Home latest ದುಡ್ಡು ಮಾತ್ರವಲ್ಲ, ಇನ್ನು ಮುಂದೆ ಚಿನ್ನದ ನಾಣ್ಯ ಕೂಡಾ ನೀಡಲಿದೆ ಎಟಿಎಂ | ಇನ್ನೂ ಹಲವು...

ದುಡ್ಡು ಮಾತ್ರವಲ್ಲ, ಇನ್ನು ಮುಂದೆ ಚಿನ್ನದ ನಾಣ್ಯ ಕೂಡಾ ನೀಡಲಿದೆ ಎಟಿಎಂ | ಇನ್ನೂ ಹಲವು ವೈಶಿಷ್ಟ್ಯ ಗಳನ್ನೊಳಗೊಂಡ ಈ ಎಟಿಎಂ ಭಾರತದಲ್ಲಿ ಇದೇ ಮೊದಲ ಬಾರಿಗೆ!

Hindu neighbor gifts plot of land

Hindu neighbour gifts land to Muslim journalist

ಎಟಿಎಂ ಯಂತ್ರ ಅಂದರೆ ಹಣ ಕೊಡುವ ಮಿಷನ್. ಆದರೆ ಇನ್ಮುಂದೆ ಈ ಯಂತ್ರ ಚಿನ್ನವನ್ನೂ ಕೊಡುತ್ತದೆಯಂತೆ. ಹೌದು, ಇನ್ನು ಮುಂದೆ ಎಟಿಎಂಗಳು ಚಿನ್ನದ ನಾಣ್ಯವನ್ನೂ ವಿತರಣೆ ಮಾಡಲಿವೆ.

ನಗದು ನೀಡುತ್ತಿದ್ದ ಎಟಿಎಂ ಯಂತ್ರಗಳು ಇದೇ ಮೊದಲ ಬಾರಿಗೆ ಚಿನ್ನದ ನಾಣ್ಯವನ್ನೂ ವಿತರಣೆ ಮಾಡಲಿವೆ.

ವಿದೇಶಗಳಲ್ಲಿ ಚಿನ್ನದ ಬಿಲ್ಲೆಗಳನ್ನು ನೀಡುವ ಎಟಿಎಂಗಳು ಇವೆ. ಆದರೆ ಭಾರತದಲ್ಲಿ ಇದೇ ಮಾದರಿಯ ಮೂರು ಎಟಿಎಂ ಯಂತ್ರಗಳು ಹೈದರಾಬಾದ್‌ನಲ್ಲಿ ಸ್ಥಾಪಿತವಾಗಲಿದೆ. ಸಿಕಂದರಬಾದ್, ಗುಲ್ದಾರ್ ಹೌಸ್, ಮತ್ತು ಅಬಿಡ್ಸ್‌ಗಳಲ್ಲಿ ಈ ವಿಶಿಷ್ಟ ಎಟಿಎಂ ಬರಲಿದೆ
ಈ ಎಟಿಎಂಗಳನ್ನು 40 ದಿನಗಳಲ್ಲಿ ಗೋಲ್ಡ್‌ಸಿಕ್ಕಾ ಲಿಮಿಟೆಡ್ ಸ್ಥಾಪಿಸಿಲಿದೆ.

0.5 ಗ್ರಾಂ.ನಿಂದ 100 ಗ್ರಾಂ ತೂಕದ ಕಾಯಿನ್ ಗಳನ್ನು ಈ ಎಟಿಎಂ ವಿತರಿಸಲಿದೆ. ಪ್ರತಿದಿನದ ಚಿನ್ನದ ದರದಲ್ಲಿ ಆಗುವ ಏರಿಳಿಕೆಯನ್ನು ಗಮನಿಸಿದ ನಂತರ ಲೆಕ್ಕಾಚಾರ ಮಾಡಿ ಈ ಎಟಿಎಂ ಚಿನ್ನದ ಕಾಯಿನ್ ಗಳನ್ನು ವಿತರಣೆ ಮಾಡಲಿದೆ. ಇದು ಬಿಐಎಸ್ ( BIS) ಮತ್ತು ಹಾಲ್ ಮಾರ್ಕ್ ನಿಂದ ಪ್ರಮಾಣೀಕೃತವಾಗಿರುತ್ತದೆ.

ಯಾರಿಗೆ ಚಿನ್ನದ ಕಾಯಿನ್ ಎಟಿಎಂನಿಂದ ಬೇಕಾಗಿದೆಯೋ ಅಂತಹ ಗ್ರಾಹಕರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಚಿನ್ನದ ಕಾಯಿನ್ ಪಡೆಯಬಹುದು. ಇದರ ಜೊತೆಗೆನೇ ಕಂಪನಿ ಫ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಸ್ಮಾರ್ಟ್ ಕಾರ್ಡ್ ಗಳನ್ನೂ ಗ್ರಾಹಕರಿಗೆ ನೀಡಲಿದೆ.

ಗೋಲ್ಡ್ ಸಿಕ್ಕಾ ಕಂಪನಿಯ ಸಿಇಓ ಮತ್ತು ಪ್ರವರ್ತಕ ಸೈ ತರುಜ್ ಅವರು ಹೇಳುವ ಪ್ರಕಾರ, ಇನ್ನು ಒಂದು ವರ್ಷದಲ್ಲಿ ದೇಶಾದ್ಯಂತ ಮೂರು ಸಾವಿರ ಚಿನ್ನದ ನಾಣ್ಯ ನೀಡುವ ಎಟಿಎಂ ತೆರೆಯುವ ಭರವಸೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.