Home News Cricket: ಮಹಿಳಾ ಆಯ್ಕೆ ಸಮಿತಿಗೆ ಮುಖ್ಯಸ್ಥೆಯಾಗಿ ಭಾರತದ ಮಾಜಿ ಆಲ್‌ರೌಂಡರ್‌ ಅಮಿತಾ ಶರ್ಮಾ ಆಯ್ಕೆ

Cricket: ಮಹಿಳಾ ಆಯ್ಕೆ ಸಮಿತಿಗೆ ಮುಖ್ಯಸ್ಥೆಯಾಗಿ ಭಾರತದ ಮಾಜಿ ಆಲ್‌ರೌಂಡರ್‌ ಅಮಿತಾ ಶರ್ಮಾ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

Cricket: ಭಾರತ ಮಹಿಳಾ ತಂಡದ ಮಾಜಿ ಆಲ್‌ರೌಂಡರ್‌ ಅಮಿತಾ ಶರ್ಮಾ (Amita Sharma) ಅವರು ಬಿಸಿಸಿಐನ ಮಹಿಳಾ ಆಯ್ಕೆ ಸಮಿತಿಗೆ ಮುಖ್ಯಸ್ಥೆಯಾಗಿ ( women’s selection panel) ನೇಮಕಗೊಂಡಿದ್ದಾರೆ. ಆ ಮೂಲಕ ನೀತು ಡೇವಿಡ್‌ (Neetu David) ಅವರ ಸ್ಥಾನವನ್ನು ತುಂಬಿದ್ದಾರೆ.

ಭಾನುವಾರ ಮುಂಬೈನಲ್ಲಿ ನಡೆದಿದ್ದ ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 2020 ರಿಂದಲೂ ನೀತು ಡೇವಿಡ್‌ ಅವರು ಮಹಿಳಾ ಆಯ್ಕೆ ಸಮಿತಿಯ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶ್ಯಾಮಾ ದೇ, ಜಯ ಶರ್ಮಾ ಹಾಗೂ ಶ್ರಾವಂತಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಗೆ ಇದೀಗ ಅಮಿತಾ ಶರ್ಮಾ ಸೇರ್ಪಡೆಯಾಗಿದ್ದಾರೆ.

ಮುಂಬರುವ ಮಹಿಳಾ ವಿಶ್ವಕಪ್‌ ಟೂರ್ನಿಯಿಂದ ಅಮಿತಾ ಶರ್ಮಾ ಅವರು ತಮ್ಮ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಸೆಪ್ಟಂಬರ್‌ 30 ರಿಂದ ನವೆಂಬರ್‌ 2ರ ವರೆಗೂ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದೆ.