Home latest ಇನ್ಮುಂದೆ ದೇವಾಲಯಗಳಾದ್ಯಂತ ಮೊಬೈಲ್ ಫೋನ್ ನಿಷೇಧ : ವಿಶೇಷ ಆದೇಶ ಪ್ರಕಟಿಸಿದ ಹೈಕೋರ್ಟ್

ಇನ್ಮುಂದೆ ದೇವಾಲಯಗಳಾದ್ಯಂತ ಮೊಬೈಲ್ ಫೋನ್ ನಿಷೇಧ : ವಿಶೇಷ ಆದೇಶ ಪ್ರಕಟಿಸಿದ ಹೈಕೋರ್ಟ್

Hindu neighbor gifts plot of land

Hindu neighbour gifts land to Muslim journalist

ಎಲ್ಲಾ ದೇವಾಲಯಗಳಲ್ಲೂ ಮೊಬೈಲ್ ಫೋನ್ ಗಳನ್ನು ನಿಷೇಧಿಸಿ ಹೈಕೋರ್ಟ್ ಆದೇಶ ಪ್ರಕಟಿಸಿದೆ. ದೇವಾಲಯದಲ್ಲಿನ ಪಾವಿತ್ರ್ಯತೆ ಹಾಗೂ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಈ ಆದೇಶ ಪ್ರಕಟಿಸುತ್ತಿರುವುದಾಗಿ ಕೋರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮೋಬೈಲ್ ಫೋನ್ ನಿಷೇಧ ಜಾರಿ ಆದದ್ದು ನಮ್ಮ ರಾಜ್ಯದಲ್ಲಿ ಅಲ್ಲ. ಬದಲಿಗೆ ಪಕ್ಕದ ತಮಿಳುನಾಡಿನಲ್ಲಿ. ಈ ಬಗ್ಗೆ ಅಲ್ಲಿನ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದು, ದೇವಾಲಯಗಳಲ್ಲಿ ಮೊಬೈಲ್ ಫೋನ್ ಪೂರ್ತಿ ಸ್ತಬ್ಧವಾಗಲಿದೆ.

ಮೊಬೈಲ್ ನಿಷೇಧದಿಂದ ಜನತೆಗೆ ಸಮಸ್ಯೆಯಾಗದಂತೆ ಕ್ರಮ ವಹಿಸುವುದಕ್ಕಾಗಿ ದೇವಾಲಯಗಳಲ್ಲಿ ಮೊಬೈಲ್ ಡೆಪಾಸಿಟ್ ಲಾಕರ್ ಗಳನ್ನು ಕೂಡಾ ಸ್ಥಾಪಿಸಲು ಕೋರ್ಟ್ ಸೂಚನೆ ನೀಡಿದೆ. ಈ ಆದೇಶ ಜಾರಿಗೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲು ದೇವಾಲಯಗಳ ಆಡಳಿತ ಮಂಡಳಿಗೆ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.