Home News Goa new rules: ಗೋವಾದಲ್ಲಿ ಹೊಸ ರೂಲ್ಸ್ , ಅನುಮತಿ ಇಲ್ಲದೆ ಪ್ರವಾಸಿಗರ ಫೋಟೋ ಕ್ಲಿಕ್ಕಿಸಿದರೆ...

Goa new rules: ಗೋವಾದಲ್ಲಿ ಹೊಸ ರೂಲ್ಸ್ , ಅನುಮತಿ ಇಲ್ಲದೆ ಪ್ರವಾಸಿಗರ ಫೋಟೋ ಕ್ಲಿಕ್ಕಿಸಿದರೆ ಸೆರೆಮನೆವಾಸ ಫಿಕ್ಸ್!!

Hindu neighbor gifts plot of land

Hindu neighbour gifts land to Muslim journalist

ರಜೆಯ ಮೋಜಿನ ಪರಿಣಾಮಕಾರಿಯಾದ ಅನುಭವವನ್ನು ಪಡೆಯಲು ಗೋವಾ ಇಡಿ ಭಾರತದಲ್ಲೇ ನೆಚ್ಚಿನ ತಾಣವಾಗಿದ್ದು, ಉತ್ತಮಮವಾದ ಸಂಪರ್ಕ ವ್ಯವಸ್ಥೆ ಹೊಂದಿದ್ದು, ಸರಳವಾಗಿ ತಲುಪಬಹುದಾದ ಗೋವಾ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ರಜೆ ಅಥವಾ ವಿರಾಮದ ಸಮಯವನ್ನು ಆನಂದದಿಂದ ಕಳೆಯಬಹುದಾದ ತಾಣವಾಗಿದೆ. ಶಾಂತಿ ಹಾಗು ನಿಧಾನಗತಿಯ ಜೀವನ ಶೈಲಿಗೆ ಹೆಸರುವಾಸಿಯಾಗಿರುವ ಗೋವಾ ದೇಶಿಯ ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗಿದೆ. ಇನ್ನು ವಿದೇಶಿಯರು ಇಲ್ಲಿರುವ ಸ್ವಾತಂತ್ರ್ಯ, ವಿಸ್ಮಯಭರಿತ ಜೀವನಶೈಲಿಗೆ ಮನಸೋಲದೆ ಇರಲಾರರು.

ಸದ್ಯ ಗೋವಾದಲ್ಲಿ ಪ್ರವಾಸಿಗರ ಖಾಸಗಿತನ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಗೋವಾದ ಬೀಚ್‌ಗಳಲ್ಲಿ ಪ್ರವಾಸಿಗರ ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಅವರ ಫೋಟೋಗಳನ್ನು ತೆಗೆಯುವಂತಿಲ್ಲ ಎಂದು ಆದೇಶ ನೀಡಿದೆ.

ಹೌದು ಫೋಟೋ ತೆಗೆಯುವ ಮುನ್ನ ಅವರ ಅನುಮತಿ ಕಡ್ಡಾಯವಾಗಿರುತ್ತದೆ. ವಿಶೇಷವಾಗಿ ಅವರು ಬಿಸಿಲಿನಲ್ಲಿ ಮಲಗಿರುವಾಗ, ಸಮುದ್ರದಲ್ಲಿ ಮೋಜು ಮಾಡುತ್ತಿರುವಾಗ ಫೋಟೋಗಳನ್ನು ಅವರ ಅನುಮತಿ ಇಲ್ಲದೆ ತೆಗೆಯುವಂತಿಲ್ಲ ಎಂದು ತಿಳಿಸಲಾಗಿದೆ. ಒಬ್ಬ ವ್ಯಕ್ತಿ ಫೋಟೋ ತೆಗೆಯುವಾಗಲೂ ಅವರ ಅನುಮತಿ ಬೇಕಾಗಿರುತ್ತದೆ. ಪ್ರವಾಸಿಗರ ಖಾಸಗಿತನವನ್ನು ಗೌರವಿಸುವ ಸಲುವಾಗಿ ಈ ನಿಯಮಗಳನ್ನು ಮಾಡಲಾಗಿದೆ ಎಂದು ಗೋವಾ ಸರ್ಕಾರ ತಿಳಿಸಿದೆ.

