Home News ಸ್ವಂತ ಮಗಳ ಮೇಲೆಯೇ ತಂದೆಯಿಂದ ಲೈಂಗಿಕ ದೌರ್ಜನ್ಯ!!! | ಪಾಪಿ ತಂದೆಯ ಹಿಂಸೆ ತಾಳಲಾರದೇ ಅಪ್ಪನನ್ನೇ...

ಸ್ವಂತ ಮಗಳ ಮೇಲೆಯೇ ತಂದೆಯಿಂದ ಲೈಂಗಿಕ ದೌರ್ಜನ್ಯ!!! | ಪಾಪಿ ತಂದೆಯ ಹಿಂಸೆ ತಾಳಲಾರದೇ ಅಪ್ಪನನ್ನೇ ಕೊಂದ ಮಗಳು

Hindu neighbor gifts plot of land

Hindu neighbour gifts land to Muslim journalist

ಲೈಂಗಿಕ ದೌರ್ಜನ್ಯದಿಂದ ಪಾರಾಗಲು ಅಪ್ರಾಪ್ತ ಬಾಲಕಿಯೋರ್ವಳು ತನ್ನ ತಂದೆಯನ್ನೇ ಕೊಲೆ ಮಾಡಿರುವ ಘಟನೆ ವಿಲ್ಲಂಪುರದಲ್ಲಿ ಬೆಳಕಿಗೆ ಬಂದಿದೆ.

ಹೌದು, ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಬಾಲಕಿ ತನ್ನ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಕೆಲವು ದಿನಗಳ ಹಿಂದೆ ಬಾಲಕಿ ಬಟ್ಟೆ ಒಗೆಯುವ ಕೆಲಸದಿಂದ ಮನೆಗೆ ಹಿಂದಿರುಗಿದ ಬಳಿಕ ತನ್ನ ತಂದೆಯನ್ನು ಕೊಲೆ ಮಾಡಿರುವುದಾಗಿ ನೆರೆಹೊರೆಯವರ ಬಳಿ ಹೇಳಿಕೊಂಡಿದ್ದಾಳೆ. ಈ ಹಿಂದೆ ಈ ಪ್ರಕರಣ ಕುರಿತಂತೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ತನಿಖೆ ಬಳಿಕ 40 ವರ್ಷದ ತನ್ನ ತಂದೆಯನ್ನು ಕೊಂದಿದ್ದು ಮಗಳೇ ಎಂಬ ವಿಚಾರ ಬೆಳಕಿಗೆ ಬಂದಿದೆ.

ವಿಚಾರಣೆ ವೇಳೆ ಬಾಲಕಿ ತನ್ನ ತಾಯಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಅಕ್ಕ 160 ಕಿ.ಮೀ ದೂರದಲ್ಲಿರುವ ಚೆನ್ನೈನ ಜವಳಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾಳೆ.‌ ಹಾಗಾಗಿ ಆಕೆ ತನ್ನ ತಂದೆಯೊಟ್ಟಿಗೆ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಇದೀಗ ಬಾಲಕಿಯನ್ನು ಬಾಲಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಈಗ ಬಾಲಕಿ ಕ್ಷೇಮವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯವ್ಯಸನಿಯಾಗಿದ್ದ ತಂದೆ ನೀಡುತ್ತಿದ್ದ ಹಿಂಸೆಯನ್ನು ಸಹಿಸಲಾಗದೇ ಬಾಲಕಿಯೇ ತಂದೆಯನ್ನು ಕೊಲೆಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇನ್ನು ಈ ವಿಚಾರವಾಗಿ ಕಾನೂನು ತಜ್ಞರನ್ನು ಸಂಪರ್ಕಿಸಿದಾಗ ಭಾರತೀಯ ದಂಡ ಸಂಹಿತೆ ಸೆಕ್ಷನ್ 100ರ ಅಡಿ ಖಾಸಗಿ ರಕ್ಷಣೆಯ ಹಕ್ಕನ್ನು ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ನಾವು ಆಕೆಯನ್ನು ಮುಕ್ತಗೊಳಿಸಿದ್ದೇವೆ ಎಂದು ವಿಲ್ಲುಪುರಂ ಪೊಲೀಸ್ ಅಧಿಕಾರಿ ಎನ್. ಶ್ರೀನಾಥ್ ತಿಳಿಸಿದ್ದಾರೆ.