮತ್ತು ರುಚಿಯನ್ನು ತುಂಬಾ ಇಷ್ಟಪಡುತ್ತೇನೆ, ಇಡೀ ವಾರದಲ್ಲಿ 3.2 ಚದರ ಅಡಿ ಗೋಡೆಯನ್ನು ತಿನ್ನುತ್ತೇನೆ. ಕಡು ಬಯಕೆ ಬಂದಾಗಲೆಲ್ಲಾ ಗೋಡೆಯಿಂದ ತುಂಡು ಮಾಡುವುದನ್ನು ಪ್ರಾರಂಭಿಸುತ್ತೇನೆ, ಗೋಡೆಯನ್ನು ಉಗುರಿನಲ್ಲಿ ಕೆರೆದು ಸುಣ್ಣ ತಿನ್ನುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು, ಆಕೆ ತನ್ನ ಮನೆಯಲ್ಲಿರುವ ಗೋಡೆಯ ಸುಣ್ಣ ಮಾತ್ರ ಅಲ್ಲ, ತನ್ನ ಸ್ನೇಹಿತರ ಮತ್ತು ಸಂಬಂಧಿಕರ ಮನೆಗಳ ಗೋಡೆಯಿಂದಲೂ ಸುಣ್ಣವನ್ನು ತಿಂದಿದ್ದೇನೆ ಎಂದೂ ಹೇಳಿದ್ದಾರೆ. ತನ್ನ ತಾಯಿಯ ಮರಣದ ನಂತರ 5 ವರ್ಷಗಳ ಹಿಂದೆ ಸುಣ್ಣ ತಿನ್ನುವ ತನ್ನ ಪ್ರೀತಿ ಚಟವಾಗಿ ಮಾರ್ಪಟ್ಟಿತು. ಆದರೆ, ಈ ಅಭ್ಯಾಸವನ್ನು ತನ್ನ ಸ್ವಂತ ಮಗಳು ಸೇರಿದಂತೆ ಇತರ ಕುಟುಂಬ ಸದಸ್ಯರಿಗೆ ಈವರೆಗೆ ಹೇಳಿಲ್ಲ ಎಂದೂ ನಿಕೋಲ್‌ ಹೇಳಿದ್ದಾರೆ.

ವಿವಿಧ ರೀತಿಯ ಗೋಡೆಗಳ ರುಚಿಯನ್ನು ಇಷ್ಟಪಡುತ್ತೇನೆ ಎಂದ ನಿಕೋಲ್, ದಪ್ಪ ಬಣ್ಣದ ಲೇಪನವನ್ನು ಹೊಂದಿರುವ ಗೋಡೆಗಳ ರುಚಿ ತೆಳುವಾದ ಬಣ್ಣದ ಕೋಟ್‌ಗಳನ್ನು ಹೊಂದಿರುವ ಗೋಡೆಗಳಿಗಿಂತ ಬಹಳ ಭಿನ್ನವಾಗಿರುತ್ತವೆ ಎಂದೂ ತಿಳಿಸಿದ್ದಾರೆ. ಆಕೆಯ ಅಚ್ಚುಮೆಚ್ಚಿನ ರೀತಿಯ ಗೋಡೆಯು ಗ್ರೈನಿ ಪ್ರಕಾರವಾಗಿದ್ದು, ಏಕೆಂದರೆ ಅದು ಕ್ರಂಚಿ ರುಚಿಯನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಇನ್ನು, ಈ ರೀತಿ ಸುಣ್ಣ ತಿನ್ನುವುದರಿಂದ ಆಕೆಗೆ ಏನೂ ಆಗಲ್ವಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಈ ಬಗ್ಗೆ ವೈದ್ಯರೂ ನಿಕೋಲ್‌ಗೆ ಎಚ್ಚರಿಕೆ ನೀಡಿದ್ದಾರೆ. ಬಣ್ಣ ಅಥವಾ ಪೇಂಟ್‌ ಕ್ಯಾನ್ಸರ್ ಕಾರಕವಾಗಿರುವುದರಿಂದ ಗೋಡೆಗಳ ಮೇಲಿನ ಸುಣ್ಣವನ್ನು ತಿನ್ನುವ ಚಟವು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ತನ್ನ ಚಟದ ಮುಂದೆ ತಾನು ಸಂಪೂರ್ಣ ಅಸಹಾಯಕಳಾಗಿದ್ದೇನೆ ಎನ್ನುತ್ತಾರೆ ನಿಕೋಲ್.