Home News Amith Sha: ವೋಟ್ ಮಾಡಲು ಬಂದ ಅಮಿತ್ ಶಾಗೆ ‘ಓ.. ಅಮಿತ್ ಕಾಕಾ’ ಎಂದು ಕೂಗಿದ...

Amith Sha: ವೋಟ್ ಮಾಡಲು ಬಂದ ಅಮಿತ್ ಶಾಗೆ ‘ಓ.. ಅಮಿತ್ ಕಾಕಾ’ ಎಂದು ಕೂಗಿದ ಯುವಕ – ಶಾ ಮಾಡಿದ್ದೇನು?!

Hindu neighbor gifts plot of land

Hindu neighbour gifts land to Muslim journalist

 

Amith Sha: ಲೋಕಸಭಾ ಚುನಾವಣೆಯ(Parliament Election) ಪ್ರಯುಕ್ತ ಮೊನ್ನೆ(ಮೇ. 7) ದಿನ ಮೂರನೇ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. ಅಂತೆಯೇ ಗುಜರಾತ್(Gujarath) ನಲ್ಲಿ ಕೂಡ ಚುನಾವಣೆ ನಡೆದಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ(PM Modi) ಯವರು ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೂಡ ತಮ್ಮ ತವರು ನೆಲದಲ್ಲಿ ಮತ ಚಲಾವಣೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಬಳಿಕಾ ಅಮಿತ್ ಶಾ(Amith Sha) ಅವರು ಮತ ಚಲಾವಣೆ ಮಾಡಲು ಬಂದಿದ್ದು ಈ ಸಂದರ್ಭದಲ್ಲಿ ಒಂದು ಹೃದಯಸ್ಪರ್ಶಿ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಅದೇನೆಂದರೆ ಅಮಿತ್ ಶಾ ಅವರು ಮತಗಟ್ಟೆಯ ಬಳಿ ಬರುತ್ತಿದ್ದಂತೆ ಗುಂಪಿನಿಂದ ಒಬ್ಬ ಬಾಲಕನು ‘ಓ ಅಮಿತ್ ಕಾಕಾ’ ಎಂದು ಕೂಗಿದ್ದೇನೆ. ಅಲ್ಲದೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ.

ಈ ವೇಳೆ ತಕ್ಷಣ ಧ್ವನಿ ಬಂದ ಕಡೆ ತಿರುಗಿ ನೋಡಿದ ಅಮಿತ್ ಶಾ ಅವರು ಕೊಂಚವೂ ಸಿಟ್ಟುಗೊಳ್ಳದೆ ಜೋರಾಗಿ ನಗುತ್ತಾ ಕೈ ಬೀಸಿದ್ದಾರೆ. ಸುತ್ತ ಮುತ್ತ ನಿಂತವರೂ ನಗಾಡಿದ್ದಾರೆ. ಜೈ ಶ್ರೀರಾಮ್ ಎಂದಾಗ ಎರಡೂ ಕೈ ಮುಗಿದು ನಮಸ್ಕಾರ ಮಾಡಿ ನಗುತ್ತಲೇ ಮತ ನೀಡಲು ಮುನ್ನಡೆದಿದ್ದಾರೆ. ಸದ್ಯ ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://www.instagram.com/reel/C6qFCp6Rq0_/?igsh=aGk0M25icGwweThs