Home Interesting Viral Video : ಪತ್ನಿ ಎದುರಲ್ಲೇ ಆಕೆಯ ಸಹೋದರಿಯಲ್ಲಿ Kiss ಕೊಡು ಎಂದ ಮದುಮಗ |...

Viral Video : ಪತ್ನಿ ಎದುರಲ್ಲೇ ಆಕೆಯ ಸಹೋದರಿಯಲ್ಲಿ Kiss ಕೊಡು ಎಂದ ಮದುಮಗ | ಈ ಮಾತಿಗೆ ನಾಚಿ ನೀರಾಗಿ ಕರಗಿದ್ದು ಮಾತ್ರ ಇವರು!

Hindu neighbor gifts plot of land

Hindu neighbour gifts land to Muslim journalist

ಪ್ರಸ್ತುತ ಭಾರತದಲ್ಲಿ ಮದುವೆಯ ಸೀಜನ್ ಮುಂದುವರೆದಿದೆ. ಇನ್ಸ್ಟಾಗ್ರಾಮ್, ಫೇಸ್​ಬುಕ್ ಸೇರಿ ಹಲವು ಸೋಷಿಯಲ್ ಮೀಡಿಯಾ ಫ್ಲಾಟ್​​ಫಾರ್ಮ್​ಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಮದುವೆಗೆ ಸಂಬಂಧಿಸಿದ ಹೊಸ ಹೊಸ ವೀಡಿಯೋಗಳು ಅಪ್‌ಲೋಡ್ ಆಗುತ್ತಲೇ ಇದೆ. ನೆಟ್ಟಿಗರಿಗೆ ಮದುವೆ ವಿಡಿಯೋಗಳು ಆಲ್​ಟೈಂ ಫೇವರೇಟ್ ಅಂತನೇ ಹೇಳ್ಬೋದು. ಪ್ರಪಂಚದ ಯಾವುದೇ ಮೂಲೆಯ ಮದುವೆ ವಿಡಿಯೋ ಆದರೂ ಸರಿ ನೆಟ್ಟಿಗರು ಮನಮೆಚ್ಚಿ ನೋಡುತ್ತಾರೆ. ದೇಸಿ ಮದುವೆಗಳ ವಿಡಿಯೋಗಳಂತೂ ಫನ್ನಿಯಾಗಿ, ಕೆಲವೊಮ್ಮೆ ಭಾವುಕವಾಗಿರುತ್ತವೆ. ಈಗ ಅಂಥದ್ದೇ ಒಂದು ಮದುವೆ ವಿಡಿಯೋ ವೈರಲ್ ಆಗಿದ್ದೂ, ಭಾರಿ ಸದ್ದು ಮಾಡುತ್ತಿದೆ.

ವರನು ಬಹಿರಂಗವಾಗಿಯೇ ತನ್ನ ಪತ್ನಿಯ ಸಹೋದರಿಗೆ 5 ಮುತ್ತುಗಳನ್ನು ಕೇಳುವ ವೀಡಿಯೊ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಆದ್ರೆ, ಇಲ್ಲೊಂದು ಇಂಟ್ರೆಸ್ಟಿಂಗ್ ಸಂಗತಿ ಏನಪ್ಪಾ ಅಂದರೆ, ವರನು ಮದುವೆ ಮಂಟಪದಲ್ಲಿಯೇ ವಧುವಿನ ಎದುರೆ ಆಕೆಯ ಸಹೋದರಿಗೆ 5 ಕಿಸ್ ಗಳ ಬೇಡಿಕೆ ಇಟ್ಟಿದ್ದಾನೆ. ವರನ ಈ ಬೇಡಿಕೆ ಕೇಳಿ ಮೊದಲು ಶಾಕ್ ಆದ ವಧು, ನಂತರ ಆಕೆ ಕೂಡ ವರನೊಂದಿಗೆ ನಗಲು ಶುರು ಮಾಡುತ್ತಾಳೆ. ಇವೆಲ್ಲದರ ನಡುವೆ ಮತ್ತೊಂದು ಶಾಕ್ ರಿಯಾಕ್ಷನ್ ವರನ ಅತ್ತೆ ನೀಡಿದ್ದಾಳೆ. ಯಾವುದಕ್ಕೂ ಮೊದಲು ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಲೇಬೇಕು.

https://www.instagram.com/reel/Ci_liIVqXmt/?utm_source=ig_web_copy_link

ಮದುವೆಯ ಮಂಟಪದಲ್ಲಿ ನಡೆದ ‘ಚಂದ್ ಪಕಾಯಿಯಾ..’ ಸಮಾರಂಭದ ವೇಳೆ ವರನು ಈ ಆಶ್ಚರ್ಯಕರ ಬೇಡಿಕೆಯನ್ನು ಇಟ್ಟಿದ್ದಾನೆ ಎಂಬುದು ಇಲ್ಲಿ ಉಲ್ಲೇಖನೀಯ. ವರನ ಅತ್ತೆ ‘ಚಂದ್’ (ಒಂದು ರೀತಿಯ ಒಗಟು) ಹೇಳುವಂತೆ ವರನ ಬಳಿ ಒತ್ತಾಯಿಸಿದಾಗ, ವರ ಚಂದ್ ಹೇಳುವುದನ್ನು ನೀವು ವಿಡಿಯೋದಲ್ಲಿ ಕೇಳಬಹುದು, ‘ಚಂದ್ ಪಕಾಯಿಯಾ.. ಚಂದ್ ಪಕಾಯಿಯಾ… ಚಂದ್ ಕೆ ಉಪರ್ ತಾಲಿ.. ಅಗಲಾ ಚಂದ್ ತಭಿ ಸುನಾವುಂಗಾ, ಜಬ್ ಪಾಂಚ್ ಪಪ್ಪಿ ದೆಗಿ ಸಾಲಿ’ ಎಂದು ಚಂದ್ ಹೇಳುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು.

ಇನ್ನೊಂದೆಡೆ ತನ್ನ ಅಳಿಯ ವಿವಾಹ ಮಾಡಿಕೊಂಡ ಮೊದಲ ಮಗಳ ಮುಂದೆಯೇ ಎರಡನೇ ಮಗಳಿಗೆ ಕಿಸ್ ಕೊಡುವಂತೆ ಬೇಡಿಕೆ ಇಡುವುದನ್ನು ಕೇಳಿ ವಧುವಿನ ತಾಯಿ ನಾಚಿ ನೀರಾಗಿದ್ದಾಳೆ. ವರನ ಈ ವಿಚಿತ್ರ ಬೇಡಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವರ ತನ್ನ ಚಂದ್ ಹೇಳಿ ಮುಗಿಸಿದ ಬಳಿಕ ಅಲ್ಲಿ ನೆರೆದ ಜನರೆಲ್ಲರೂ ಮೊದಲು ಅವಾಕ್ಕಾಗುತ್ತಾರೆ ಮತ್ತು ನಂತರ ನಗೆಗಡಲಲ್ಲಿ ತೇಲುತ್ತಾರೆ. jayan_shu2021 ಹೆಸರಿನ Instagram ಖಾತೆಯ ಮೂಲಕ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.