Home News Good News To Farmers: ನೀರಾವರಿಗಾಗಿ ಈ ರೈತರಿಗೆ ಸಿಗಲಿದೆ ಉಚಿತ ವಿದ್ಯುತ್, ಭೂ ರಹಿತ...

Good News To Farmers: ನೀರಾವರಿಗಾಗಿ ಈ ರೈತರಿಗೆ ಸಿಗಲಿದೆ ಉಚಿತ ವಿದ್ಯುತ್, ಭೂ ರಹಿತ ಕಾರ್ಮಿಕರಿಗೆ 10 ಸಾವಿರ ರೂ!!!

Good News To Farmers

Hindu neighbor gifts plot of land

Hindu neighbour gifts land to Muslim journalist

Good News To Farmers: ಛತ್ತೀಸ್‌ಗಢ ಸರ್ಕಾರವು ಕೃಷಿ ಬಜೆಟ್ ಅನ್ನು ಶೇ.33 ರಷ್ಟು ಹೆಚ್ಚಿಸಿದೆ. ವಿಷ್ಣು ಸರ್ಕಾರದಿಂದ ಕೃಷಿಗೆ ಒಟ್ಟು 13,438 ಕೋಟಿ ರೂ. ಮೀಸಲಿರಿಸಲಾಗಿದೆ.

ವಿಷ್ಣುರವರ ಉತ್ತಮ ಆಡಳಿತದ ಬಜೆಟ್ ನಲ್ಲಿ ಅನ್ನದಾತರ ಹಿತರಕ್ಷಣೆಗೆ ವಿಶೇಷ ಒತ್ತು ನೀಡಿದ್ದಾರೆ.

ಇದನ್ನೂ ಓದಿ: Viral News: ಮನೆಯ ಗೋಡೆ ಒಡೆಯುವಾಗ ಮನೆಯೊಡೆಯನ ಬೆಡ್ ರೂಂ ನಲ್ಲಿತ್ತು 5 ನಾಗರಹಾವು!!

ಛತ್ತೀಸ್‌ಗಢ ಸರ್ಕಾರವು ರೈತರಿಗೆ 5 ಹೆಚ್ಪಿ ಕೃಷಿ ಪಂಪ್‌ಗಳ ವರೆಗೆ ಉಚಿತ ವಿದ್ಯುತ್ ನೀಡಲಿದೆ.

ಇದಕ್ಕಾಗಿ ಬಜೆಟ್‌ನಲ್ಲಿ 3,500 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ.

ಛತ್ತೀಸ್‌ಗಢ ಸರ್ಕಾರವು ಕೃಷಿ ಬಜೆಟ್ ಅನ್ನು ಶೇ.33 ರಷ್ಟು ಹೆಚ್ಚಿಸಿದೆ. ವಿಷ್ಣು ಸರ್ಕಾರದಿಂದ ಕೃಷಿಗೆ ಒಟ್ಟು 13,438 ಕೋಟಿ ರೂ. ಮೀಸಲಿರಿಸಲಾಗಿದೆ. ಕೃಷಿಕ್ ಉನ್ನತಿ ಯೋಜನೆ’ ಯಡಿಯಲ್ಲಿ 10,000 ಕೋಟಿಯನ್ನು ಹಾಗೂ ಸಣ್ಣ ಮತ್ತು ಮಧ್ಯಮ ರೈತರನ್ನು ಬಲ ಪಡಿಸುವ ಉದ್ದೇಶದಿಂದ ಜಲ ಜೀವನ್ ಮಿಷನ್ ಗೆ 4,500 ಮೀಸಲಿಡಲಾಗಿದೆ.ಇದರಿಂದ ರಾಜ್ಯದ 24.72 ಲಕ್ಷಕ್ಕೂ ಅಧಿಕ ರೈತರಿಗೆ ಅನುಕೂಲವಾಗಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಯೋಜನೆಯಿಂದ 2 ಲಕ್ಷ 30 ಸಾವಿರ ಹೆಚ್ಚು ರೈತರಿಗೆ ಅನುಕೂಲವಾಗಲಿದೆ.

ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್

ಛತ್ತೀಸ್‌ಗಢ ಸರ್ಕಾರವು ರೈತರಿಗೆ 5 ಹೆಚ್ಪಿಯ ವರೆಗಿನ ಕೃಷಿ ಪಂಪ್‌ಗಳಿಗೆ ಉಚಿತ ವಿದ್ಯುತ್ ನೀಡಲಿದೆ ಎಂದು ತಿಳಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ 3,500 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿಕೊಂಡಿದೆ.

ಭೂರಹಿತ ಕೃಷಿ ಕೂಲಿಕಾರರ ಯೋಜನೆಗೆ ಚಾಲನೆ

ದೀನದಯಾಳ್ ಉಪಾಧ್ಯಾಯ ಭೂರಹಿತ ಕೃಷಿ ಕೂಲಿಕಾರರ ಯೋಜನೆಯನ್ನು ಸರ್ಕಾರವು ಕೃಷಿ ಕಾರ್ಮಿಕರಿಗಾಗಿ ಆರಂಭ ಮಾಡಿದೆ. ಈ ಯೋಜನೆಯಲ್ಲಿ ಭೂರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ 10,000 ರೂ. ಸಹಾಯಧನ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ . ಇದಕ್ಕಾಗಿ ಛತ್ತೀಸ್‌ಗಢ ಸರ್ಕಾರದ ಬಜೆಟ್‌ನಲ್ಲಿ 500 ಕೋಟಿ ರೂ.ಮೀಸಲಿಟ್ಟಿದೆ.

ತೆಂದು ಎಲೆ ಕೃಷಿಕರಿಗೆ ಬಂಬಾಟ್ ಲಾಭ

ನಮ್ಮ ಅರಣ್ಯವಾಸಿಗಳ ಆದಾಯದ ಮುಖ್ಯ ಮೂಲ ಅರಣ್ಯ ಉತ್ಪನ್ನವಾಗಿದೆ. ಅವರನ್ನು ಆರ್ಥಿಕವಾಗಿ ಬಲಪಡಿಸಲು, ವಿಷ್ಣುದೇವ್ ಸರ್ಕಾರವು ತೆಂದು ಎಲೆ ಸಂಗ್ರಹಕಾರರ ಸಂಭಾವನೆಯನ್ನು ಪ್ರತಿ ಮಾನಕ ಚೀಲಕ್ಕೆ 4000 ರೂ.ನಿಂದ 5,500 ರೂ.ಗೆ ಹೆಚ್ಚಿಸಿದೆ. ನಮ್ಮ ರೈತರು ನಮ್ಮ ಆರ್ಥಿಕತೆಯ ಬೆನ್ನೆಲುಬು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ನೂತನ ಸರಕಾರದ ಬಜೆಟ್ ನಲ್ಲಿ ಸೋಲಾರ್ ಸಮುದಾಯ ನೀರಾವರಿ ಯೋಜನೆಗೆ 30 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಈ ಯೋಜನೆಯಡಿ 795 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.