ಅದಲ್ಲದೆ ಗೋವಾದಲ್ಲಿ ತೆರೆದ ಸ್ಥಳದಲ್ಲಿ ಅಡುಗೆ ಮಾಡುವುದನ್ನೂ ಸಹ ನಿಷೇಧಿಸಲಾಗಿದೆ. ಹಾಗೆ ಮಾಡಿದರೆ 50 ಸಾವಿರ ರೂಪಾಯಿಯವರೆಗೆ ದಂಡ ವಿಧಿಸುವ ಅವಕಾಶವಿದೆ. ಅದಲ್ಲದೆ ಬೀಚ್‌ನಲ್ಲಿ ಕುಳಿತು ಮದ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ಜೊತೆಗೆ ಅಪಘಾತಗಳನ್ನು ತಡೆಯುವ ಸಲುವಾಗಿ ಬಂಡೆಗಳು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳದಂತೆ ಸರ್ಕಾರ ಹೇಳಿದೆ.

ಇನ್ನು ಗೋವಾದ ಐತಿಹಾಸಿಕ ಕಟ್ಟಡಗಳಿಗೆ ಹಾನಿ ಮಾಡದಂತೆ ಪ್ರವಾಸಿಗರಿಗೆ ಮನವಿ ಮಾಡಲಾಗಿದೆ. ಅಧಿಕ ಶುಲ್ಕ ವಿಧಿಸುವುದನ್ನು ತಪ್ಪಿಸಲು, ಮೀಟರ್‌ ಇರುವ ಟ್ಯಾಕ್ಸಿಗಳನ್ನೇ ಬಳಸಿ, ಅದರಲ್ಲಿ ನಮೂದಾದ ದರವನ್ನೇ ಪ್ರವಾಸಿಗರು ಪಾವತಿ ಮಾಡಬೇಕು ಎಂದು ಸೂಚಿಸಲಾಗಿದೆ. ಮಾರ್ಗಸೂಚಿ ಪ್ರಕಾರ, ಗೋವಾಗೆ ಬರುವ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಲಾದ ಹೋಟೆಲ್‌ಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ.

ಮುಖ್ಯವಾಗಿ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ, ಕಳ್ಳರು ಕದ್ದ ಬೈಕ್ ಅಥವಾ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಾರೆ. ಹೊಸ ಮಾರ್ಗಸೂಚಿಯಲ್ಲಿ ಪ್ರವಾಸಿಗರು ಇಂತಹವರಿಂದ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಗೋವಾದ ಮೊಪಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಉದ್ಘಾಟಿಸಿದ್ದಾರೆ. ದಾಬೋಲಿಮ್ ನಂತರ ಗೋವಾದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದೆ. ಹೊಸ ವಿಮಾನ ನಿಲ್ದಾಣದಿಂದ ಗೋವಾದ ಸಂಪರ್ಕ ಹೆಚ್ಚಲಿದ್ದು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಉತ್ತರ ಗೋವಾಕ್ಕೆ ಬರಲು ಬಯಸುವ ಪ್ರವಾಸಿಗರು ಈಗ ಈ ವಿಮಾನ ನಿಲ್ದಾಣದಿಂದ ನೇರವಾಗಿ ತಲುಪಲು ಸಾಧ್ಯವಾಗುತ್ತದೆ. A380 ನಂತಹ ಜಂಬೋ ವಿಮಾನಗಳು ಮೋಪಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮತ್ತು ಲ್ಯಾಂಡ್ ಆಗಬಹುದು. ಈ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾರ್ಕಿಂಗ್ ಸೌಲಭ್ಯವೂ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, ಕ್ಯಾಸಿನೊ, ಇಕೋ ರೆಸಾರ್ಟ್ ಮತ್ತು ಶಾಪಿಂಗ್ ಪ್ಲಾಜಾವನ್ನು ಇಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರವಾಸಿಗರಿಗೆ ಈ ಎಲ್ಲಾ ಮಾರ್ಗಸೂಚಿಗಳನ್ನು ಗೋವಾ ಪ್ರವಾಸಿ ಇಲಾಖೆಯು ಜನವರಿ 26 ರಂದು ಹೊರಡಿಸಿದೆ. ಪ್ರವಾಸಿಗರ ಗೌಪ್ಯತೆ, ಅವರ ಸುರಕ್ಷತೆ ಮತ್ತು ವಂಚನೆಯನ್ನು ತಪ್ಪಿಸುವುದು ಈ ಮೇಲಿನ ಮಾರ್ಗಸೂಚಿಯ ಉದ್ದೇಶ ಆಗಿದೆ. ಪ್ರತಿಯೊಬ್ಬ ಪ್ರವಾಸಿಯ ಹಿತದೃಷ್ಟಿಯಿಂದ ಈ ಮೇಲಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ.