Home News ಕಾಡುಹಂದಿ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದಾಗ ಅರಣ್ಯ ಇಲಾಖೆ ದಾಳಿ | ಮೂವರ ಬಂಧನ

ಕಾಡುಹಂದಿ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದಾಗ ಅರಣ್ಯ ಇಲಾಖೆ ದಾಳಿ | ಮೂವರ ಬಂಧನ

Hindu neighbor gifts plot of land

Hindu neighbour gifts land to Muslim journalist

ಉತ್ತರಕನ್ನಡ : ಕಾಡು ಹಂದಿ ಬೇಟೆಯಾಡಿ ಮನೆಯಲ್ಲಿ ಮಾಂಸ ಮಾಡಿ ಬೇಯಿಸುತ್ತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಅಂಕೋಲಾ ತಾಲೂಕಿನ ಅಗಸೂರು ಗ್ರಾ.ಪಂ ವ್ಯಾಪ್ತಿಯ ಈರಾನ ಮೂಲೆಯಲ್ಲಿ ನಡೆದಿದೆ.

ಈರಾನ ಮೂಲೆ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ರಾಕು ಗೌಡ, ಶಾಂತಾ ಗಣಪತಿ ಗೌಡ, ಗಣಪತಿ ಸುಕ್ರು ಗೌಡ ಬಂಧಿತ ಆರೋಪಿಗಳು. ವನ್ಯಜೀವಿ ಸಂರಕ್ಷಣಾ ಖಾಯಿದೆ 1972 ರ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗಿದೆ.

ಕಾಡು ಹಂದಿಯ ಮಾಂಸ , ತಲೆಬಾಗ , ದೇಹ ಮತ್ತು ಹಂದಿ ಹಿಡಿಯಲು ಬಳಸಿದ ತಂತಿಯ ಉರುಳನ್ನು ವಶಕ್ಕೆ ಪಡೆದಿದ್ದಾರೆ.

ಡಿಎಫ್ಓ ವಸಂತ ರೆಡ್ಡಿ , ಎಸಿಎಫ್ ಮಂಜುನಾಥ ನಾವಿ ಮಾರ್ಗದರ್ಶನದಲ್ಲಿ ಆರ್‌ಎಪ್‌ಓ ರಾಘವೇಂದ್ರ ಮಳ್ಳಪ್ಪನವರ, ಡಿಆರ್‌ಎಪ್‌ಓಗಳಾಸ ಮಲ್ಲಿಕಾರ್ಜುನ ಅಂಗಡಿ, ರಾಘವೇಂದ್ರ ಜೀರಗಾಳೆ, ರತೀಶ ನಾಯಕ, ಗೌಡಪ್ಪ ಅಂಗಡಿ, ಅರುಣ ನಡುಕಟ್ಟಿನ, ಅರಣ್ಯ ರಕ್ಷಕರಾದ ವೆಂಕಟೇಶ ಗುತ್ತೇಗಾರ, ಅಬಲಪ್ಪಾ ರುದ್ರಪ್ಪ ಪಾಟೀಲ್, ಪ್ರಶಾಂತ , ಚೆನ್ನಪ್ಪ ಲಮಾಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು