Home News GT Mall Owner: ಪಂಚೆ ಉಟ್ಟುಕೊಂಡೇ ಪಕೀರಪ್ಪನಿಗೆ ಕೈ ಮುಗಿದು ಕ್ಷಮೆ ಕೇಳಿ, ತಿಂಡಿ...

GT Mall Owner: ಪಂಚೆ ಉಟ್ಟುಕೊಂಡೇ ಪಕೀರಪ್ಪನಿಗೆ ಕೈ ಮುಗಿದು ಕ್ಷಮೆ ಕೇಳಿ, ತಿಂಡಿ ತಿನ್ನಿಸಿದ ಜಿ ಟಿ ಮಾಲ್ ಓನರ್ !! ಇದು ಪಂಚೆ ಪವರ್ ಎಂದ ನೆಟಿಜನ್ಸ್

GT Mall Owner

Hindu neighbor gifts plot of land

Hindu neighbour gifts land to Muslim journalist

GT Mall Owner: ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಾವೇರಿ ಮೂಲದ ರೈತ ಫಕೀರಪ್ಪ(Pakeerappa) ಅವರು ಪಂಚೆ ಉಟ್ಟಿ ಬಂದರೆಂದು ಜಿ ಟಿ ಮಾಲ್ ಒಳಗೆ ಬಿಡದೆ ಅಪಮಾನ ಮಾಡಿದ ಘಟನೆ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ವಿಧಾನಸಭಾ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಇದರಿಂದ ಮಾಲೀಕರು ಸ್ವಯಂಪ್ರೇರಿತವಾಗಿ ಮಾಲ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದರು. ಇಷ್ಟೇ ಅಲ್ಲದೆ ಇದೀಗ ಮಾಲ್ ಓನರ್(GT Mall Owner)ಕೂಡ ತಾನೂ ಪಂಚೆ ಉಟ್ಟುಕೊಂಡು ಪರೀಕಪ್ಪನವರಿಗೆ ಕ್ಷಮೆ ಕೇಳಿದ್ದಾರೆ.

ಹೌದು, ಪವರ್ ಪುಲ್ ಪಂಚೆ(Panche)ಗೆ ಮಾಡಿದ ಅಪಮಾನದಿಂದ ರಾಜ್ಯದಲ್ಲಿ ಕೆಲವು ದಿನಗಳಿಂದ ಆದ ಬೆಳವಣಿಗೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ಇದರಿಂದ ತೀವ್ರ ಮುಜುಗರಕ್ಕೀಡಾದ ಜಿ ಟಿ ಮಾಲ್ ಮಾಲೀಕ ಆನಂದ್ ಪುತ್ರ ಮಾಧ್ಯಮಗಳ ಮುಂದೆ ಪಕೀರಪ್ಪನಿಗೆ ಕ್ಷಮೆ ಕೇಳಿದ್ದರು. ಆದರೀಗ ಆನಂದ್ ಅವರು ಸ್ವತಃ ಪಕೀರಪ್ಪ ಹಾಗೂ ಅವರ ಮಗನನ್ನು ಮನೆಗೆ ಕರೆಸಿ, ತಿಂಡಿ ತಿನ್ನಿಸಿ, ಕೈ ಮುಗಿದು ಕ್ಷಮೆ ಕೋರಿದ್ದಾರೆ.

ವಿಶೇಷ ಅಂದ್ರೆ ಆನಂದ್ ಅವರು ಪಕೀರಪ್ಪನಿಗೆ ಕ್ಷಮೆ ಕೇಳುವಾಗ ತಾನೂ ಪಂಚೆ ಉಟ್ಟಿದ್ದರು. ಇದು ಎಲ್ಲರ ಗಮನ ಸೆಳೆದಿದ್ದು ಪಂಚೆ ಪವರ್ ಏನು ಅಂತ ಗೊತ್ತಾಯ್ತಾ? ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಪಕೀಕರಪ್ಪನಿಗೆ ಸ್ವತಃ ಆನಂದ್ ಅವರೇ ತಿಂಡಿ ತಿನ್ನಿಸಿ, ಕೈ ಮುಗಿದು ನಮ್ಮಿಂದ ಏನೋ ತಪ್ಪಾಗಿದೆ, ಕ್ಷಮಿಸಿ. ಇನ್ನು ಮುಂದೆ ಹೀಗಾಗೊಲ್ಲ. ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಫೋಟೋ, ವಿಡಿಯೋ ಹರಿದಾಡುತ್ತಿವೆ.

Uttara Pradesh ಹೀನಾಯ ಸೋಲಿಗೆ ಕೊನೆಗೂ ಕಾರಣ ಹುಡುಕಿದ ಬಿಜೆಪಿ !! ಏನಿದೆ ಹೈಕಮಾಂಡ್ ಕೈ ಸೇರಿದ ಆ ರಹಸ್ಯ ವರದಿಯಲ್ಲಿ ?!