Home News Rastrapati Bhavan: ದೇಶದ ಇತಿಹಾಸದಲ್ಲೇ ಮೊದಲು – ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ ಮದುವೆ!! ರಾಜಕಾರಣಿಗಳ, ಉದ್ಯಮಿಗಳ,...

Rastrapati Bhavan: ದೇಶದ ಇತಿಹಾಸದಲ್ಲೇ ಮೊದಲು – ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ ಮದುವೆ!! ರಾಜಕಾರಣಿಗಳ, ಉದ್ಯಮಿಗಳ, ಸೆಲೆಬ್ರಿಟಿಗಳದ್ದಲ್ಲ, ಮತ್ಯಾರದ್ದು?

Hindu neighbor gifts plot of land

Hindu neighbour gifts land to Muslim journalist

Rastrapati Bhavan: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನವು ಮದುವೆ ಸಮಾರಂಭವೊಂದಕ್ಕೆ ಸಾಕ್ಷಿಯಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ!! ಹಾಗಂತ ಯಾವ ರಾಜಕಾರಣಿಗಳ ಮಕ್ಕಳದ್ದು, ಸೆಲೆಬ್ರಿಟಿಗಳದ್ದು, ನಿಯಮಿಗಳದ್ದು ಅಲ್ಲ. ಹಾಗಿದ್ರೆ ಯಾರದ್ದು ಆ ಮದುವೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ.

ರಾಷ್ಟ್ರಪತಿ ಭವನವು ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿ ಕಾರ್ಯನಿರ್ವಹಿಸುತ್ತದೆ. ವಿದೇಶಿ ಗಣ್ಯರು ಅಧಿಕೃತ ಭೇಟಿಗಾಗಿ ದೇಶಕ್ಕೆ ಬಂದಾಗ ರಾಷ್ಟ್ರಪತಿ ಭವನದಲ್ಲಿ ಉಳಿಯುತ್ತಾರೆ. ಆದರೆ ಈಗ ಇದೇ ಮೊದಲ ಬಾರಿಗೆ ಎಂಬಂತೆ ರಾಷ್ಟ್ರಪತಿ ಭವನದಲ್ಲಿ ಮದುವೆ ನಡೆಯಲಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಅಧಿಕಾರಿ ಪೂನಂ ಗುಪ್ತಾ ಅವರು ಈ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ.

ಹೌದು, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಅಧಿಕಾರಿ ಪೂನಂ ಗುಪ್ತಾ ಅವರ ಮದುವೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ರಾಷ್ಟ್ರಪತಿ ಮುರ್ಮು ಅವರು ಗುಪ್ತಾ ಅವರ ಕಾರ್ಯವೈಖರಿಯಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಹಾಗಾಗಿ ರಾಷ್ಟ್ರಪತಿ ಭವನದ ಆವರಣದಲ್ಲಿರುವ ಮದರ್ ತೆರೆಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ವಿವಾಹ ಸಮಾರಂಭವನ್ನು ನಡೆಸಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಯಾರು ಈ ಪೂನಂ ಗುಪ್ತಾ ?

ಸಿಆರ್‌ಪಿಎಫ್‌ನಲ್ಲಿ ಸಹಾಯಕ ಕಮಾಂಡೆಂಟ್ ಆಗಿರುವ ಪೂನಂ ಗುಪ್ತಾ, ಪ್ರಸ್ತುತ ರಾಷ್ಟ್ರಪತಿ ಮುರ್ಮು ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೂನಂ ಗಣಿತಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದಿಂದ BEd ಪದವಿ ಪಡೆದುಕೊಂಡಿದ್ದಾರೆ. 2018ರ ಯುಪಿಎಸ್‌ಸಿ ಸಿಆರ್‌ಪಿಎಫ್‌ ಪರೀಕ್ಷೆಯಲ್ಲಿ 81ನೇ Rank ಪಡೆದಿದ್ದಾರೆ. ಬಿಹಾರದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಪೂನಂ ಆ ಬಳಿಕ ಕಠಿಣ ಪ್ರದೇಶಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆದು ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲೂ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪೂನಂ, ಆಗಾಗ್ಗೆ ಮಹಿಳಾ ಸಬಲೀಕರಣ ಹಾಗೂ ಸ್ಫೂರ್ತಿದಾಯಕ ಸಂದೇಶಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ.

ಇನ್ನು ಇದೇ 12ರಂದು ಗುಪ್ತಾ ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ನೇಮಕಗೊಂಡಿರುವ ಸಹಾಯಕ ಕಮಾಂಡೆಂಟ್ ಅವನೀಶ್ ಕುಮಾರ್ ಅವರನ್ನು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.