Home latest Mangaluru-Gulf Flights: ಗಲ್ಫ್‌- ಮಂಗಳೂರು ವಿಮಾನಯಾನ ದರ ಮೂರು ಪಟ್ಟು ದುಬಾರಿ

Mangaluru-Gulf Flights: ಗಲ್ಫ್‌- ಮಂಗಳೂರು ವಿಮಾನಯಾನ ದರ ಮೂರು ಪಟ್ಟು ದುಬಾರಿ

Mangaluru-Gulf Flights

Hindu neighbor gifts plot of land

Hindu neighbour gifts land to Muslim journalist

Mangaluru-Gulf Flights: ಕರಾವಳಿ ಭಾಗದ ಜನರಿಗೆ ಶಾಕಿಂಗ್‌ ನ್ಯೂಸ್‌. ಹೌದು ಗಲ್ಫ್‌ ರಾಷ್ಟ್ರಗಳ ನಡುವಿನ ವಿಮಾನಯಾನ ಟಿಕೆಟ್‌ ದರ ಏರಿಕೆಯಾಗಿದೆ.

ಇದನ್ನೂ ಓದಿ: Solar Eclipse 2024: ವರ್ಷದ ಮೊದಲ ದೀರ್ಘಾವಧಿಯ ಸೂರ್ಯಗ್ರಹಣ! ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ?

ವಾರ್ಷಿಕ ಬೇಸಗೆ ರಜೆ, ಈಸ್ಟರ್‌, ರಮ್ಜಾನ್‌ ಮುಂತಾದ ವಿಶೇಷ ಸಂದರ್ಭಗಳು ಇರುವುದರಿಂದ ಇನ್ನು ಗಲ್ಫ್‌ ರಾಷ್ಟ್ರಗಳಲ್ಲಿರುವವರು ತಮ್ಮ ತಾಯ್ನಾಡಿಗೆ ಮರಳುತ್ತಾರೆ. ಈ ಸಮಯದಲ್ಲಿ ವಿಮಾನ ಟಿಕೆಟ್‌ ದರವನ್ನು ಏರಿಕೆ ಮಾಡಿರುವುದು ಕರಾವಳಿ ಜನರಿಗೆ ಆರ್ಥಿಕ ಹೊಡೆತ ಬಿದ್ದಿದೆ ಎಂದು ಹೇಳಬಹುದು.

ಇದನ್ನೂ ಓದಿ: Crime News: ಹಾರ್ದಿಕ್ ಪಾಂಡ್ಯ ಗೆ ಚಪ್ಪಲಿಯಲ್ಲಿ ಹೊಡೆದ ರೋಹಿತ್ ಶರ್ಮಾ ಅಭಿಮಾನಿಗಳು

ಸಾಮಾನ್ಯ ಕೊಲ್ಲಿ ರಾಷ್ಟ್ರಗಳಿಗೆ ಟಿಕೆಟ್‌ ದರ 17 ಸಾವಿರದಿಂದ 20 ಸಾವಿರದವರೆಗೆ ಇರುತ್ತದೆ. ಆದರೆ ಇದೀಗ ದುಪ್ಪಟ್ಟಾಗಿದೆ. ದೋಹಾ, ಅಬುದಾಭಿ, ದುಬೈ, ದಮಾಮ್‌ ನಿಂದ ಮಂಗಳೂರಿಗೆ ಬರುವವರು ಇದೀಗ ಟಿಕೆಟ್‌ಗಾಗಿ ಭರ್ಜರಿ 50 ಸಾವಿರ ರೂ. ಪಾವತಿಸಬೇಕು.

ಕರಾವಳಿ ಮೂಲದ ಬಹುತೇಕ ಮಂದಿ ಗಲ್ಫ್‌ ರಾಷ್ಟ್ರಗಳಲ್ಲಿ ದುಡಿಯುವುದರಿಂದ ಬಹುತೇಕ ಮಂದಿಗೆ ಇದು ನಿಜಕ್ಕೂ ದೊಡ್ಡ ಆಘಾತ ಎಂದು ಹೇಳುಬಹುದು. ಈ ಕುರಿತು ದೂರು ಕೂಡಾ ವ್ಯಕ್ತವಾಗಿದೆ ಎಂದು ವರದಿಯಾಗಿದೆ.