Home News Hariyana: ಅಬ್ಬಬ್ಬಾ.. ಕಾಮುಕ ಪ್ರಿನ್ಸಿಪಾಲ್ ನಿಂದ 142 ಹುಡುಗಿಯರಿಗೆ ಲೈಂಗಿಕ ದೌರ್ಜನ್ಯ – ನಂತರ ಏನಾಯ್ತು...

Hariyana: ಅಬ್ಬಬ್ಬಾ.. ಕಾಮುಕ ಪ್ರಿನ್ಸಿಪಾಲ್ ನಿಂದ 142 ಹುಡುಗಿಯರಿಗೆ ಲೈಂಗಿಕ ದೌರ್ಜನ್ಯ – ನಂತರ ಏನಾಯ್ತು ?!

Hariyana

Hindu neighbor gifts plot of land

Hindu neighbour gifts land to Muslim journalist

Hariyana: ಶಾಲಾ-ಕಾಲೇಜುಗಳಲ್ಲಿ ಇಂದು ನಿರಂತರವಾಗಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ನಮ್ಮ ದುರಾದೃಷ್ಟಕರ. ಅಲ್ಲದೆ ಇದು ಇಡೀ ಭಾರತೀಯರೇ ತಲೆತಗ್ಗಿಸುವಂತ ವಿಚಾರ. ಅಂತೇಯೆ ಇದೀಗ ನಾವು ಬಹಳ ಬೇಸರದಲ್ಲಿ ಕಾಮುಕ ಪ್ರಿನ್ಸಿಪಾಲ್ ನ ರಾಕ್ಷಸೀ ಪ್ರವೃತ್ತಿಯೊಂದನ್ನು ತೆರೆದಿಡುತ್ತಿದ್ದೇವೆ.

ಹೌದು, ಹರಿಯಾಣದ(Hariyana) ಜಿಂದ್‌ನ ಸರ್ಕಾರಿ ಶಾಲೆಯಲ್ಲಿ ಒಬ್ಬ ಕಾಮುಕ ಪ್ರಿನ್ಸಿಪಾಲ್ ಇದ್ದಾನೆ. ಇವನು ಬರೀ ಕಾಮುಕ ಅಲ್ಲ, ಕಾಮುಕ ಪಿಶಾಚಿ. ಯಾಕೆದಂರೆ ತಾನು ಪ್ರಿನ್ಸಿಪಾಲ್ ಆಗಿರುವ ಸರ್ಕಾರಿ ಶಾಲೆಯಲ್ಲಿ ಬರೋಬ್ಬರಿ 142 ವಿದ್ಯಾರ್ಥಿನಿಯರಿಗೆ ಇವನು ಲೈಂಜಿಕವಾಗಿ ಕಿರುಕುಳ ನೀಡಿದ್ದಾನೆ. ಅದೂ ಅಲ್ಲದೆ ಬರೋಬ್ಬರಿ 6 ವರ್ಷಗಳಿಂದಲೂ ಈ ಪಾಪಿ ಈ ವಿಕೃತಿ ಮೆರೆಯುತ್ತಿದ್ದನೆಂದು ಲೈಂಗಿಕ ಕಿರುಕುಳ ಸಮಿತಿ ನಡೆಸಿದ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಅಂದಹಾಗೆ ಈಷಕಾಮುಕ ತನ್ನ ಕಛೇರಿಗೆ ವಿದ್ಯಾರ್ಥಿನಿಯರನ್ನು ಕರೆಸಿ ಲೈಂಗಿಕ ಕಿರುಕುಳ ನೀಡುತ್ತುದ್ದನೆಂದು ಅಪ್ರಾಪ್ತೆಯರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಆರೋಪಿಯನ್ನು ಅಕ್ಟೋಬರ್ 27 ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಕುರಿತಂತೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಆಯುಕ್ತ ಮೊಹಮ್ಮದ್ ಇಮ್ರಾನ್ ರಾಜಾ ಅವರು ಮಾತನಾಡಿ ಸುಮಾರು 390 ಬಾಲಕಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಈ ಪೈಕಿ ನಾವು 142 ಸಂತ್ರಸ್ತ ಬಾಲಕಿಯರ ವಿವರಗಳನ್ನು ಪ್ರಕರಣದ ಮುಂದಿನ ಕ್ರಮಕ್ಕಾಗಿ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಳಿಸಿದ್ದೇವೆ ಎಂದು ಹೇಳಿದ್ದಾರೆ.

ಪತ್ರ ಬರೆದ ವಿದ್ಯಾರ್ಥಿನಿಯರು:
ತಮ್ಮ ಶಾಲೆಯಲ್ಲಿ ನಡೆಯುತಿದ್ದ ಕಿರುಕುಳದ ಕುರಿತು ಆಗಸ್ಟ್ 31 ರಂದು ಸುಮಾರು 15 ಹುಡುಗಿಯರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗ ಸೇರಿದಂತೆ ಇತರರಿಗೆ ಕೃತ್ಯದ ಕುರಿತು ಪತ್ರ ಬರೆದಿದ್ದರು.

ಇದನ್ನು ಓದಿ: Sukesh Cars Auction News: ವಂಚಕ ಸುಕೇಶ್ ಚಂದ್ರಶೇಖರ್ ನ 12 ಐಶಾರಾಮಿ ಕಾರುಗಳ ಹರಾಜು – ಈ ದಿನ ನಿಮಗೂ ಉಂಟು ಕಾರು ಪಡೆಯೋ ಚಾನ್ಸು