

Pakistan: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್, ಪಾಕಿಸ್ತಾನದ ಆಡಳಿತದಲ್ಲಿ ಸೇನೆಯ ಹಸ್ತಕ್ಷೇಪ ಮತ್ತು ಭಯೋತ್ಪಾದನೆ ಕುರಿತ ಪ್ರಶ್ನೆಗಳನ್ನು ಎದುರಿಸಲಾಗದೆ ಕಾರ್ಯಕ್ರಮ ಚರ್ಚೆಯಿಂದ ದಿಢೀರ್ ಹೊರನಡೆದಿದ್ದಾರೆ.
ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೋರ್ಗನ್ ಅವರ ʼಅನ್‌ಸೆನ್ಸಾರ್ಡ್ʼ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಚರ್ಚೆಯಲ್ಲಿ ಪತ್ರಕರ್ತೆ ಬರ್ಖಾ ದತ್ ಕೂಡಾ ಭಾಗವಹಿಸಿದ್ದರು.
ಚರ್ಚೆಯಲ್ಲಿ ಖರ್ ಅವರು ಪಾಕಿಸ್ತಾನದೊಳಗೆ ಕಾರ್ಯನಿರ್ವಹಿಸುವ ಭಯೋತ್ಪಾದಕ ಸಂಘಟನೆಗಳ ಕುರಿತ ಪ್ರಶ್ನೆಗಳನ್ನು ತಪ್ಪಿಸುತ್ತಿದ್ದು, ಲಷ್ಕರ್ ಎ ತೊಯ್ಬಾ ಮತ್ತು ಜೈಶ್ ಎ ಮೊಹಮ್ಮದ್‌ನಂತಹ ಸಂಘಟನೆಗಳು ಭಯೋತ್ಪಾದಕ ಗುಂಪುಗಳೇ ಎಂದು ಬರ್ಖಾ ದತ್ ನೇರವಾಗಿ ಪ್ರಶ್ನೆ ಮಾಡಿದಾಗ ಖರ್ ಸ್ಪಷ್ಟ ಉತ್ತರ ನೀಡಲಿಲ್ಲ.
“ಕಳೆದ 20 ವರ್ಷಗಳಿಂದ ನೀವು ಇದೇ ಕಥೆಯನ್ನು ಹೇಳುತ್ತಿದ್ದೀರಿ. ನಾನು ಇದಕ್ಕೆ ಉತ್ತರಿಸಲು ಬಯಸುವುದಿಲ್ಲʼ ಎಂದು ಅವರು ಪ್ರತಿಕ್ರಿಯಿಸಿದ್ದು ನೇರ ಉತ್ತರ ನೀಡಲು ಪಿಯರ್ಸ್ ಮೋರ್ಗನ್ ಕೂಡಾ ತರಾಟೆಗೆ ತೆಗೆದುಕೊಂಡರು. ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಲೈವ್ ಸ್ಟ್ರೀಮಿಂಗ್‌ನಲ್ಲಿ ಖರ್ ಅವರ ಪರದೆ ಕಪ್ಪಾಗಿದೆ.













