Home News H D Devegowda: ಜೆಡಿಎಸ್ ಕಾರ್ಯಕರ್ತರಿಗೆಲ್ಲಾ ಊಹಿಸದಂತ ಶಾಕ್ – JDS ರಾಜ್ಯ ಘಟಕವನ್ನೇ...

H D Devegowda: ಜೆಡಿಎಸ್ ಕಾರ್ಯಕರ್ತರಿಗೆಲ್ಲಾ ಊಹಿಸದಂತ ಶಾಕ್ – JDS ರಾಜ್ಯ ಘಟಕವನ್ನೇ ವಿಸರ್ಜಿಸದ ದೇವೇಗೌಡರು !!

H D Devegowda

Hindu neighbor gifts plot of land

Hindu neighbour gifts land to Muslim journalist

H D Devegowda: ನಮ್ಮದೇ ಒರಿಜಿನಲ್ ಜೆಡಿಎಸ್, ನಮ್ಮ ಬೆಂಬಲ ಕಾಂಗ್ರೆಸ್ ಗೆ ಎಂದು ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಸಿಎಂ ಇಬ್ರಾಹಿಂ ಅವರಿಗೆ ಇದೀಗ ಜೆಡಿಎಸ್ ವರಿಷ್ಠ ಡಾ. ಎಚ್ ಡಿ ದೇವೇಗೌಡ ಬಿಗ್ ಶಾಕ್ ನೀಡಿದ್ದು ಪಕ್ಷದಿಂದಲೇ ಉಚ್ಚಾಟನೆ ಮಾಡಿದ್ದಾರೆ. ಇದರೊಂದಿಗೆ ದೇವೇಗೌಡರು(H D Devegowda) ಮಹಾತ್ ಇನ್ನೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ರಾಜ್ಯ ಘಟಕಗಳನ್ನು ವಿಸರ್ಜಿಸೋ ಮೂಲಕ ತಮ್ಮ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದ್ದಾರೆ.

ಹೌದು, ಇಂದು ನಡೆದ ಜೆಡಿಎಸ್‌(JDS) ಕೋರ್‌ ಕಮಿಟಿ ಸಭೆಯಲ್ಲಿ ಜೆಡಿಎಸ್ ವರಿಷ್ಠಾದ ಎಚ್ ಡಿ ದೇವೇಗೌಡ(H D Devegowda) ಅವರು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಮ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಖಡಕ್ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಇಬ್ರಾಹಿಮ್ ಸಮಯದಲ್ಲಿ ರಚನೆಗೊಂಡ ಎಲ್ಲಾ ರಾಜ್ಯ ಘಟಕಗಳನ್ನು, ಜೆಡಿಎಸ್‌ನ ರಾಜ್ಯಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನೊಳಗೊಂಡಂತೆ ಇಡೀ ರಾಜ್ಯ ಘಟಕವನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದು, ದೊಡ್ಡ ಗೌಡರ ನಡೆ ಎಲ್ಲರಿಗೂ ಅಚ್ಚರಿಯುಂಟುಮಾಡಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು ‘ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್‌ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರಿಂದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರೋಧ ವ್ಯಕ್ತಪಡಿಸಿದ್ದು, ತಾವು ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಹೀಗಾಗಿ, ಇಬ್ರಾಹಿಂ ಅವರನ್ನು ಪಕ್ಷದಿಂದ ಹೊರ ಹಾಕುವ ದೃಷ್ಟಿಯಿಂದ ಜೆಡಿಎಸ್‌ ರಾಜ್ಯ ಘಟಕಗಳನ್ನೇ ವಿಸರ್ಜನೆ ಮಾಡಲಾಗುತ್ತಿದೆ. ಮುಂದುವರೆದು ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಅಂದಹಾಗೆ ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿತದೆ. ಇದಕ್ಕೆ ಅನೇಕ ಜೆಡಿಎಸ್ ಅಲ್ಪಸಂಖ್ಯಾತ ನಾಯಕರು ವಿರೋಧ ವ್ಯಕ್ತಪಡಿಸಿದ್ದು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದರು. ಈ ವೇಳೆ ಅಲ್ಪಸಂಖ್ಯಾತ ನಾಯಕರು, ಜೆಡಿಎಸ್ ರಾಜ್ಯಾಧ್ಯಕ್ಷರೂ ಕೂಡ ಆಗಿದ್ದ ಇಬ್ರಾಹಿಮ್ ಅವರು ತಮ್ಮ ಸಮುದಾಯದ ನಾಯಕರುಗಳೇ ತಮ್ಮ ನಿರ್ಧಾರವನ್ನು ವಿರೋಧಿಸುತ್ತಿದ್ದ ಕಾರಣ ತಮ್ಮ ವರಸೆ ಬದಲಾಯಿಸಿ ತಮ್ಮದೇ ಒರಿಜಿನಲ್ ಜೆಡಿಎಸ್, ನಮ್ ಬೆಂಬಲ ಏನಿದ್ದರೂ ಕಾಂಗ್ರೆಸ್ ಗೆ ನಾವು ಬಿಜೆಪಿ ಬೆಂಬಲಿಸುವುದಿಲ್ಲ, ಬಿಜೆಪಿಯನ್ನು ಮಟ್ಟ ಹಾಕುವುದೇ ನಮ್ಮ ಗುರಿ ಎಂದು ಹೇಳಿದ್ದರು. ಈ ಬೆನ್ನಲ್ಲೇ ಮುಂದಾಗುವ ಅನಾಹುತವನ್ನು ಮನಗಂಡ ದೇವೇಗೌಡರು ಈ ಮಹತ್ವದ ನಿರ್ಮಾಣ ಕೈಗೊಂಡಿದ್ದಾರೆ.

 

ಇದನ್ನು ಓದಿ: ಕರಾವಳಿಗರಿಗೆ ಸಂತಸದ ಸುದ್ದಿ- ಈ ದಿನದಿಂದ ಇಂದಿರಾ ಕ್ಯಾಂಟೀನ್’ನಲ್ಲೂ ಸಿಗಲಿದೆ ಕುಚುಲಕ್ಕಿ ಅನ್ನ !!