Home News ಗೂಗಲ್ ಪೇ ಬಳಸುವವರಿಗೆ ಗುಡ್ ನ್ಯೂಸ್ | ಇನ್ನು ಮುಂದೆ ಗೂಗಲ್ ಪೇ ಆಪ್ ಮೂಲಕ...

ಗೂಗಲ್ ಪೇ ಬಳಸುವವರಿಗೆ ಗುಡ್ ನ್ಯೂಸ್ | ಇನ್ನು ಮುಂದೆ ಗೂಗಲ್ ಪೇ ಆಪ್ ಮೂಲಕ ಚಿನ್ನ ಖರೀದಿಸಬಹುದು ಮತ್ತು ಮಾರಬಹುದು !!

Hindu neighbor gifts plot of land

Hindu neighbour gifts land to Muslim journalist

ಈ ಯುಗದಲ್ಲಿ ಡಿಜಿಟಲ್ ಪೇಮೆಂಟ್ ಎನ್ನುವುದು ಮಾಮೂಲಾಗಿ ಹೋಗಿದೆ. ಅದರಲ್ಲೂ ಗೂಗಲ್ ಪೇ ಅನ್ನುವುದು ದೈನಂದಿನ ಜೀವನದ ಒಂದು ಬಹು ದೊಡ್ಡ ಅಂಗವಾಗಿ ಹೋಗಿದೆ. ಎಲೆಕ್ಟ್ರಿಸಿಟಿ ಬಿಲ್, ನೀರಿನ ಬಿಲ್, ರೀಚಾರ್ಜ್ ಹೀಗೆ ಯಾವುದೇ ರೀತಿಯ ಪೇಮೆಂಟ್ ಆದರೂ ಗೂಗಲ್ ಪೇ ಮೂಲಕ ಪೇಮೆಂಟ್ ಸಾಧ್ಯ.

ನೀವೂ ಗೂಗಲ್ ಪೇ ಬಳಸುತ್ತಿದ್ದರೆ, ಈ ಒಂದು ಸೌಲಭ್ಯದ ಬಗ್ಗೆ ತಿಳಿಯಲೇಬೇಕು.ಅದೇನೆಂದರೆ ಇನ್ಮುಂದೆ ಗೂಗಲ್ ಪೇ ಮೂಲಕ ಚಿನ್ನವನ್ನು ಖರೀದಿ ಹಾಗೂ ಮಾರಾಟವನ್ನು ಎಂಎಂಟಿಸಿ-ಪಿಎಎಂಪಿ ಪ್ರೈವೇಟ್ ಲಿಮಿಟೆಡ್ ಮುಖಾಂತರ ಮಾಡಬಹುದು.

ಗೂಗಲ್ ಪೇ ಮೂಲಕ ಖರೀದಿಸುವ ಚಿನ್ನವು 99.9% ಪರಿಶುದ್ಧ 24 ಕ್ಯಾರೆಟ್ ಚಿನ್ನ ಆಗಿರುತ್ತದೆ. ಇಲ್ಲಿ ನೀವು ಖರೀದಿಸಿದ ಚಿನ್ನ “ಗೋಲ್ಡ್ ಅಕ್ಯುಮ್ಯುಲೇಶನ್ ಪ್ಲಾನ್” (ಜಿಎಪಿ) ನಲ್ಲಿ ಸಂಗ್ರಹವಾಗಿರುತ್ತದೆ. ಖರೀದಿಸಿದ ಅಥವಾ ಮಾರಿದ ಚಿನ್ನವು ಗೂಗಲ್ ಪೇಯ ಗೋಲ್ಡ್ ಲಾಕರ್ ಸೆಕ್ಷನ್‌ನಲ್ಲಿ ಕಾಣಿಸುತ್ತದೆ. ಈ ಲಾಕರ್ ನಿಮ್ಮ ಫೋನ್ ನಂಬರ್ ಹಾಗೂ ಸಿಮ್ ಜೊತೆ ಲಿಂಕ್ ಆಗಿರುತ್ತದೆ. ಒಂದು ವೇಳೆ, ನಿಮ್ಮ ಸಿಮ್ ಕಳೆದು ಹೋದಲ್ಲಿ ಅಕೌಂಟ್ ಪುನಃ ರೀಸ್ಟೋರ್ ಮಾಡಬೇಕಾಗುತ್ತದೆ.

