Home News ತ್ರಿಕೋನ ಪ್ರೇಮಕಥೆಯ ದುರಂತ ಅಂತ್ಯ | ಒಬ್ಬನನ್ನು ಲವ್‌ ಮಾಡಿ ಇನ್ನೊಬ್ಬನೊಂದಿಗೆ ಸಲುಗೆ | ಇದು...

ತ್ರಿಕೋನ ಪ್ರೇಮಕಥೆಯ ದುರಂತ ಅಂತ್ಯ | ಒಬ್ಬನನ್ನು ಲವ್‌ ಮಾಡಿ ಇನ್ನೊಬ್ಬನೊಂದಿಗೆ ಸಲುಗೆ | ಇದು ಶಿಕ್ಷಕರ ಪ್ರೇಮ ಕಥೆ | ಬಲಿಯಾಗಿದ್ದು ಮಾತ್ರ ಏನೂ ಅರಿಯದ ಪುಟ್ಟ ಬಾಲಕ

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ಘಟನೆಯ ಆರಂಭ ಮತ್ತು ಅಂತ್ಯವನ್ನು ಪರಾಮರ್ಶೆ ಮಾಡಿ ನೋಡಿದಾಗ ಭಯಾನಕ ಸತ್ಯ ಬೆಳಕಿಗೆ ಬಂದಾಗ ಆಶ್ಚರ್ಯ ಆಗುವುದು ಖಂಡಿತ ಹಾಗೆಯೇ ಇಲ್ಲೊಂದು ಭಯಾನಕ ಘಟನೆ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮುತ್ತಪ್ಪ ಅಲ್ಲಿಯೇ ಕೆಲಸ ಮಾಡುತ್ತಿದ್ದ ಗೀತಾ ಅವರ ಮೇಲೆ ಮುತ್ತಪ್ಪನಿಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಪ್ರತಿನಿತ್ಯ ಸಲುಗೆಯಿಂದಲೇ ಇರುತ್ತಿದ್ದರು. ಮೆಸೇಜ್, ಫೋನ್​​ನಲ್ಲಿ ಮಾತನಾಡೋದು ಜೋರಾಗಿತ್ತು.

ಆದರೆ ಕೆಲವು ದಿನಗಳ ಹಿಂದೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಲಾಗಿತ್ತು. ಪ್ರವಾಸದ ವೇಳೆ ಶಾಲೆಯ ಮತ್ತೋರ್ವ ಸಹ ಶಿಕ್ಷಕ ಸಂಗನಗೌಡ ಎಂಬವರ ಜೊತೆ ಗೀತಾ ಸಲುಗೆಯಿಂದ ಇರೋದನ್ನು ಮುತ್ತಪ್ಪ ಗಮನಿಸಿದ್ದಾನೆ. ಗೀತಾ ನಡೆಯಿಂದ ಮುತ್ತಪ್ಪ ಕೋಪಗೊಂಡಿದ್ದನು.

ಈ ಕುರಿತಂತೆ ಗೀತಾ ಳ ಮೇಲೆ ಕೋಪಗೊಂಡ ಮುತ್ತಪ್ಪ ಶಾಲೆಗೆ ಬಂದು ಗೀತಾಳ ಮಗ ಭರತನಿಗೆ ಜೋರಾಗಿ ಹೊಡೆದಿದ್ದಾನೆ. ನಂತರ ತರಗತಿಯಿಂದ ಹೊರಗೆ ಕರೆದುಕೊಂಡು ಬಂದು ಮೊದಲ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾನೆ.

ತದನಂತರ ಗೀತಾ ಬಳಿ ತೆರಳಿ ಸಲಾಕೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಭರತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಅವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.ಸದ್ಯ ಗೀತಾ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂಗನಗೌಡ, ಮುತ್ತಪ್ಪ ಮತ್ತು ಗೀತಾ ಮೂವರ ತ್ರಿಕೋನ ಪ್ರೇಮಕಥೆಗೆ ಏನೂ ಅರಿಯದ 10 ವರ್ಷದ ಮಗು ಪ್ರಾಣ ಕಳೆದುಕೊಂಡಿದೆ. ಈಗಾಗಲೇ ನಾಲ್ಕನೇ ತರಗತಿ ವಿದ್ಯಾರ್ಥಿಯನ್ನು ಮೊದಲನೇ ಮಹಡಿಯಿಂದ ಕೆಳಗೆಸೆದು ಹತ್ಯೆಗೈದಿದ್ದ ಅತಿಥಿ ಶಿಕ್ಷಕ ಮುತ್ತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ಪೊಲೀಸ್ ವಿಚಾರಣೆ ನಂತರ ತಿಳಿದು ಬರಬೇಕಿದೆ.