Home News Girish Mattannavar: SDM ವಿದ್ಯಾರ್ಥಿನಿ ಲೈಂಗಿಕ ಶೋಷಣೆ: ನಾಳೆ ಮಂಗಳೂರಿನಲ್ಲಿ ಶ್ರೀ ಗಿರೀಶ್ ಮಟ್ಟಣ್ಣನವರ್ ದಿಢೀರ್...

Girish Mattannavar: SDM ವಿದ್ಯಾರ್ಥಿನಿ ಲೈಂಗಿಕ ಶೋಷಣೆ: ನಾಳೆ ಮಂಗಳೂರಿನಲ್ಲಿ ಶ್ರೀ ಗಿರೀಶ್ ಮಟ್ಟಣ್ಣನವರ್ ದಿಢೀರ್ ಪತ್ರಿಕಾಗೋಷ್ಠಿ, ಸ್ಫೋಟಕ ಸಂಗತಿ ಬಹಿರಂಗ ಸಾಧ್ಯತೆ !

Girish Mattannavar

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಹೋರಾಟಗಾರ ಮತ್ತು ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ್ ಮಂಗಳೂರಿನಲ್ಲಿ ನಾಳೆ ಧಿಡೀರ್ ಪತ್ರಿಕಾಗೋಷ್ಠಿ ಕರೆದಿದ್ದಾರೆ. SDM ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ಶೋಷಣೆ ಮತ್ತು ಈ ಕುರಿತು ನಡೆಯುತ್ತಿರುವ ಹಲವು ವಿದ್ಯಮಾನಗಳ ಬಗ್ಗೆ ಗಿರೀಶ್ ಮಟ್ಟೆನ್ನನವರ್ ಪತ್ರಿಕಾಗೋಷ್ಠಿ ಕರೆದಿದ್ದು ಅಲ್ಲಿ ಇಡೀ ಪ್ರಕರಣದ ಬಗ್ಗೆ ಮಹತ್ವದ ಸತ್ಯ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಆದುದರಿಂದ ಗಿರೀಶ್ ಮಟ್ಟಣ್ಣನವರ್ ಕರೆದ ಪತ್ರಿಕಾಗೋಷ್ಠಿ ತೀವ್ರ ಕುತೂಹಲ ಮೂಡಿಸಿದೆ.

ಏನಂದ್ರು ಮಟ್ಟೆಣ್ಣನವರ್ ?
“ಮಂಗಳೂರಿನ ಎಲ್ಲ ಮಾಧ್ಯಮ ಮಿತ್ರರಿಗೆ ನಮಸ್ಕಾರ. ನಾಳೆ ಗುರುವಾರ ದಿನಾಂಕ 16-11-23 ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ SDM ವಿದ್ಯಾರ್ಥಿನಿಯ ಮೇಲಾದ ಲೈಂಗಿಕ ಶೋಷಣೆ ಕುರಿತಾದ ಪ್ರಕರಣವನ್ನು ತಿರುಚುತ್ತಿರುವ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ.
ಯಾವುದೇ ಭಯ ಅಥವಾ ಒತ್ತಡ ಇಲ್ಲದೆ, ವಾಸ್ತವ ತಿಳಿಯುವ ಹಂಬಲ ಇರುವ, ಮಾಧ್ಯಮ ವಲಯದಲ್ಲಿ ಕಾರ್ಯಪ್ರವೃತ್ತರಾದ ಪತ್ರಿಕಾ ವರದಿಗಾರರು,Tv ಮಾಧ್ಯಮ, U tube ಮಾಧ್ಯಮದ ಎಲ್ಲ ಮಿತ್ರರಿಗೆ ಈ ಮೂಲಕ ಆಹ್ವಾನಿಸುತ್ತಿದ್ದೇನೆ.” ಎಂದು ಮಾಜಿ ಪೊಲೀಸ ಅಧಿಕಾರಿ ಮತ್ತು ಸಾಮಾಜಿಕ ಹೋರಾಟಗಾರ ಶ್ರೀ ಗಿರೀಶ್ ಮಟ್ಟಣ್ಣನವರ್ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ.
ಸ್ಥಳ : ಮಂಗಳೂರು ಜಿಲ್ಲಾ ಪತ್ರಿಕಾ ಭವನ.
ಸಮಯ : ಬೆಳಿಗ್ಗೆ 11:15.
ದಿನಾಂಕ : 16-11-2023, ಗುರುವಾರ.
ಎಲ್ಲಾ ಸಾಮಾಜಿಕ ಕಳಕಳಿ ಇರುವ ಮಾಧ್ಯಮ ಮಿತ್ರರನ್ನು ಗಿರೀಶ್ ಮಟ್ಟಣ್ಣನವರ್ ವಿಶೇಷವಾಗಿ ಆಹ್ವಾನಿಸಿದ್ದಾರೆ.