Home News Aadhar Card : ನಿಮ್ಮ ಆಧಾರ್‌ ದುರ್ಬಳಕೆಯಾಗುತ್ತಿದೆಯೇ? ಆನ್ಲೈನ್‌ನಲ್ಲಿ ಈ ರೀತಿ ಪರಿಶೀಲಿಸಿ!

Aadhar Card : ನಿಮ್ಮ ಆಧಾರ್‌ ದುರ್ಬಳಕೆಯಾಗುತ್ತಿದೆಯೇ? ಆನ್ಲೈನ್‌ನಲ್ಲಿ ಈ ರೀತಿ ಪರಿಶೀಲಿಸಿ!

Hindu neighbor gifts plot of land

Hindu neighbour gifts land to Muslim journalist

ದೇಶದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ ಹೊಂದುವುದು ಮುಖ್ಯ. ಇಲ್ಲವಾದಲ್ಲಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ತಮ್ಮ ಆಧಾರ್‌ ಕಾರ್ಡ್‌ ಅನ್ನು ಪಡೆದುಕೊಳ್ಳುತ್ತಾರೆ. ಆಧಾರ್​ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಇರುತ್ತದೆ. ಈ ಬಹುಮುಖ್ಯ ದಾಖಲೆಯನ್ನು ಯಾರಾದರೂ ದುರ್ಬಳಕೆ ಮಾಡುತ್ತಿದ್ದಾರಾ? ನಿಮ್ಮ ಆಧಾರ್‌ ದುರ್ಬಳಕೆಯಾಗುತ್ತಿದ್ದರೆ ಅದನ್ನು ಹೇಗೆ ತಿಳಿದುಕೊಳ್ಳುವುದು? ಈ ಎಲ್ಲಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಆಧಾರ್‌ ದುರ್ಬಳಕೆಯಾಗುತ್ತಿದೆಯೇ? ಎಂಬುದನ್ನು ಆನ್​ಲೈನ್​ನಲ್ಲೇ ಪರಿಶೀಲಿಸಬಹುದು. ಹೇಗೆಂಬ ಮಾಹಿತಿ ಇಲ್ಲಿದೆ.

ಆಧಾರ್ ಕಾರ್ಡ್​ ಅನ್ನು ಯಾರಾದರೂ ದುರ್ಬಳಕೆ ಮಾಡುತ್ತಿದ್ದಾರಾ? ಎಂಬುದನ್ನು ಆನ್​ಲೈನ್​ನಲ್ಲಿ ಹೀಗೆ ಪರಿಶೀಲಿಸಿ.

  • ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (UIDAI) ‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ ಎಂಬ ಆಯ್ಕೆಯನ್ನು ನೀಡಿದೆ.
  • ‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ ಪರಿಶೀಲಿಸಲು ಮೊದಲು www.uidai.gov.in ಈ ವೆಬ್​ಸೈಟ್​ಗೆ ಭೇಟಿ ನೀಡಿ.
  • ನಂತರ ‘ಮೈ ಆಧಾರ್’ ಎಂಬ ಆಯ್ಕೆಗೆ ಕ್ಲಿಕ್ ಮಾಡಿ, ಆಧಾರ್ ಸೇವೆಗಳು ಎಂಬ ಆಯ್ಕೆಯಡಿಯಲ್ಲಿ ಬರುವಂತಹ ‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ಯನ್ನು ಕ್ಲಿಕ್ ಮಾಡಬೇಕು.
  • ಆಧಾರ್ ನಂಬರ್ ನಮೂದಿಸಿ, ಸೆಕ್ಯೂರಿಟಿ ಕೋಡ್ ಹಾಗೂ ಒಟಿಪಿ ನಮೂದಿಸಿ ಲಾಗಿನ್ ಆಗಬೇಕು.
  • ಒಟಿಪಿ ನಮೂದಿಸಿ ದೃಢೀಕೃತಗೊಂಡ ನಂತರ ‘ಪ್ರೊಸೀಡ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ಆಗ ನಿಮ್ಮ ಆಧಾರ್ ಕಾರ್ಡ್​​ಗೆ ಸಂಬಂಧಿಸಿದಂತಹ ಎಲ್ಲಾ ವಿವರಗಳು ಮತ್ತು ಹಿಂದಿನ ದೃಢೀಕರಣ ವಿನಂತಿಗಳ ಎಲ್ಲಾ ವಿವರಗಳನ್ನು ನೀವು ಅಲ್ಲಿ ಕಾಣಬಹುದು.

ಈ ರೀತಿಯಾಗಿ ನೀವು ನಿಮ್ಮ ಆಧಾರ್ ದುರ್ಬಳಕೆಯಾಗಿದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಬಹುದು. ಇದರಿಂದ ಆಧಾರ್ ಸುರಕ್ಷಿತವಾಗಿದೆಯೇ ಎಂಬುದು ತಿಳಿದುಕೊಳ್ಳಬಹುದು. ಹಾಗೆಯೇ ಆಧಾರ್ ನಲ್ಲಿನ ನಿಮ್ಮ ವೈಯಕ್ತಿಕ ಮಾಹಿತಿಗಳು ಭದ್ರವಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು. ಹೀಗೇ ಸುಲಭವಾಗಿ ಆನ್ ಲೈನ್ ನಲ್ಲಿ ಪರಿಶೀಲಿಸಿ.