*ಮೊದಲಿಗೆ ಗೂಗಲ್ ಪೇ ಓಪನ್ ಮಾಡಿ.
*ನ್ಯೂ ಆಪ್ಶನ್ ಕ್ಲಿಕ್ ಮಾಡಿ.
*ಸರ್ಚ್ ಬಾರ್‌ನಲ್ಲಿ “ಗೋಲ್ಡ್ ಲಾಕರ್” ಹುಡುಕಿ ಓಕೆ ಕೊಡಿ.
*ಇನ್ನು ಬಯ್(buy) ಆಪ್ಶನ್ ಕ್ಲಿಕ್ ಮಾಡಿ. ಆಗ ಕರೆಂಟ್ ಗೋಲ್ಡ್ ಪ್ರೈಸ್ ಕಾಣುತ್ತದೆ. ನೀವು ಖರೀದಿ ಮಾಡುವ ದರ ಸುಮಾರು 5 ನಿಮಿಷಗಳ ಕಾಲ ಲಾಕ್ ಆಗಿರುತ್ತದೆ.
*ಇನ್ನು ನೀವು ಖರೀದಿಸ ಬಯಸುವ ಚಿನ್ನದ ಅಮೌಂಟ್ ಟೈಪ್ ಮಾಡಿ. ದಿನಕ್ಕೆ 50,000 ವರೆಗಿನ ಚಿನ್ನ ಖರೀದಿಗೆ ಇಲ್ಲಿ ಅವಕಾಶ ಇದೆ. ಅದೇ ರೀತಿ ಕಡಿಮೆ ಅಂದರೆ 1 ರೂಪಾಯಿಯ ಚಿನ್ನವನ್ನೂ ನೀವು ಖರೀದಿ ಮಾಡಬಹುದು.
*ಚೆಕ್ ಮಾರ್ಕ್ ಟಿಕ್ ಮಾಡಿ.
*ಬೇಕಾದ ಪೇಮೆಂಟ್ ಆಪ್ಷನ್ ಸೆಲೆಕ್ಟ್ ಮಾಡಿ. ಪೇಮೆಂಟ್ ಆದ ನಂತರ ಚಿನ್ನ ನಿಮ್ಮ ಲಾಕರ್ ನಲ್ಲಿ ಸೇವ್ ಆಗಿರುತ್ತದೆ.
*ಅಗತ್ಯವಿದ್ದರೆ ಕಾನ್ಸಲ್ ಕೂಡ ಮಾಡಬಹುದು.

ಚಿನ್ನ ಮಾರುವುದು ಹೇಗೆ?

*ಗೂಗಲ್ ಪೇ ಓಪನ್ ಮಾಡಿ.
*ನ್ಯೂ ಆಪ್ಶನ್ ಕ್ಲಿಕ್ ಮಾಡಿ.
*ಸರ್ಚ್ ಬಾರ್‌ನಲ್ಲಿ “ಗೋಲ್ಡ್ ಲಾಕರ್” ಹುಡುಕಿ ಓಕೆ ಕೊಡಿ.
*ಸೆಲ್ ಆಪ್ಶನ್ ಕ್ಲಿಕ್ ಮಾಡಿ.
*ಮಾರಾಟ ಮಾಡಲು ಬಯಸುವ ಅಮೌಂಟ್ ಕ್ಲಿಕ್ ಮಾಡಿ.
*ಚೆಕ್ ಮಾರ್ಕ್ ಕ್ಲಿಕ್ ಮಾಡಿ.