Home News Beauty Tips: ಮುಖದ ಕೂದಲನ್ನು ನೈಸರ್ಗಿಕವಾಗಿ ತೆಗೆದು ಹಾಕಲು ಇಲ್ಲಿದೆ ಸುಲಭ ವಿಧಾನ!

Beauty Tips: ಮುಖದ ಕೂದಲನ್ನು ನೈಸರ್ಗಿಕವಾಗಿ ತೆಗೆದು ಹಾಕಲು ಇಲ್ಲಿದೆ ಸುಲಭ ವಿಧಾನ!

Hindu neighbor gifts plot of land

Hindu neighbour gifts land to Muslim journalist

Beauty Tips: ಮಹಿಳೆಯರು ಹೆಚ್ಚು ಮುಖದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಮಹಿಳೆಯರ ಮುಖದಲ್ಲಿ ಮೂಡುವ ಕೂದಲು ಸೌಂದರ್ಯವನ್ನೇ ಹಾಳು ಮಾಡುತ್ತದೆ. ಆದರೆ ರೇಜರ್ ಮತ್ತು ಅನೇಕ ರಾಸಾಯನಿಕ ಉತ್ಪನ್ನಗಳ ಹೊರತಾಗಿ ನೈಸರ್ಗಿಕವಾಗಿ, ಮನೆಯಲ್ಲೇ ಸಿಗುವ ಪದಾರ್ಥಗಳ ಮೂಲಕ ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆದುಹಾಕಬಹುದು. ಅದು ಹೇಗೆಂದು (Beauty Tips) ಇಲ್ಲಿ ತಿಳಿಯಿರಿ.

ಅಕ್ಕಿ ಹಿಟ್ಟು ಮತ್ತು ಸಾಸಿವೆ ಎಣ್ಣೆ:

ಚಮಚ ಅಕ್ಕಿ ಹಿಟ್ಟಿಗೆ ಒಂದು ಚಮಚ ಅರಿಶಿನ ಮತ್ತು ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇವುಗಳನ್ನು ಮುಖಕ್ಕೆ ಹಜ್ಜಿದರೆ ಕೂದಲು ಬೇಗನೆ ಮಾಯವಾಗುತ್ತದೆ.

ಕಾಫಿ ಮತ್ತು ಅರಿಶಿನ:

ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಲಭ್ಯವಿರುವ ಕಾಫಿ ಮತ್ತು ಅರಿಶಿನವು ಅನಗತ್ಯ ಮುಖದ ಕೂದಲನ್ನು ತೆಗೆದುಹಾಕಲು ಉಪಯುಕ್ತವಾಗಿದೆ. 1 ಚಮಚ ಕಾಫಿ ಪುಡಿಯನ್ನು ಸ್ವಲ್ಪ ನೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಅರಿಶಿನ ಸೇರಿಸಿ. ನಂತರ ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ ಮತ್ತು ಪೇಸ್ಟ್ ಆಗಿ ತಯಾರಿಸಿ. ನಂತರ ಮುಖಕ್ಕೆ ಹಚ್ಚಿ ಈ ಮಿಶ್ರಣವು ನಿಮ್ಮ ಮುಖದ ಮೇಲೆ ಒಣಗಿದ ನಂತರ, ನಿಮ್ಮ ಕೈಗಳಿಗೆ ತೆಂಗಿನ ಎಣ್ಣೆಯನ್ನು ಅನ್ವಯಿಸಿ ಮತ್ತು ನಿಮ್ಮ ಮುಖವನ್ನು ಮಸಾಜ್ ಮಾಡಿ, ನಂತರ ಅದನ್ನು ತೊಳೆಯಿರಿ.

ಉಪ್ಪು ಮತ್ತು ಅಕ್ಕಿ ಹಿಟ್ಟು:

ಒಂದು ಚಿಟಿಕೆ ಉಪ್ಪನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಮತ್ತು ಮೊಸರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ಮುಖದಲ್ಲಿ ಬೇಡದ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ.

ಸಕ್ಕರೆ ಮತ್ತು ನಿಂಬೆ ರಸ:

ಸಣ್ಣ ಬಾಣಲೆಯಲ್ಲಿ ಸ್ವಲ್ಪ ಸಕ್ಕರೆ, ನಿಂಬೆ ರಸ ಮತ್ತು ನೀರನ್ನು ಬೆರೆಸಿ ಸ್ವಲ್ಪ ಬಿಸಿ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ಉತ್ತಮ ಫಲಿತಾಂಶವನ್ನು ಶೀಘ್ರದಲ್ಲೇ ಪಡೆಯಬಹುದು.